ನವದೆಹಲಿ: ಪ್ಲಾಸ್ಟಿಕ್ ಸರ್ಜರಿಯ ಅಡ್ಡಪರಿಣಾಮದಿಂದ ಅರ್ಜೆಂಟೀನಾದ ಪ್ರಸಿದ್ಧ ನಟಿ, ರೂಪದರ್ಶಿ ಮತ್ತು ಟಿವಿ ನಿರೂಪಕಿ ಸಿಲ್ವಿನಾ ಲೂನಾ ದುರಂತ ಅಂತ್ಯ ಕಂಡಿದ್ದಾರೆ. ನಟಿಯ ಅಕಾಲಿಕ ನಿಧನವು ಅವರ ಕೋಟ್ಯಂತರ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ.


COMMERCIAL BREAK
SCROLL TO CONTINUE READING

43 ವರ್ಷದ ಈ ನಟಿ 2011ರಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಆಕೆಯ ವಕೀಲರಾದ ಫರ್ನಾಂಡೋ ಬರ್ಲಾಂಡೋ ಅವರು ನಟಿಯ ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ದೀರ್ಘಕಾಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಳು. ಆಕೆ ಇನ್ನೂ ಬದುಕುವುದು ಕಷ್ಟವೆಂದು ವೈದ್ಯರು ನಟಿಯ ಕುಟುಂಬಸ್ಥರಿಗೆ ತಿಳಿಸಿದ್ದರು. ಹೀಗಾಗಿ ಕುಟುಂಬ ಸದಸ್ಯರು ಆಕೆಯ ಜೀವ ಬೆಂಬಲದಿಂದ ಸಂಪರ್ಕ ಕಡಿತಗೊಳಿಸುವಂತೆ ವೈದ್ಯರಿಗೆ ತಿಳಿಸಿದ್ದರು.   


Cancer Treatment: 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ, ಇಲ್ಲಿ ನಡೆಯಿತು ಪವಾಡ!


ಲೂನಾಗೆ 2015ರಲ್ಲಿ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿತ್ತು. ನಟಿಗೆ ಕಿಡ್ನಿ ಕಸಿಯ ಅಗತ್ಯವಿತ್ತು ಮತ್ತು ಜೀವ ಉಳಿಸಿಕೊಳ್ಳಲು ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.