ವಾಷಿಂಗ್ಟನ್: ಇರಾನ್‌ನೊಂದಿಗಿನ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಏಷ್ಯಾದಲ್ಲಿ 1,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಅವಕಾಶ ನೀಡಿದೆ ಎಂದು ಅಮೆರಿಕ ಸೋಮವಾರ ಹೇಳಿದೆ. 


COMMERCIAL BREAK
SCROLL TO CONTINUE READING

ಇರಾನ್‌ನಿಂದ ಇತ್ತೀಚಿನ ಬೆದರಿಕೆಯ ನಂತರ ಅಮೆರಿಕದ ಈ ಹೇಳಿಕೆ ಹೊರಬಂದಿದೆ. ಇದರಲ್ಲಿ ಪರಮಾಣು ಒಪ್ಪಂದದ ಅಡಿಯಲ್ಲಿ, ವಿಶ್ವವು ತನ್ನ ಬದ್ಧತೆಗಳನ್ನು ಪೂರೈಸದಿದ್ದರೆ, ಅದು 10 ದಿನಗಳಲ್ಲಿ ಯುರೇನಿಯಂ ನಿಕ್ಷೇಪವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ 1,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಯುಎಸ್ ಘೋಷಿಸಿದ ಮೇಲೆ, ಇದು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಚೀನಾ ಎಚ್ಚರಿಸಿದೆ.


ಪಶ್ಚಿಮ ಏಷ್ಯಾದಲ್ಲಿ ವಾಯು, ನೌಕಾ ಮತ್ತು ಭೂ ಬೆದರಿಕೆಗಳನ್ನು ಎದುರಿಸಲು ಸೈನಿಕರನ್ನು ಕಳುಹಿಸಲಾಗುತ್ತಿದೆ ಎಂದು ಕಾರ್ಯಕಾರಿ ರಕ್ಷಣಾ ಸಚಿವ ಪ್ಯಾಟ್ರಿಕ್ ಶಾನಹನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಾನಹನ್, "ಇತ್ತೀಚಿನ ಇರಾನಿನ ದಾಳಿಗಳು ಇರಾನಿನ ಪಡೆಗಳು ಮತ್ತು ಅದರ ಸೂಚನೆಯಂತ ಕಾರ್ಯ ನಿರ್ವಹಿಸುತ್ತಿರ್ವ ಸಮೂಹದ ಪ್ರತಿಕೂಲ ನಡವಳಿಕೆಯ ಬಗ್ಗೆ ಪಡೆದ ಗುಪ್ತಚರ ಮಾಹಿತಿಯನ್ನು ದೃಢಪಡಿಸಲಾಗಿದೆ, ಇದು ಅಮೆರಿಕಾದ ಕಾರ್ಮಿಕರಿಗೆ ಮತ್ತು ಪ್ರದೇಶದಾದ್ಯಂತ ಅವರ ಹಿತಾಸಕ್ತಿಗಳಿಗೆ ಅಪಾಯ ತಂದೊಡ್ಡುವ ಬಗ್ಗೆ ಸಂಶಯ ವ್ಯಕ್ತವಾಗಿದೆ".


ಇರಾನ್‌ನೊಂದಿಗಿನ ಬಹುರಾಷ್ಟ್ರೀಯ ಪರಮಾಣು ಒಪ್ಪಂದದಿಂದ ಅಮೆರಿಕ ಹೊರಬಂದಾಗಿನಿಂದ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಏತನ್ಮಧ್ಯೆ, ಚೀನಾ ಗಂಭೀರ ಪರಿಣಾಮ ಎದುರಿಸಬೇಕದೀತೂ ಎಂದು ಯುಎಸ್ಗೆ ಎಚ್ಚರಿಕೆ ನೀಡಿದೆ.


ಯುಎಸ್ ಮಿಲಿಟರಿ ನಿಯೋಜನೆಗೆ ಚೀನಾ ಆಕ್ಷೇಪ:
ಪಶ್ಚಿಮ ಏಷ್ಯಾದಲ್ಲಿ 1,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಬಗ್ಗೆ ಯುಎಸ್ ಘೋಷಿಸುತ್ತಿದ್ದಂತೆ, ಚೀನಾ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಈ ರೀತಿಯ ಪರಮಾಣು ಒಪ್ಪಂದದಿಂದ ಹೊರಬರಬಾರದು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇರಾನ್‌ಗೆ ಮನವಿ ಮಾಡಿದರು.