ವಾಷಿಂಗ್ಟನ್: ಬೋಯಿಂಗ್ 737 ಜೆಟ್‌ನಷ್ಟು ದೊಡ್ಡ ಗಾತ್ರದ ಕ್ಷುದ್ರಗ್ರಹವೊಂದು ವೇಗವಾಗಿ ಭೂಮಿಯ ಕಡೆಗೆ ಚಲಿಸುತ್ತಿದೆ.  ಈ ಕುರಿತು ಮಾಹಿತಿ ನೀಡಿರುವ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ (NASA), 2020 ಆರ್‌ಕೆ 2 ಹೆಸರಿನ ಈ ಕ್ಷುದ್ರಗ್ರಹವು ಸುಮಾರು 14,942 ಮೈಲು ಪ್ರತಿಗಂಟೆ ವೇಗದಲ್ಲಿ ಭೂಮಿಯೆಡೆಗೆ ಧಾವಿಸುತ್ತಿದ್ದು, ಅಕ್ಟೋಬರ್ 7 ರಂದು ಇದು ಭೂಮಿಯ ಕಕ್ಷೆಯನ್ನು ಪ್ರವೇಶಿಸಲಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA


118-265 ಅಡಿಗಳಷ್ಟು ಅಗಲವಾಗಿದೆ ಈ ಕ್ಷುದ್ರಗ್ರಹ
ಈ ಕ್ಷುದ್ರಗ್ರಹದಿಂದ ಏನಾದರೂ ಹಾನಿ ಉಂಟಾಗಬಹುದೇ?  ಎಂಬ ಪ್ರಶ್ನೆಗೆ ಉತ್ತರಿಸಿರುವ ನಾಸಾ, ಪ್ರಾಥಮಿಕವಾಗಿ ಈ ಸಾಧ್ಯತೆಯನ್ನು ಅಲ್ಲಗಳೆದಿದೆ. ಆದರೆ, ಪ್ರಸ್ತುತ ಈ ಕ್ಷುದ್ರಗ್ರಹದ ಚಲನೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ನಾಸಾ ಹೇಳಿದೆ. ಕ್ಶುಗ್ರಗ್ರಹದ ವ್ಯಾಸವು 36-81 ಮೀಟರ್ ಆಗಿದ್ದರೆ, ಅಗಲ 118-265 ಅಡಿಗಳಷ್ಟಿರಬಹುದು ಎಂದು ನಾಸಾ ಅಂದಾಜಿಸಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಈ ಕ್ಷುದ್ರಗ್ರಹದ ಗಾತ್ರ ಒಂದು ಬೋಯಿಂಗ್ 737 ಯಾತ್ರಿ ವಿಮಾನದಷ್ಟು ದೊಡ್ಡದಾಗಿದೆ. 


ಇದನ್ನು ಓದಿ- ಎಚ್ಚರ! ಭೂಮಿ ಬಗ್ಗೆ ಹೊಸ ಭವಿಷ್ಯ ನುಡಿದ ನಾಸಾ


ಭೂಮಿಯಿಂದ ಗೋಚರಿಸುವುದಿಲ್ಲ ಈ ಕ್ಷುದ್ರಗ್ರಹ
ಆದರೆ ಇದಕ್ಕಾಗಿ ಭಯಪಡುವ ಅಗತ್ಯವಿಲ್ಲ ಎಂದು ನಾಸಾ ಹೇಳಿದೆ. ಕ್ಷುದ್ರಗ್ರಹದಿಂದ ಭೂಮಿಗೆ ಹಾನಿಯಾಗುವ ಸಾಧ್ಯತೆ ತೀರಾ ಕಡಿಮೆ. ಈ ಕ್ಷುದ್ರಗ್ರಹವನ್ನು ವಿಜ್ಞಾನಿಗಳು ಸೆಪ್ಟೆಂಬರ್ ತಿಂಗಳಲ್ಲಿಯೇ ಮೊದಲು ಬಾರಿಗೆ ಗಮನಿಸಿದ್ದರು. ಈ ಕ್ಷುದ್ರಗ್ರಹವು ಭೂಮಿಯನ್ನು ಸಮೀಪಿಸುತ್ತಿದ್ದರೂ ಅದು ಭೂಮಿಯಿಂದ ಗೋಚರಿಸುವುದಿಲ್ಲ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಈಸ್ಟರ್ನ್ ಸ್ಟ್ಯಾಂಡರ್ಡ್ ಸಮಯದ ಪ್ರಕಾರ, ಕ್ಷುದ್ರಗ್ರಹವು ಮಧ್ಯಾಹ್ನ 1.12 ಕ್ಕೆ ಮತ್ತು ಬ್ರಿಟಿಷ್ ಸಮರ ಟೈಮ್ ಅನುಸಾರ  ಸಂಜೆ 6.12 ಕ್ಕೆ ಭೂಮಿಯ ಹತ್ತಿರದಿಂದ ಹಾಯ್ದುಹೋಗಲಿದೆ.


ಇದನ್ನು ಓದಿ-ಮಂಗಳನ ಅಂಗಳದಲ್ಲಿ ಮಾನವನ ಅಸ್ತಿತ್ವ ಹುಡುಕಾಟಕ್ಕೆ ಕೌಂಟ್ ಡೌನ್ ಆರಂಭ, NASAದಿಂದ ಸಿದ್ಧತೆ


2027ರವರೆಗೆ ಯಾವುದೇ ರೀತಿಯ ಆತಂಕ ಇಲ್ಲ
ಈ ಖಗೋಳ ಘಟನೆಯ ಬಳಿಕ, ಆಗಸ್ಟ್ 2027 ರವರೆಗೆ ಯಾವುದೇ ಕ್ಷುದ್ರಗ್ರಹವು ಭೂಮಿಯ ಕಕ್ಷೆಯನ್ನು ಪ್ರವೇಶಿಸುವುದಿಲ್ಲ ಎಂದು ನಾಸಾ ಹೇಳಿದೆ. ಸೆಪ್ಟೆಂಬರ್ 24 ರಂದು, ಒಂದು ಕ್ಷುದ್ರಗ್ರಹವು ಭೂಮಿಯಿಂದ ಸುಮಾರು 22,000 ಕಿಲೋಮೀಟರ್ ದೂರದಲ್ಲಿ ಹಾಯ್ದು ಹೋಗಿತ್ತು. ಅದರ ಗಾತ್ರವು ಒಂದು ಶಾಲಾ ಬಸ್‌ಗೆ ಸಮನಾಗಿತ್ತು. ವಿಶೇಷವೆಂದರೆ, ಯುಎಸ್ ಏಜೆನ್ಸಿ ನಾಸಾ ಅಂತಹ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತದೆ ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.


ಇದನ್ನು ಓದಿ- ಮಂಗಳನ ಅಂಗಳದಲ್ಲಿ ಪುನಃ ಸಿಕ್ಕ ಜೀವನದ ಸಂಕೇತಗಳು