ಸಿಯೋಲ್: ದಕ್ಷಿಣ ಕೊರಿಯಾ (South Korea)ದಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ವರದಿಯಾಗಿವೆ. ಗ್ಯಾಂಗ್‌ವಾನ್ ಪ್ರಾಂತ್ಯದ ಜಮೀನಿನಲ್ಲಿ ಮೂರು ಸತ್ತ ಹಂದಿಗಳನ್ನು ಪೋಸ್ಟ್ ಮಾರ್ಟಂ ಮಾಡಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ (Swine Flue) ಸೋಂಕು ಕಂಡುಬಂದಿದೆ ಎಂದು ಹೇಳಲಾಗಿದ್ದು ಇದರ ನಂತರ 1500 ಹಂದಿಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ.


LOCKDOWN ಅಥವಾ ಯಾವುದೇ ನಿರ್ಬಂಧವಿಲ್ಲದೆ Coronavirus ಮೇಲೆ ಗೆಲುವು ಸಾಧಿಸಿದೆ ಈ ದೇಶ


COMMERCIAL BREAK
SCROLL TO CONTINUE READING

ಕಳೆದ ವರ್ಷ 400,000 ಹಂದಿಗಳನ್ನು ಕೊಲ್ಲಲಾಯಿತು!
ಕೃಷಿ ಸಚಿವಾಲಯದ ಸೂಚನೆಯಂತೆ ಅಧಿಕಾರಿಗಳು ಜಮೀನಿನ 10 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ 1500 ಹಂದಿಗಳನ್ನು ಕೊಂದಿದ್ದಾರೆ.  ಈ ಹಂದಿಗಳಿಂದ ಮನುಷ್ಯರಿಗೆ ಜ್ವರ (Fever) ಹರಡುವ ಸಾಧ್ಯತೆಯಿಲ್ಲದಿದ್ದರೂ, ಇತರ ಹಂದಿಗಳು ಸುಲಭವಾಗಿ ಸೋಂಕಿಗೆ ಒಳಗಾಗಬಹುದು ಎಂದು ಹೇಳಲಾಗಿದೆ. ಕಳೆದ ವರ್ಷ, 14 ಸಾಕಣೆ ಕೇಂದ್ರಗಳಲ್ಲಿ ಜ್ವರ ಹರಡಿತು, ನಂತರ ಸುಮಾರು 400,000 ಹಂದಿಗಳನ್ನು ಕೊಲ್ಲಲಾಯಿತು ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.


ಕೊರೋನಾ ವೈರಸ್ ಭೀತಿ: ಈ ನಾಲ್ಕು ದೇಶಗಳ ನಾಗರಿಕರಿಗೆ ವೀಸಾ ರದ್ದುಗೊಳಿಸಿದ ಭಾರತ


ಅಕ್ಟೋಬರ್ 2019 ರಿಂದ ಹಂದಿ (Pig) ಸಾಕಾಣಿಕೆ ಕೇಂದ್ರಗಳಲ್ಲಿ ಜ್ವರಕ್ಕೆ ಸಂಬಂಧಿಸಿದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲವಾದರೂ, ಉತ್ತರ ಕೊರಿಯಾ ಗಡಿಯಲ್ಲಿ ಸಂಚರಿಸುವ 750 ಕಾಡುಹಂದಿಗಳಲ್ಲಿ ಸೋಂಕು ಪತ್ತೆಯಾಗಿದೆ. ಆಫ್ರಿಕನ್ ಹಂದಿ ಜ್ವರ ಪ್ರಕರಣವನ್ನು ದೃಢಪಡಿಸಿದ ನಂತರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಕೊರಿಯಾ ಜರ್ಮನಿಯಿಂದ ಹಂದಿಮಾಂಸ ಆಮದನ್ನು ನಿಷೇಧಿಸಿತು.