ವಿಯೆನ್ನಾ: ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಭಾವಿಸುವ ಮಸೀದಿಗಳನ್ನು (Mosques) ಮುಚ್ಚಲು ಆಸ್ಟ್ರಿಯಾ ಆದೇಶಿಸಿದೆ.  ರಾಜಕೀಯ ಉದ್ದೇಶಗಳಿಗಾಗಿ ಇಸ್ಲಾಮಿಸ್ಟ್ ನಿಯಂತ್ರಿತ ಸಂಸ್ಥೆಗಳ ಗುರಿಗಳಾಗಿರುವ ಸಾಮಾಜಿಕ ಮತ್ತು ಶಿಕ್ಷಣ ಸಂಸ್ಥೆಗಳನ್ನು ಗುರುತಿಸಲು ಮತ್ತು ನೋಂದಾಯಿಸಲು ಆಸ್ಟ್ರಿಯನ್ ಸರ್ಕಾರ (Austrian Government) ಒಂದು ಉಪಕ್ರಮವನ್ನು ಪ್ರಾರಂಭಿಸಿದೆ.


COMMERCIAL BREAK
SCROLL TO CONTINUE READING

ಭಯೋತ್ಪಾದಕ ಅಪರಾಧಗಳಿಗೆ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಜೀವಿತಾವಧಿ ಜೈಲಿನಲ್ಲಿ ಕಳೆಯುವ, ಭಯೋತ್ಪಾದನೆ-ಸಂಬಂಧಿತ ಅಪರಾಧಗಳಿಗೆ ಶಿಕ್ಷೆಗೊಳಗಾದ ಜನರು ಬಿಡುಗಡೆಯಾದ ನಂತರ ಅವರ ಮೇಲೆ ಎಲೆಕ್ಟ್ರಾನಿಕ್ ಕಣ್ಗಾವಲು ಸೇರಿದಂತೆ ಹಲವು ಪ್ರಸ್ತಾಪಗಳಿಗೆ ಆಸ್ಟ್ರಿಯಾದ ಚಾನ್ಸೆಲರ್ ಸೆಬಾಸ್ಟಿಯನ್ ಕುರ್ಜ್ ಅವರ ಸಂಪುಟ ಸಮ್ಮತಿಸಿದೆ.


ಭಯೋತ್ಪಾದಕರ ಸಹಾಯಕರಿಗೆ ಕಠಿಣ ಕಾನೂನು:
ಭಯೋತ್ಪಾದಕರಲ್ಲದವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುವಂತೆ ನಾವು 'ರಾಜಕೀಯ ಇಸ್ಲಾಂ' ಎಂಬ ಕ್ರಿಮಿನಲ್ ಅಪರಾಧವನ್ನು ರಚಿಸುತ್ತೇವೆ, ಭಯೋತ್ಪಾದಕರಲ್ಲದವರ ವಿರುದ್ಧವೂ ನಾವು ಕ್ರಮ ಕೈಗೊಳ್ಳುತ್ತೇವೆ, ಏಕೆಂದರೆ ಅವರು ಭಯೋತ್ಪಾದಕರ ಚಟುವಟಿಕೆಗಳಿಗೆ ಸಹಾಯ ಮಾಡುತ್ತಾರೆ ಎಂದು ಕುರ್ಜ್ ಕ್ಯಾಬಿನೆಟ್ ಸಭೆಯ ನಂತರ ಟ್ವೀಟ್ ಮಾಡಿದ್ದಾರೆ.  


ಮಂದಿರ ಮತ್ತು ಮಸೀದಿ ಬಗ್ಗೆ ಭಾರತ ಚಿಂತಿಸುತ್ತಿದ್ದರೆ ಸಮಯ ವ್ಯರ್ಥ-ನೌಕಾಪಡೆಯ ಮಾಜಿ ಮುಖ್ಯಸ್ಥ


ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಭಾವಿಸುವ ಮಸೀದಿಗಳನ್ನು ಮುಚ್ಚಲು ಆಸ್ಟ್ರಿಯಾ (Austria) ಆದೇಶಿಸುತ್ತದೆ. ಆಮೂಲಾಗ್ರ ಇಸ್ಲಾಮಿಸ್ಟ್‌ಗಳೊಂದಿಗೆ ಸಂಬಂಧ ಹೊಂದಿದೆಯೆಂದು ಹೇಳಲಾದ 60ಕ್ಕೂ ಹೆಚ್ಚು ವಿಳಾಸಗಳ ಮೇಲೆ ಆಸ್ಟ್ರಿಯನ್ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ, 30 ಶಂಕಿತರನ್ನು ಪ್ರಶ್ನಿಸಲು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ವಿಚಾರ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್


ವಿಯೆನ್ನಾದ (Vienna) ಹೃದಯಭಾಗದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶಿಕ್ಷೆಗೊಳಗಾದ ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಬೆಂಬಲಿಗರು ನಾಲ್ಕು ಜನರನ್ನು ಕೊಂದ ಒಂದು ವಾರದ ನಂತರ ಈ ಕಾರ್ಯಾಚರಣೆಗಳು ಬಂದವು, ಆದರೆ ಪೊಲೀಸರು ನಡೆಸಿರುವ ಈ ದಾಳಿಗೂ ಕಳೆದ ವಾರ ನಡೆದ ಘಟನೆಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.


ವಿಯೆನ್ನಾದಲ್ಲಿ ನಡೆದ ದಾಳಿಯ ನಂತರ, ಫ್ರಾನ್ಸ್‌ನ ನೈಸ್‌ನಲ್ಲಿಯೂ ದಾಳಿ ನಡೆದಿದ್ದು, ಇದರಲ್ಲಿ ಟುನೀಷಿಯನ್ ಮೂಲದ ವ್ಯಕ್ತಿಯೊಬ್ಬನನ್ನು ಕೊಲ್ಲಲಾಯಿತು. ಇಂತಹ ದಾಳಿಯ ಹಿನ್ನೆಲೆಯಲ್ಲಿ ಫ್ರಾನ್ಸ್ ಮಸೀದಿಗಳನ್ನು ಮುಚ್ಚಲು ಪ್ರಾರಂಭಿಸಿದೆ ಮತ್ತು ದ್ವೇಷವನ್ನು ಹರಡಬಹುದೆಂದು ಶಂಕಿಸಲಾಗಿರುವ ಸಂಸ್ಥೆಗಳ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ.