Baby girl born with 6 cm tail: ಬ್ರೆಜಿಲ್‌ನಲ್ಲಿ ಈಗಷ್ಟೇ ಜನಿಸಿದ ಹೆಣ್ಣು ಮಗುವಿನ ದೇಹದಲ್ಲಿ ಬಾಲದಂತಹ ಅಂಗ ಕಾಣಿಸಿಕೊಂಡಿದ್ದು, ಇದನ್ನು ಕಂಡ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಸುಮಾರು 6 ಸೆಂಟಿ ಮೀಟರ್ ಉದ್ದವಿರುವ ಬಾಲ ಚರ್ಮದಿಂದ ಮುಚ್ಚಲ್ಪಟ್ಟಿದ್ದು, ಬೆನ್ನಿನಿಂದ  ಕೆಳಗೆ ಚಾಚಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಂತರಾಷ್ಟ್ರೀಯ ಪಂದ್ಯದದಲ್ಲಿ 25000 ರನ್ ಪೂರೈಸಿದ ಕಿಂಗ್ ಕೊಹ್ಲಿ! 


ಇನ್ನು ಗಮನಾರ್ಹ ಪ್ರಕರಣದ ಚಿತ್ರಗಳನ್ನು ಜರ್ನಲ್ ಆಫ್ ಪೀಡಿಯಾಟ್ರಿಕ್ ಸರ್ಜರಿ ಕೇಸ್ ರಿಪೋರ್ಟ್ಸ್ ನಲ್ಲಿ ಪ್ರಕಟಿಸಲಾಗಿದೆ. ಮಗುವಿನ ಬೆನ್ನುಹುರಿ ಸರಿಯಾಗಿ ಬೆಳವಣಿಗೆಯಾಗದಿದ್ದಾಗ ಸಂಭವಿಸುವ ಜನ್ಮ ದೋಷವಾದ ಸ್ಪೈನಾ ಬೈಫಿಡಾದಿಂದ ಈ ರೀತಿ ಬಾಲದಂತಹ ಅಂಗ ಬೆಳವಣಿಗೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮೊದಲು ಬಾಲವನ್ನು ಕಂಡ ವೈದ್ಯರು ಭಯಗೊಂಡಿದ್ದಾರೆ. ಬಳಿಕ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು, ರಂಧ್ರವನ್ನು ಮುಚ್ಚಿದ್ದಾರೆ.


ಸಾವೊ ಪಾಲೊದಲ್ಲಿನ ಮಕ್ಕಳ ಆಸ್ಪತ್ರೆಯಾದ ಗ್ರೆಂಡಾಕ್‌ನ ವೈದ್ಯರು ಈ ಬಗ್ಗೆ ಮಾತನಾಡಿದ್ದು, ಬೆನ್ನುಮೂಳೆಯನ್ನು ಸೊಂಟಕ್ಕೆ ಸಂಪರ್ಕಿಸುವ ಪ್ರದೇಶವಾದ ಲುಂಬೊಸ್ಯಾಕ್ರಲ್ ನಲ್ಲಿ ಬಾಲದಂತಹ ಅಂಗ ಉತ್ಪತ್ತಿಯಾಗುತ್ತದೆ ಎಂದು ಹೇಳಿದರು. ವೈದ್ಯರು ಇದನ್ನು "Human Pseudo-Tail" ಎಂದು ಗುರುತಿಸಿದ್ದಾರೆ. ಇದು ಬಾಲವನ್ನು ಹೋಲುವ ಬೆಳವಣಿಗೆ. ಆದರೆ ಬೆನ್ನುಮೂಳೆಯ ಸಮಸ್ಯೆಗಳು ಅಥವಾ ಗೆಡ್ಡೆಗಳಿಂದ ಉಂಟಾಗುತ್ತದೆ ಎಂದು ಹೇಳಿದ್ದಾರೆ.


ಈ ಅಂಗವು ಸ್ನಾಯು, ರಕ್ತನಾಳಗಳು ಮತ್ತು ನರಗಳನ್ನು ಒಳಗೊಂಡಿರುತ್ತದೆ. ಆದರೆ ಮೂಳೆಗಳಿಲ್ಲ. ಓಹಿಯೋದಲ್ಲಿನ ಭ್ರೂಣ ಮತ್ತು ಜರಾಯು ಸಂಶೋಧನಾ ಕೇಂದ್ರದ ಸಂಶೋಧಕರು ಬ್ರೆಜಿಲಿಯನ್ ವೈದ್ಯರೊಂದಿಗೆ ಈ ಪ್ರಕರಣವನ್ನು ಅಧ್ಯಯನ ಮಾಡಿದ್ದಾರೆ.


ಇದನ್ನೂ ಓದಿ: Viral Video:ಗೋಣಿ ಚೀಲದ ಈ ಪ್ಯಾಂಟ್‌ಗೆ 60,000!


"ಭ್ರೂಣದ ಕಾಡಲ್ ಅಂಗಗಳು ಬೆನ್ನುಮೂಳೆಯ ಡಿಸ್ರಾಫಿಸಮ್ ಗೆ (ಸ್ಪೈನಾ ಬೈಫಿಡಾ) ಸಂಬಂಧಿಸಿವೆ. ಇಂತಹ ಸಮಸ್ಯೆ ಕಂಡುಬಂದರೆ ಕಡ್ಡಾಯವಾಗಿ ಬೆನ್ನುಹುರಿಯ ದೋಷಗಳನ್ನು ಪರೀಕ್ಷಿಸುವುದನ್ನು ಅಗತ್ಯ. ಇವುಗಳಿಗೆ ಸರಿಯಾದ ಚಿಕಿತ್ಸೆಯನ್ನು ಯೋಜಿಸಲು ಮತ್ತು ಉತ್ತಮ ಗುಣಮಟ್ಟದ ಸಮಾಲೋಚನೆ ನೀಡಲು ಪರೀಕ್ಷೆಗೆ ಒಳಗಾಗುವುದು ಒಳಿತು" ಎಂದು ವೈದ್ಯರು ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ