Assam : ಅಸ್ಸಾಂನಲ್ಲಿ ಬಹುದಿನಗಳಿಂದ ರಣಭೀಕರ ಮಳೆ ಆಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಮತ್ತು ಒಟ್ಟಾರೆ ಪರಿಸ್ಥಿತಿ ಭೀಕರಗೊಂಡಿದೆ. 


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿ ಸುಧಾರಣೆ ಕಂಡು ಬಂದಿದ್ದರೆ ಇನ್ನೂ ಕೆಲವು ಭಾಗಗಳಲ್ಲಿ ಮಳೆ ಹಾಗೆಯೇ ಮುಂದುವರೆದಿದೆ. 


ಇದನ್ನು ಓದಿ :'Kalki 2898 AD' : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...! 


ಅಸ್ಸಾಂನಲ್ಲಿ ಒಟ್ಟಾರೆ ಪರಿಸ್ಥಿತಿ ಬೀಕರ ಗೊಂಡಿದ್ದು, 3.90 ಲಕ್ಷಕ್ಕೂ ಹೆಚ್ಚು ಜನರು ಪ್ರವಾಸದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ ಮತ್ತು 19 ಜಿಲ್ಲೆಗಳಲ್ಲಿ ಜನರ ಪರಿಸ್ಥಿತಿ ಗಂಭೀರಗೊಂಡಿದೆ. 


ಈ ಮಳೆಯಲ್ಲಿ ಪ್ರವಾಹ ಭೂಕುಸಿತ ಮತ್ತು ಚಂಡಮಾರುತದಲ್ಲಿ ಒಟ್ಟು 37 ಜನ ಸಾವನಪ್ಪಿದ್ದಾರೆ ಮತ್ತು ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಕಮ್ರೂಪ್, ತಮುಲ್ಪುರ್, ಹೈಲಕಂಡಿ, ಉದಲ್ಗುರಿ, ಹೊಜೈ, ಧುಬ್ರಿ, ಬಾರ್ಪೇಟಾ, ಬಿಸ್ವಾನಾಥ್, ನಲ್ಬಾರಿ, ಬೊಂಗೈಗಾಂವ್, ಬಕ್ಸಾ, ಕರೀಂಗಂಜ್, ದಕ್ಷಿಣ ಸಲ್ಮಾರಾ, ಗೋಲ್ಪಾರಾ, ದರ್ರಾಂಗ್, ಬಜಾಲಿ, ನಾಗಾನ್, ಕಚಾರ್ ಮತ್ತು ಕಮ್ರೂಪ್ ಜಿಲ್ಲೆಗಳಲ್ಲಿ ಒಟ್ಟು 3,90,491 ಮಂದಿ ಪ್ರವಾಹಕ್ಕೆ ಸಿಲುಕಿ ತೊಂದರೆಗೆ ಒಳಗಾಗಿದ್ದಾರೆ. ಕರೀಂಗಂಜ್ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 2.40 ಲಕ್ಷಕ್ಕೂ ಹೆಚ್ಚು ಜನರಿಗೆ ಜಲ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.


ಇದನ್ನು ಓದಿ :ಧಿಡೀರ್ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ!! ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಗೊತ್ತಾ?  


ವಿವಿಧ ಜಿಲ್ಲೆಗಳಲ್ಲಿ ಮನೆಗಳು, ದನದ ಕೊಟ್ಟಿಗೆಗಳು, ರಸ್ತೆಗಳು, ಸೇತುವೆಗಳು, ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಿವೆ ಮತ್ತು 5,000ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡುವ 100ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 125 ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.