Turkish Ancient Temples: ಐತಿಹಾಸಿಕವಾಗಿ ಟರ್ಕಿಯಲ್ಲಿ ಒಂದು ಪ್ರಮುಖ ಆವಿಷ್ಕಾರವನ್ನು ಮಾಡಲಾಗಿದೆ. ಪುರಾತತ್ವ ತಜ್ಞರು ಪೂರ್ವ ಟರ್ಕಿಯ ವ್ಯಾನ್ ಜಿಲ್ಲೆಯ ಪುರಾತನ ಕೋಟೆಯ ಉತ್ಖನನದಲ್ಲಿ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ. ಈ ದೇವಾಲಯವು ರಾಜ ಮಿನುವಾ ಅವರ ಕಾಲದ್ದು ಎಂದು ಹೇಳಲಾಗುತ್ತಿದೆ. ರಾಜ ಮಿನುವಾಗೆ ಸೇರಿದ ಮತ್ತೊಂದು ದೇವಾಲಯವನ್ನು ಪುರಾತತ್ತ್ವ ಶಾಸ್ತ್ರಜ್ಞರು ಈ ಹಿಂದೆ ಪತ್ತೆ ಮಾಡಿದ್ದರು.


COMMERCIAL BREAK
SCROLL TO CONTINUE READING

ವಾಸ್ತವವಾಗಿ ಟರ್ಕಿಯಲ್ಲಿ ಪ್ರಾಚೀನ ಕೋಟೆಯ ಉತ್ಖನನ ನಡೆಯುತ್ತಿದೆ. ಈ ಕೋಟೆಯನ್ನು ಕ್ರಿಸ್ತ ಪೂರ್ವ 8 ನೇ ಶತಮಾನದಲ್ಲಿ ರಾಜ ಮಿನುವಾ ನಿರ್ಮಿಸಿದನು ಎಂದು ಹೇಳಲಾಗುತ್ತಿದೆ. ಈ ಕೋಟೆಯ ಆಧುನಿಕ ಹೆಸರು 'ಕೋರ್ಝುಟ್'.


ಇದನ್ನೂ ಓದಿ: ಮತ್ತೆ ಹೆಚ್ಚಿದ ಪರಮಾಣು ಯುದ್ಧದ ಭೀತಿ..!


ಟರ್ಕಿ ಸರ್ಕಾರದ ಅನುಮೋದನೆಯ ನಂತರ ಉತ್ಖನನ ಕಾರ್ಯವನ್ನು ಮಾಡಲಾಗುತ್ತಿದೆ.


ಟರ್ಕಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯದ ಅನುಮತಿಯ ನಂತರ, ಈ ಕೋಟೆಯನ್ನು ವ್ಯಾನ್ ಮ್ಯೂಸಿಯಂನಿಂದ ಉತ್ಖನನ ಮಾಡಲಾಗುತ್ತಿದೆ. ಉತ್ಖನನದ ಸಮಯದಲ್ಲಿ ಅನೇಕ ಪ್ರಮುಖ ವಿಷಯಗಳು ಪತ್ತೆಯಾಗಿವೆ.


ವ್ಯಾನ್ ಯುಝುಂಕು ಯಿಲ್ ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಪ್ರೊಫೆಸರ್ ಸಬಹಟ್ಟಿನ್ ಅರ್ಡೋನ್ ನೇತೃತ್ವದಲ್ಲಿ ಈ ಉತ್ಖನನ ಕಾರ್ಯ ನಡೆಯುತ್ತಿದೆ. ಟರ್ಕಿ ಸರ್ಕಾರವೂ ಈ ಕಾರ್ಯಕ್ಕೆ ಹಣ ಮಂಜೂರು ಮಾಡಿದೆ. ಆದರೆ, ಚಳಿಗಾಲದ ಹಿನ್ನೆಲೆಯಲ್ಲಿ ಕೋಟೆಯಲ್ಲಿ ಉತ್ಖನನ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.


ಪ್ರಾಚೀನ ದೇವಾಲಯ ಹೇಗಿದೆ?


ಪುರಾತತ್ವ ತಜ್ಞರು ಕಂಡುಹಿಡಿದ ಈ ದೇವಾಲಯವನ್ನು ಕಾರ್ಬೆಲ್ಲಿಂಗ್ ತಂತ್ರದಿಂದ ನಿರ್ಮಿಸಲಾಗಿದೆ. ಅದರಲ್ಲಿ ಕುಂಬಾರಿಕೆ ತುಣುಕುಗಳು ಮತ್ತು ಲೋಹದ ಕಲಾಕೃತಿಗಳು ಸಹ ಕಂಡುಬಂದಿವೆ.


ಇದನ್ನೂ ಓದಿ: ಕಾನೂನಾತ್ಮಕವಾಗಿ ಅರುಣಾಚಲ ಪ್ರದೇಶವನ್ನು ನಿಯಂತ್ರಿಸುತ್ತಿರುವ ಭಾರತ; ಬಾಯಿ ಮಾತಲ್ಲಿ ತನ್ನದೆನ್ನುತ್ತಿದೆ ಚೀನಾ


ಪುರಾತತ್ವ ವಿಭಾಗದ ಪ್ರೊಫೆಸರ್ ಸಬಹಟ್ಟಿನ್ ಅರ್ಡೋನ್ ಪ್ರಕಾರ, “ಈ ದೇವಾಲಯವನ್ನು ರಾಜ ಮಿನುವಾ ನಿರ್ಮಿಸಿದನೆಂದು ನಾವು ಭಾವಿಸುತ್ತೇವೆ. ದೇವಸ್ಥಾನದ ಬಳಿ ಸಮಾಧಿಯೂ ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಾಚೀನ ಕಾಲದ ಪಾತ್ರೆಗಳು ಸಹ ಕಂಡುಬಂದಿವೆ. ಈಗಾಗಲೇ ಪತ್ತೆಯಾಗಿರುವ ಪಾತ್ರೆಗಳು ಮಧ್ಯಯುಗದವುಗಳಾಗಿವೆ. ಕೋಟೆಯ ಹೊರಗೆ ಸ್ಮಶಾನವೂ ಕಂಡುಬಂದಿದೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.