ಕರಾಚಿ: ಬಲೂಚಿಸ್ತಾನ್ ಸ್ಫೋಟ ಪ್ರಕರಣ ಕೊನೆಗೊಳ್ಳುವ ಲಕ್ಷಣಗಳು ಸದ್ಯಕ್ಕೆ ಕಂಡು ಬರುತ್ತಿಲ್ಲ. ಇತ್ತೀಚಿನ ಘಟನೆಯಲ್ಲಿ, ಬಲೂಚಿಸ್ತಾನದ ಸೈಫುಲ್ಲಾ ಜಿಲ್ಲೆಯ ಒಂದು ಮನೆಯಲ್ಲಿ ನಡೆದ ಸ್ಫೋಟದ ಬಗ್ಗೆ ತಿಳಿದುಬಂದಿದೆ. ಈ ಸ್ಫೋಟದಲ್ಲಿ ಇಬ್ಬರು ದುರ್ಮರಣಕ್ಕಿಡಾಗಿದ್ದಾರೆ. ಜೊತೆಗೆ 7 ಜನರು ಗಾಯಗೊಂಡಿದ್ದಾರೆಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಸ್ಫೋಟದ ಬಗ್ಗೆ ಮಾಹಿತಿ ನೀಡಿರುವ ಪೋಲಿಸರು ಸ್ಫೋಟವು ಎಷ್ಟು ವೇಗವಾಗಿತ್ತೆಂದು ತಿಳಿಸಿದ್ದಾರೆ. ಸ್ಫೋಟದ ನಂತರ ಮನೆ ಕುಸಿದು ಇಬ್ಬರು ದುರ್ಮರಣ ಹೊಂದಿರುವುದಾಗಿ ತಿಳಿಸಿರುವ ಪೊಲೀಸರು ಕೆಲವರು ಅವಶೇಷಗಳಡಿ ಸಿಲುಕಿದ್ದು, ಅವರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.


"ಈ ಸ್ಫೋಟಕ್ಕೆ ಕಾರಣ ಏನು ಎಂದು ತಿಳಿದಿಲ್ಲ, ಆದರೆ ಇದು ತುಂಬಾ ಶಕ್ತಿಯುತ ಬಾಂಬ್ ದಾಳಿಯಾಗಿದೆ" ಎಂದು ಸಫುಲ್ಲಾದ ಉಪ ಆಯುಕ್ತರಾದ ಶಾಫ್ಖತ್ ಅನ್ವರ್ ಶಹವಾನಿ ಹೇಳಿದರು. ಗಾಯಗೊಂಡ ಜನರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅವರು ತಿಳಿಸಿದರು. ಸ್ಫೋಟದ ಬಗ್ಗೆ ಮಾಹಿತಿ ಪಡೆದ ನಂತರ, ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರು. ಕಳೆದ ವರ್ಷಗಳಲ್ಲಿ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಅನೇಕ ಭಯೋತ್ಪಾದಕ ದಾಳಿಗಳು ನಡೆದಿವೆ. ಇಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳು ಭದ್ರತಾ ಪಡೆಗಳು ಮತ್ತು ಸಂಸ್ಥೆಗಳನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದಾರೆ.


ಮಾರ್ಚ್ 15 ರಂದು ತಾಲಿಬಾನ್ ಆತ್ಮಹತ್ಯೆ ಬಾಂಬರ್ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರ ಮನೆಯ ಸಮೀಪದ ಪೊಲೀಸ್ ಚೆಕ್ ಪಾಯಿಂಟ್ ನಲ್ಲಿ ಸಂಭವಿಸಿತು. ಈ ದಾಳಿಯಲ್ಲಿ ಆರು ಪೊಲೀಸರನ್ನು ಒಳಗೊಂಡಂತೆ ಹತ್ತು ಜನರು ಕೊಲ್ಲಲ್ಪಟ್ಟರು. ಈ ಸ್ಫೋಟವು ಶರೀಫ್ ಕುಟುಂಬದ ಮನೆಯಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ.