ಬರ್ಲಿನ್: ಚಾನ್ಸೆಲರ್ ಎಂಜೆಲಾ ಮಾರ್ಕೆಲ್ಗೆ ಈಗ ತನ್ನ ಪಕ್ಷದ  ಕನ್ಸರ್ವೇಟಿವ್ ಬ್ಲಾಕ್ ನಲ್ಲಿ  ಪ್ರಜಾಪ್ರಭುತ್ವವಾದಿ ಎಡಪಂಥಿಯ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.ಮತ್ತು ಮಾರ್ಕೆಲ್ ಕೂಡ ಅದೇ ರೀತಿಯಲ್ಲಿ ನಡೆಯುತ್ತಿರುವುದು ಕೂಡ ಮತ್ತೊಮ್ಮೆ ಮೈತ್ರಿ ರಾಜಕಾರಣಕ್ಕೆ ಅದು ಆಹ್ವಾನ ನೀಡಿದೆ ಎಂದು ಹೇಳಬಹುದು. ಆದರೆ ಅದು ವಲಸೆಯ ಕುರಿತಾದ ಮೂಲ ವಿಷಯಗಳಿಗೆ ಹೆಚ್ಚು ಒತ್ತು ನೀಡದೆ ಈ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದೆ.


COMMERCIAL BREAK
SCROLL TO CONTINUE READING

ಸ್ಥಳೀಯ ಮಾಧ್ಯಮಗಳ ವರದಿಯಂತೆ  ಜರ್ಮನಿಯ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿಯ ನಾಯಕರಾದ  ಮಾರ್ಟಿನ್ ಸುಲ್ಜ್  ಹೇಳುವಂತೆ' ನಾನು ನನ್ನ ಪಕ್ಷವು ಸಂಪ್ರದಾಯ ಪಕ್ಷಗಳೊಂದಿಗೆ ಮಾಡಿಕೊಳ್ಳುತ್ತಿರುವ 'ಮಹಾ ಮೈತ್ರಿ'ಯನ್ನು ನಾನು ಒಪ್ಪುವುದಿಲ್ಲ ಎಂದರು. ಮಾರ್ಕೆಲ್ ತಮ್ಮ ಅಲ್ಪಮತದ ಸರ್ಕಾರವನ್ನು ಉಳಿಸಿಕೊಳ್ಳಲು ಈ ಹೊಂದಾಣಿಕೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.ಶುಲ್ಜ್ ಈ ಹಿಂದೆ ಈ ಮಹಾ ಮೈತ್ರಿಯ ಸಾಧ್ಯತೆಯನ್ನು ಅಲ್ಲಗಳಿದಿದ್ದರು.ಈ ಮಹಾ ಮೈತ್ರಿಯ ಕುರಿತು ಪ್ರತಿಕ್ರಿಯಿಸಿರುವ ಮಾರ್ಕೆಲ್ ನಾವೆಲ್ಲರೂ ಕೂಡಿ ಕಾರ್ಯನಿರ್ವಹಿಸೋಣ,ಈ ಹಿಂದೆಯೂ ಕೂಡಾ ಮಹಾ ಮೈತ್ರಿಯ ನೇತೃತ್ವದಲ್ಲಿ ಹಲವಾರು ದಶಕಗಳ ಅವಧಿಯಲ್ಲಿ  ಕಾರ್ಮಿಕರರಿಗೆ  ಹಲವಾರು ಸುಧಾರಣೆಗಳನ್ನು ಸರ್ಕಾರದ ಸುಸ್ಥಿರ ಬಜೆಟ್  ಮೂಲಕ ಬಂದಿವೆ ಎಂದರು.


ಇತ್ತೀಚಿಗೆ ಜರ್ಮನಿಯ ರಾಜಕಾರಣವು ನಿರಾಶ್ರಿತರ ಸಮಸ್ಯೆ ಹಾಗೂ ಪರಿಸರಕ್ಕೆ ಸಂಬಂಧಿಸಿದ  ಕಾನೂನುಗಳಿಂದ ಅಸ್ಥಿರತೆ ಉಂಟಾಗಿತ್ತು. ಸದ್ಯ ಉಂಟಾಗಿರುವ ಅಸ್ಥಿರತೆಯನ್ನು ಹೋಗಲಾಡಿಸಲು ಅದು ಮೈತ್ರಿ ಮಾಡಿಕೊಳ್ಳಬೇಕಾಗಿದೆ .ಆದ್ದರಿಂದ  ಈಗ ಎಸ್ ಪಿ ಡಿ ಯೊಂದಿಗಿನ ಮೈತ್ರಿ ಅದು ಕೈಗೂಡುತ್ತೋ ಇಲ್ಲವೋ ಎನ್ನುವುದನ್ನು ನಾವು  ಕಾದು ನೋಡಬೇಕಾಗಿದೆ.ಒಂದು ವೇಳೆ ಈ ಮೈತ್ರಿ ಸಾಧ್ಯವಾಗದಿದ್ದರೆ ಅದು  ಅಲ್ಪಮತದ ಸರ್ಕಾರವಾಗಿ ಉಳಿಯಬೇಕು ಇಲ್ಲವೇ ಹೊಸ ಚುನಾವಣೆಯನ್ನು ಎದುರಿಸಬೇಕಾಗುತ್ತದೆ ಎನ್ನುವ ವಿಚಾರಗಳು ಮಾರ್ಕೆಲ್ ಮುಂದಿರುವ ಆಯ್ಕೆಗಳಾಗಿವೆ.