Baba Vanga Predictions: ಭವಿಷ್ಯ ಹೇಳುವವರು ಎಂದು ಹೇಳಿಕೊಳ್ಳುವ ಲಕ್ಷಾಂತರ ಜನರು ಪ್ರಪಂಚದಾದ್ಯಂತ ಇದ್ದಾರೆ. ಆದರೆ, ಯಾರ ಭವಿಷ್ಯವಾಣಿಗಳು ನಿಖರತೆಗೆ ಸಮೀಪವಿರುತ್ತದೋ, ಅಂತಹವರಿಗೆ ಮಾತ್ರ ಜಗತ್ತು ಗಮನ ಕೊಡುತ್ತದೆ. ಅಂತಹವರಲ್ಲಿ ಒಬ್ಬರು, ಕುರುಡು ಬಲ್ಗೇರಿಯನ್ ಮಹಿಳೆ ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಅಥವಾ ಬಾಬಾ ವೆಂಗಾ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Horse Gram: ಏಳು ದಿನಗಳಲ್ಲೇ ಪೈಲ್ಸ್‌ ಸಮಸ್ಯೆಗೆ ಪರಿಹಾರ ಬೇಕಾದ್ರೆ ʼಈʼ ಕಾಳು ಸೇವಿಸಿರಿ


ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಮರಣದ 28 ವರ್ಷಗಳ ನಂತರವೂ ಜನರ ಕುತೂಹಲವನ್ನು ಕೆರಳಿಸುತ್ತವೆ. ಎರಡನೇ ಮಹಾಯುದ್ಧ, ಜೆಕೊಸ್ಲೊವಾಕಿಯಾ ಮತ್ತು ಯುಗೊಸ್ಲಾವಿಯ ವಿಘಟನೆ, ಚೆರ್ನೋಬಿಲ್ ಪರಮಾಣು ಅಪಘಾತ, ಸ್ಟಾಲಿನ್ ಸಾವಿನ ದಿನಾಂಕ ಸೇರಿದಂತೆ ಅನೇಕ ಭವಿಷ್ಯವಾಣಿಗಳನ್ನು ಅವರು ಹೇಳಿದ್ದರು. ಅದು ನಿಜವೆಂದೂ ಸಹ ಸಾಬೀತಾಗಿತ್ತು. ಇನ್ನು ಪ್ರತಿ ವರ್ಷದ ಆರಂಭದಲ್ಲಿ ಜನರು ಬಾಬಾ ವೆಂಗಾ ಹೊಸ ವರ್ಷಕ್ಕೆ ಏನನ್ನು ಭವಿಷ್ಯ ನುಡಿದಿದ್ದಾರೆಂದು ತಿಳಿಯಲು ಬಯಸುತ್ತಾರೆ.


2025ರ ಬಾಬಾ ವೆಂಗಾ ಭವಿಷ್ಯ:
2025 ರ ಆರಂಭದಲ್ಲಿ ಅಪೋಕ್ಯಾಲಿಪ್ಸ್ ಪ್ರಾರಂಭವಾಗಬಹುದು ಎಂದು ಬಾಬಾ ವೆಂಗಾ ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ. ಈ ಭವಿಷ್ಯವಾಣಿಯು ಅವರ ಅನುಯಾಯಿಗಳು ಮತ್ತು ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡಿದೆ. 2025 ರ ವೇಳೆಗೆ ಖಂಡದ ಹೆಚ್ಚಿನ ಜನಸಂಖ್ಯೆಯನ್ನು ಧ್ವಂಸಗೊಳಿಸುವ ಯುದ್ಧವೊಂದು ಯುರೋಪಿನಲ್ಲಿ ನಡೆಯಲಿದೆ ಎಂದು ಹೇಳುತ್ತಿದೆ. ಸದ್ಯ ನಡೆಯುತ್ತಿರುವ ಘಟನೆಗಳನ್ನು ನೋಡುವುದಾದರೆ, ಇದು ಚಿಂತಿಸಬೇಕಾದ ಅಂಶವೇ ಎನ್ನಬೇಕು.


ಬಾಬಾ ವೆಂಗಾ ಯಾರು?
1911 ರಲ್ಲಿ ಜನಿಸಿದ ಬಾಬಾ ವೆಂಗಾ ಅವರ ಪೂರ್ಣ ಹೆಸರು ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ. 12 ನೇ ವಯಸ್ಸಿನಲ್ಲಿ, ಚಂಡಮಾರುತಸ ಸುಳಿಗೆ ಸಿಲುಕಿ ತನ್ನ ದೃಷ್ಟಿಯನ್ನು ಕಳೆದುಕೊಂಡರು. ಈ ಆಘಾತಕಾರಿ ಘಟನೆಯ ನಂತರ, ಆಕೆಗೆ ಭವಿಷ್ಯದ ಬಗ್ಗೆ ಗ್ರಹಿಸುವ ಸಾಮಾರ್ಥ್ಯ ಉದ್ಭವವಾಯಿತು.  


ಸಾವಿನ ಬಗ್ಗೆಯೂ ಭವಿಷ್ಯ:
1990 ರಲ್ಲಿ ಸಂದರ್ಶನವೊಂದರಲ್ಲಿ, ಬಾಬಾ ವೆಂಗಾ ಅವರು ಆಗಸ್ಟ್ 11, 1996 ರಂದು ಸಾಯುತ್ತಾರೆ ಎಂದು ಹೇಳಿದ್ದರು. ಅವರ ಮಾತಿನ ಪ್ರಕಾರವೇ, ಬಾಬಾ ವೆಂಗಾ ಆ ನಿಖರವಾದ ದಿನಾಂಕದಂದು ನಿಧನರಾದರು. ಅವರ ಮರಣದ ಹೊರತಾಗಿಯೂ, ಅವರ ನುಡಿ ಪರಂಪರೆಯು ಅಸ್ತಿತ್ವದಲ್ಲಿದೆ ಮತ್ತು ಭವಿಷ್ಯವಾಣಿಯ ಹೊಸ ವ್ಯಾಖ್ಯಾನಗಳು ಹೊರಹೊಮ್ಮುತ್ತಲೇ ಇರುತ್ತವೆ.


ಇದನ್ನೂ ಓದಿ: ಕಾಫಿಗೆ ನಿಂಬೆ ರಸ ಹಿಂಡಿ ಕುಡಿಯುವುದರಿಂದ ಈ ಮಾರಕ ಕಾಯಿಲೆ ಗುಣವಾಗುವುದು!


ಬಾಬಾ ವೆಂಗಾ ಭವಿಷ್ಯ :
ಇನ್ನು ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಕಠೋರ ಚಿತ್ರವನ್ನು ತೋರಿಸುತ್ತುವೆ. 5079 ರ ವೇಳೆಗೆ ಮಾನವೀಯತೆಯು ಸಂಪೂರ್ಣವಾಗಿ ನಿರ್ನಾಮವಾಗುತ್ತದೆ ಎಂದು ಹೇಳಿಕೊಂಡರೂ, ಪ್ರಪಂಚದ ಅಂತ್ಯವು 2025 ರಲ್ಲಿ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ, ಯುರೋಪ್‌ನಲ್ಲಿನ ಘರ್ಷಣೆಯ ಜೊತೆಗೆ, 2043 ರ ಹೊತ್ತಿಗೆ ಯುರೋಪ್ ಮುಸ್ಲಿಂ ಆಳ್ವಿಕೆಗೆ ಒಳಪಡುತ್ತದೆ ಮತ್ತು 2076 ರ ಹೊತ್ತಿಗೆ ಕಮ್ಯುನಿಸ್ಟ್ ಆಳ್ವಿಕೆಯು ಪ್ರಪಂಚದಾದ್ಯಂತ ಮರಳುತ್ತದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ. ನೈಸರ್ಗಿಕ ಘಟನೆಯಿಂದಾಗಿ ಪ್ರಪಂಚವು ಅಂತಿಮವಾಗಿ 5079 ರಲ್ಲಿ ಕೊನೆಗೊಳ್ಳುತ್ತದೆ ಎಂದು ವಂಗಾ ಭವಿಷ್ಯದಲ್ಲಿ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.