AstraZeneca Banned ! ಬ್ರಿಟೀಷ್-ಸ್ವೀಡಿಶ್ ಕಂಪನಿಯಾಗಿರುವ AshtraZeneca ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಕೊವಿಡ್ -19 ಲಸಿಕೆಯ ಬಳಕೆಯ ಮೇಲೆ ಡೆನ್ಮಾರ್ಕ್ ಎರಡು ವಾರಗಳ ತಡೆ ನೀಡಿದೆ. ಕೆಲ ರೋಗಿಗಳಲ್ಲಿ ಲಸಿಕೆಯ ಬಳಕೆಯಿಂದ ರಕ್ತಹೆಪ್ಪುಗಟ್ಟುವಿಕೆಯ ದೂರುಗಳು ಕೇಳಿ ಬಂದ ಹಿನ್ನೆಲೆ ಅಲ್ಲಿನ ಸರ್ಕಾರ ಈ ಹೆಜ್ಜೆಯನ್ನಿಟ್ಟಿದೆ. ಲಸಿಕೆ ಪಡೆದ ಓರ್ವ ಲಾಭಾರ್ಥಿ ಪ್ರಾಣ ಕೂಡ ಕಳೆದುಕೊಂಡಿದ್ದಾನೆ ಎಂದೂ ಕೂಡ ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಈ 8 ರಾಜ್ಯಗಳಲ್ಲಿ Coronavirus ಉಲ್ಬಣ, ಪರೀಕ್ಷೆ, ಟ್ರ್ಯಾಕ್, ಚಿಕಿತ್ಸೆಗೆ ಬಗ್ಗೆ ಕೇಂದ್ರದ ಸೂಚನೆ


ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಡೆನ್ಮಾರ್ಕ್ ಆರೋಗ್ಯ ಅಧಿಕಾರಿ ಯುರೋಪಿಯನ್ ದೇಶಗಳಲ್ಲಿಅಸ್ಟ್ರಾಜೆನೆಕಾ ಲಸಿಕೆಯ ಗಂಭೀರ ಅಡ್ಡಪರಿಣಾಮಗಳು ಬೆಳಕಿಗೆ ಬಂದಿವೆ. ಆಷ್ಟ್ರಿಯದಲ್ಲಿ ಲಸಿಕಾಕರಣದ ಬಳಿಕ ರಕ್ತ ಹೆಪ್ಪುಗಟ್ಟಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಹಾಗೂ ಹಲವು ಜನರಲ್ಲಿ ಪರಿಚಲನೆಯ ತೊಂದರೆಗಳು ಕಾಣಿಸಿಕೊಂಡಿವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಲಸಿಕೆಯ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ.


ಇದನ್ನೂ ಓದಿ-Corona Vaccine: ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಮತ್ತೆ ಸಹಾಯ ಹಸ್ತ ಚಾಚಿದ ಭಾರತ


ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಡೆನ್ಮಾರ್ಕ್ ಆರೋಗ್ಯ ಸಚಿವ ಮ್ಯಾಗ್ನಸ್ ಹ್ಯೂನಿಕ್, "ರಕ್ತ ಹೆಪ್ಪುಗಟ್ಟುವಿಕೆ ಅಷ್ಟ್ರಾಜೆನಿಕಾ ಲಸಿಕೆಯ ಬಳಕೆಯಿಂದ ಸಂಭವಿಸಿದೆ ಎಂಬ ನಿಷ್ಕರ್ಷಕ್ಕೆ ತಲಪುವುದು ಸದ್ಯದ ಪರಿಸ್ಥಿತಿಯಲ್ಲಿ ತರಾತುರಿಯಾಗಲಿದೆ. ಸದ್ಯ ನಾವು ಇಂತಹ ಪ್ರಕರಣಗಳ ವಿಶ್ಲೇಷಣೆಯಲ್ಲಿ ತೊಡಗಿದ್ದೇವೆ. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ನಾವು ವ್ಯಾಕ್ಸಿನ್ ಅನ್ನು 14 ದಿನಗಳ ಕಾಲ ನಿಷೇಧಿಸಿದ್ದೇವೆ" ಎಂದು ಹೇಳಿದ್ದಾರೆ. ಏತನ್ಮಧ್ಯೆ ಮಾನವ ಪರೀಕ್ಷೆಗಳಲ್ಲಿ ಲಸಿಕೆ ಸುರಕ್ಷಿತವಾಗಿದೆ ಎಂದು ಅಸ್ಟ್ರಾಜೆನಿಕಾ ಸ್ಪಷ್ಟಪಡಿಸಿದೆ. ವಿಜ್ಞಾನಿಗಳ ಟೆಸ್ಟಿಂಗ್ ನಲ್ಲಿಯೂ ಕೂಡ ವ್ಯಾಕ್ಸಿನ್ ಗೆ ಸಂಬಂಧಿಸಿದ ಗಂಭೀರ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂಬ ಅಂಶ ಬಹಿರಂಗಪಡಿಸಿದೆ. ಲಸಿಕೆಯ ಪ್ರಭಾವ ಅಥವಾ ದುಷ್ಪ್ರಭಾವ ಉತ್ಪಾದನೆಯ ಗುಣಮಟ್ಟದ ಮೇಲೆ ಆಧರಿಸಿದೆ ಎಂದು ಆಸ್ಟ್ರಾಜೆನಿಕಾ ಹೇಳಿದೆ.


ಇದನ್ನೂ ಓದಿ-PM Modi Mother: ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡ ಪ್ರಧಾನಿ ಮೋದಿ ತಾಯಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.