ಬಾಂಗ್ಲಾದೇಶ: ಢಾಕಾದ ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ಅವಘಡ, 44 ಮಂದಿ ಸಾವು
Bangladesh : ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 6 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 44 ಮಂದಿ ಪಟ್ಟಿದ್ದಾರೆ.
Fire in a restaurant in Dhaka : ಗುರುವಾರ ತಡರಾತ್ರಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 6 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ . 44 ಮಂದಿ ಮೃತಪಟ್ಟು ಹಲವರಿಗೆ ಗಾಯವಾಗಿರುವ ಘಟನೆ ನಡೆದಿದೆ.
ಢಾಕಾ ಬೈಲಿ ರಸ್ತೆಯಲ್ಲಿರುವ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯ ಕೆನ್ನಾಲಿಗೆ ಇತರ ಮಹಡಿಗಳಿಗೂ ವ್ಯಾಪಿಸಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಇದನ್ನು ಓದಿ : Pro-Kabaddi Season 10: ಹತ್ತನೇ ಋತುವಿನ ಪ್ರೊಕಬಡ್ಡಿ ಲೀಗ್ ಗೆ ಪುಣೇರಿ ಪಲ್ಟನ್ ಚಾಂಪಿಯನ್
ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 42 ಮಂದಿ ಸೇರಿದಂತೆ 75 ಮಂದಿಯನ್ನು 7 ಅಂತಸ್ತಿನ ಕಟ್ಟಡದಿಂದ ಹೊರ ತೆಗೆಯಲಾಗಿದ್ದು, ಕೆಲವ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವು ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಘಟನೆ ನಡೆದ ಪ್ರದೇಶದಲ್ಲಿ ಅನೇಕ ಹೋಟೆಲ್ಗಳು, ಬಟ್ಟೆ ಅಂಗಡಿಗಳು ಮತ್ತು ಮೊಬೈಲ್ ಫೋನ್ ಮಾರಾಟ ಅಂಗಡಿಗಳಿವೆ
ರೆಸ್ಟೋರೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಅವಘಟ ಸಂಭವಿಸಿದೆ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.ಮೆಟ್ಟಿಲುಗಳ ಮೇಲೆ ಹೊಗೆ ಬರುತ್ತಿತ್ತು. ಸಾಕಷ್ಟು ಜನರು ಮೇಲೆ ಓಡಿ ಬರುತ್ತಿದ್ದರು, ಕೆಲವರು ಕಟ್ಟಡಿಂದ ಇಳಿಯಲು ನೀರಿನ ಪೈಪ್ ಗಳನ್ನು ಬಳಸುತ್ತಿದ್ದರು. ಕೆಲವರು ಮಹಡಿಯಿಂದ ಕೆಳಗೆ ಜಿಗಿದು ಗಾಯಗೊಂಡಿದ್ದರು ಎಂದು ರೆಸ್ಟೋರೆಂಟ್ ಮ್ಯಾನೇಜರ್ ಹೇಳಿದ್ದಾರೆ.
ಇದನ್ನು ಓದಿ : ಜಾರ್ಖಂಡ್‌ನ 36 ಸಾವಿರ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಜುಲೈ 2021 ರಲ್ಲಿ, ಆಹಾರ ಸಂಸ್ಕರಣಾ ಕಾರ್ಖಾನೆಯಲ್ಲಿ ಬೆಂಕಿ ಆವರಿಸಿದಾಗ ಅನೇಕ ಮಕ್ಕಳು ಸೇರಿದಂತೆ ಕನಿಷ್ಠ 52 ಜನರು ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ