Belarus President ಅಲೆಕ್ಸಾಂಡರ್ ಲುಕಾಶೆಂಕೊ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಬಳಿಕ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಅವರನ್ನು ಮಾಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾಹಿತಿ ಪ್ರಕಾರ ಅವರ ಸ್ಥಿತಿ ಚಿಂತಾಜನಕವಾಗಿದೆ.


COMMERCIAL BREAK
SCROLL TO CONTINUE READING

ಬೆಲಾರಸ್ ವಿರೋಧ ಪಕ್ಷದ ನಾಯಕ ವ್ಯಾಲೆರಿ ತ್ಸೆಪಾಲ್ಕೊ ಶನಿವಾರ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ತಮ್ಮ ತಂಡಕ್ಕೆ ಸಿಕ್ಕ ಮಾಹಿತಿಗೆ ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದೆ ಮತ್ತು ಅದನ್ನು ಇನ್ನೂ ದೃಢೀಕರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. 


ಈ ಕುರಿತು ಬರೆದುಕೊಂಡಿರುವ ತ್ಸೆಪಾಲ್ಕೊ, "ನಮಗೆ ದೊರೆತ ಮಾಹಿತಿಯ ಪ್ರಕಾರ, ಮುಚ್ಚಿದ ಬಾಗಿಲುಗಳ ಹಿಂದೆ ಪುಟಿನ್ ಅವರನ್ನು ಭೇಟಿಯಾದ ನಂತರ, ಲುಕಾಶೆಂಕೊ ಅವರನ್ನು ತಕ್ಷಣವೇ ಮಾಸ್ಕೋದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ" ವೈದ್ಯರ ತಪಾಸಣೆಯ ಬಳಿಕ ತಿಳಿದುಬಂದ ಅವರ ಸ್ಥಿತಿಯಿಂದ ಅವರನ್ನು ಹೊರತರಲು ಉತ್ತಮ ತಜ್ಞರನ್ನು ಕಳುಹಿಸಲಾಗಿದೆ" ಎಂದು ಹೇಳಿದ್ದಾರೆ.


ವಿಷಪ್ರಾಶದ ವದಂತಿ
ಬೆಲರೂಸಿಯನ್ ಸರ್ವಾಧಿಕಾರಿಯನ್ನು ಉಳಿಸುವ ಪ್ರಯತ್ನಗಳು ಅವರಿಗೆ ವಿಷಪ್ರಾಶ ಮಾಡಿಸುವಲ್ಲಿ ಕ್ರೇಮ್ಲಿನ್ ಶಾಮೀಲಾಗಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿದೆ ಎಂದು ವ್ಯಾಲೆರಿ ಹೇಳಿದ್ದಾರೆ.


ಮೇ 9 ರಂದು ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ನಡೆದ ವಿಜಯ ದಿನದ ಆಚರಣೆಯಲ್ಲಿ ಕಾಣಿಸಿಕೊಂಡಾಗಿನಿಂದ ಲುಕಾಶೆಂಕೊ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಡಿವೆ. ಆದಾಗ್ಯೂ, 1994 ರಿಂದ ಬೆಲಾರೂಸ್ ಅನ್ನು ಮುನ್ನಡೆಸಿರುವ ಲುಕಾಶೆಂಕೊ, ವದಂತಿಗಳನ್ನು ತಳ್ಳಿ ಹಾಕಿದ್ದರು ಮತ್ತು 'ನಾನು  ಸಾಯುವುದಿಲ್ಲ ನನ್ನ ಸ್ನೇಹಿತರೇ' ಎಂದು ಹೇಳಿದ್ದರು.


ಲುಕಾಶೆಂಕೊ ಪುಟಿನ್‌ನ ಕಟ್ಟಾ ಬೆಂಬಲಿಗರಾಗಿದ್ದಾರೆ
ಬೆಲಾರೂಸ್ ನ ಅಧ್ಯಕ್ಷ ಲುಕಾಶೆಂಕೊ ಮತ್ತು ಅವರ ಆಡಳಿತವು ಪುಟಿನ್ ಅವರ ನಿಷ್ಠಾವಂತ ಬೆಂಬಲಿಗರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಬೆಲಾರೂಸ್ ಉಕ್ರೇನ್ ಮತ್ತು ರಷ್ಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಉಕ್ರೇನ್ ಆಕ್ರಮಣಕ್ಕಾಗಿ ಬೆಲಾರೂಸ್ ಪ್ರದೇಶವನ್ನು ಲಾಂಚ್‌ಪ್ಯಾಡ್ ಆಗಿ ಬಳಸಲು ಲುಕಾಶೆಂಕೊ ರಷ್ಯಾಕ್ಕೆ ಅವಕಾಶ ಮಾಡಿಕೊಟ್ಟಿದೆ.


ಇದನ್ನೂ ಓದಿ-Delhi HC: 2000 ರೂ. ನೋಟು ಹಿಂಪಡೆತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಮಹತ್ವದ ತೀರ್ಪು


ಕಳೆದ ವಾರ, ಬೆಲಾರೂಸ್ ನಲ್ಲಿ ಕಾರ್ಯತಂತ್ರದ ಪರಮಾಣು ಕ್ಷಿಪಣಿಗಳ ನಿಯೋಜನೆಯನ್ನು ಔಪಚಾರಿಕಗೊಳಿಸಲು ಲುಕಾಶೆಂಕೊ ಸರ್ಕಾರದೊಂದಿಗೆ ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ.


ಇದನ್ನೂ ಓದಿ- Terror Funding: 'ಟೆರರ್ ಫಂಡಿಂಗ್ ಪ್ರಕರಣದಲ್ಲಿ ಗಲ್ಲುಶಿಕ್ಷೆಯಾಗಬೇಕು', NIA ಬೇಡಿಕೆ ಹಿನ್ನೆಲೆ ಯಾಸಿನ್ ಮಲಿಕ್ ಗೆ ನೋಟೀಸ್ ಜಾರಿಗೊಳಿಸಿದ ದೆಹಲಿ ಹೈಕೋರ್ಟ್


ಬೆಲರೂಸಿಯನ್ ರಕ್ಷಣಾ ಸಚಿವಾಲಯವು ರಷ್ಯಾ ಮತ್ತು ಬೆಲಾರೂಸ್ ನ  ರಕ್ಷಣಾ ಮಂತ್ರಿಗಳು ಬೆಲರೂಸಿಯನ್ ಭೂಪ್ರದೇಶದಲ್ಲಿ ರಷ್ಯಾದ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯವಿಧಾನಗಳನ್ನು ವ್ಯಾಖ್ಯಾನಿಸುವ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿ ಮಾಡಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.