ನವದೆಹಲಿ: ಸುಮಾರು ಎರಡು ವರ್ಷಗಳ ಕಾಲ ಕೊರೊನಾದಿಂದ ಬಳಲಿ ಬೆಂಡಾಗಿದ್ದ ಜನತೆಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ.


COMMERCIAL BREAK
SCROLL TO CONTINUE READING

ಹೌದು, ಈಗ ಬಂದಿರುವ ಹೊಸ ಮಾಹಿತಿ ಪ್ರಕಾರ ಹೊಸ ಕೊರೊನಾ ರೂಪಾಂತರಿಯೊಂದು ಬ್ರಿಟನ್ ನಲ್ಲಿ ಪತ್ತೆಯಾಗಿದೆ.ಈಗ ಬಂದಿರುವ ಹೊಸ ರೂಪಾಂತರಿಗೆ ಎರಿಸ್‌ ಎಂದು ಹೆಸರಿಸಲಾಗಿದ್ದು ,ಇದು ಹೊಸ ರೂಪಾಂತರಿಯಾಗಿರುವ ಇಜಿ 5.1 ರ ಭಾಗವಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಅರಳಿ ನಿಂತ ಬಣ್ಣಬಣ್ಣದ ಹೂಗಳ ಸಾಮ್ರಾಜ್ಞ


ಸೋಂಕು ಪ್ರಕರಣ ಹೆಚ್ಚಿಸಿದ್ದ ಒಮಿಕ್ರಾನ್‌ ರೂಪಾಂತರಿಯ ಉಪತಳಿಯಾಗಿರುವ ಈ ಎರಿಸ್‌, ಅಷ್ಟೇ ಪರಿಣಾಮಕಾರಿಯಾಗಿ ರಾಷ್ಟ್ರಾದ್ಯಂತ ಸೋಂಕು ಹೆಚ್ಚಲು ಕಾರಣವಾಗುತ್ತಿದೆ ಎಂದು ಬ್ರಿಟನ್‌ ವೈದ್ಯಕೀಯ ತಜ್ಞರ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Gyanvapi Survey: ಜ್ಞಾನವಾಪಿ ಸಮೀಕ್ಷೆಯ ವೇಳೆ ಹಿಂದೂಗಳ ಪಾಲಿಗೆ ಸಿಕ್ತು ಬಹುದೊಡ್ಡ ಸಾಕ್ಷಿ


ಬ್ರಿಟನ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಾರದಿಂದ ವಾರಕ್ಕೆ ಗಣನೀಯವಾಗಿ ಹೆಚ್ಚುತ್ತಲೇ ಇದೆ.ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಶೇ.14.6ರಷ್ಟು ಪ್ರಕರಣಗಳು ಎರಿಸ್‌ ರೂಪಾಂತರಿಯದ್ದೇ ಆಗಿವೆ ಎನ್ನಲಾಗಿದೆ.ಇದು ದೇಶದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ 2ನೇ ರೂಪಾಂತರಿಯೂ ಆಗಿದೆ ಎಂದು ದೃಢಪಟ್ಟಿದೆ.


ಎರಿಸ್‌ ದೃಢಪಟ್ಟವರಲ್ಲಿ ಹೆಚ್ಚಿನವರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ಎದುರಾಗಿದೆ.ವಯಸ್ಸಾದವರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿ ಮಾಡಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.