ನವದೆಹಲಿ: ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪಾಕಿಸ್ತಾನದ ಭದ್ರತಾ ನೆರವನ್ನು ನಿಲ್ಲಿಸಿ ತನ್ನ ಎಲ್ಲಾ ಮಿಲಿಟರಿ ನೆರವನ್ನು ಹಿಂಪಡೆಯುವ ಮೂಲಕ ಪಾಕಿಸ್ತಾನಕ್ಕೆ ಮತ್ತೊಂದು ಪ್ರಮುಖ ಹೊಡೆತವನ್ನು ಅಮೇರಿಕ ನೀಡಿದೆ. ಅಷ್ಟೇ ಅಲ್ಲದೆ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯ ಮೇಲೆ ಪಾಕಿಸ್ತಾನವನ್ನು ವಿಶೇಷ ಕಣ್ಗಾವಲು ಪಟ್ಟಿಯಲ್ಲಿ ಇರಿಸಿದೆ. ಪಾಕಿಸ್ತಾನದ ಭೂಮಿಗಳಿಂದ ಭಯೋತ್ಪಾದನೆಯನ್ನು ಅಂತ್ಯಗೊಳಿಸಲು ವಿಫಲವಾದ ಕಾರಣದಿಂದಾಗಿ ಹೀಗೆ ಮಾಡಲಾಗುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನ ಹಕ್ಕಾನಿ ನೆಟ್ವರ್ಕ್ ಮತ್ತು ಅಫಘಾನ್ ತಾಲಿಬಾನ್ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮಿಲಿಟರಿ ನೆರವು ಅಮಾನತುಗೊಳ್ಳಲಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೊರಡಿಸಿದ ಹೇಳಿಕೆ ತಿಳಿಸಿದೆ. ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಸರ್ಕಾರ ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಳ್ಳದ ಹೊರತು, ಮಿಲಿಟರಿ ನೆರವು ನೀಡಲಾಗುವುದಿಲ್ಲ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಹೈದರ್ ನಾವರ್ಟ್ ಸ್ಪಷ್ಟಪಡಿಸಿದರು ಅದೇ ಸಮಯದಲ್ಲಿ, ಪಾಕಿಸ್ತಾನದ ತೀವ್ರವಾದ ಧಾರ್ಮಿಕ ಸ್ವಾತಂತ್ರ್ಯಉಲ್ಲಂಘನೆಗಾಗಿ ಪಾಕಿಸ್ತಾನವನ್ನು ವಿಶೇಷ ಕಣ್ಗಾವಲು ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ಪಾಕಿಸ್ತಾನವು ಈ ಪಟ್ಟಿಯಲ್ಲಿ ಸೇರಿದ ಮೊದಲ ದೇಶವಾಗಿದೆ. 2016 ರ ವಿಶೇಷ ನಿಯಮದಿಂದ ಈ ವರ್ಗವನ್ನು ರಚಿಸಲಾಗಿದೆ.



ಹೊಸ ವರ್ಷದ ಮೊದಲ ದಿನದಂದು ಮಾಡಿದ ಟ್ವೀಟ್ನಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ಸುಳ್ಳು ಮತ್ತು ಭಯೋತ್ಪಾದಕರನ್ನು ಭದ್ರಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.