ಸಿಡ್ನಿ: ಮೊಟ್ಟೆಯಿಂದ ತಯಾರಿಸಲಾಗುವ ಉಪಹಾರಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ. ಆದರೆ ಪ್ರತಿ ದಿನ ಮೊಟ್ಟೆ ತಿನ್ನುವುದರಿಂದ ಮಧುಮೇಹಕ್ಕೂ ಆಹ್ವಾನ ನೀಡಿದಂತಾಗುತ್ತದೆ ಎಂದು ಚೀನಾದ ವೈದ್ಯಕೀಯ ವಿವಿ ಹಾಗೂ ಕತಾರ್ ನ ಲಾಂಗಿಟ್ಯೂಡಿನಲ್ ಸಂಶೋಧಕರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದಿನವೊಂದಕ್ಕೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವಿಸುವವರಿಗೆ ಮಧುಮೇಹ ಎದುರಾಗುವ ಸಾಧ್ಯತೆ ಶೇ.60 ರಷ್ಟು ಹೆಚ್ಚಾಗಿರುತ್ತದೆ, ­ಪ್ರಮುಖವಾಗಿ ಮಹಿಳೆಯರಲ್ಲಿ ಈ ಪ್ರಮಾಣ ಹೆಚ್ಚು ಎಂದು (1991-2009) ವರೆಗೆ ನಡೆದ ಚೀನಾದ ವೈದ್ಯಕೀಯ ವಿವಿ ಹಾಗೂ ಕತಾರ್ ನ ಲಾಂಗಿಟ್ಯೂಡಿನಲ್ ಅಧ್ಯಯನದಿಂದ ತಿಳಿದುಬಂದಿದೆ.


ಈ ಅಧ್ಯಯನ ವರದಿಯಲ್ಲಿ ತೊಡಗಿಸಿಕೊಂಡಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಮಿಂಗ್ ಲಿ ಮಾತನಾಡಿ, ಮಧುಮೇಹದ ಏರಿಕೆ ಹೆಚ್ಚುತ್ತಿರುವ ಆತಂಕವಾಗಿದೆ ಎಂದು ಹೇಳಿದ್ದು


ಡಯೆಟ್ ಎನ್ನುವುದು ಟೈಪ್2 ಮಧುಮೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಾರಣವಾಗಲಿದೆ, ಡಯೆಟ್ ನ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಪ್ರಸ್ತುತ ಮಧುಮೇಹದ ಬೆಳವಣಿಗೆಯ ಬಗ್ಗೆ ಅರಿವುದು ಅತ್ಯಂತ ಮುಖ್ಯ ಎಂದು ಮಿಂಗ್ ಅಭಿಪ್ರಾಯಪಟ್ಟಿದ್ದಾರೆ.


ಚೀನಾದಲ್ಲಿ 1991 ರಿಂದ 2009 ವರೆಗೆ ಮೊಟ್ಟೆ ಸೇವನೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈ ಅವಧಿಯಲ್ಲಿ ಮೊಟ್ಟೆ ಸೇವನೆ ಮಾಡುವವರ ಸಂಖ್ಯೆ ದ್ವಿಗುಣಗೊಂಡಿದೆ ಎನ್ನುತ್ತದೆ ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರೀಷನ್ ವರದಿ ಪ್ರಕಟಿಸಿದೆ.


ಚೀನಿಯರಲ್ಲಿ ಮೊಟ್ಟೆಯನ್ನು ತಿನ್ನುವುದು ಹಾಗೂ ಮಧುಮೇಹಕ್ಕೂ ಇರುವ ನಂಟು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ, ಇನ್ನೂ ಹೆಚ್ಚಿನ ಅಂಶಗಳೆಡೆಗೆ ಸಂಶೋಧನೆ ನಡೆಯುವುದು ಅಗತ್ಯ ಎಂದು ಸಂಶೋಧಕರು ಹೇಳಿದ್ದಾರೆ. ಚೀನಾ ಹೆಲ್ತ್-ನ್ಯೂಟ್ರಿಷನ್ ಸಮೀಕ್ಷೆಯಲ್ಲಿ 8,545 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.