ಅರಣ್ಯ, ಕಾನನ, ವನ ಎಂಬ ಹೆಸರುಗಳನ್ನು ಕೇಳಿದೊಡನೆಯೇ ಕಣ್ಮುಂದೆ ಬರುವುದು ಬೃಹತ್‍ಗಾತ್ರದ ಮರಗಳು, ಕಾಡು ಪ್ರಾಣಿಗಳು, ನದಿಗಳು, ಝರಿಗಳು. ಆದರೆ, ಈ ಅರಣ್ಯದಲ್ಲಿ ಬೃಹತ್ ಗಾತ್ರದ ಮರಗಳ ಬದಲಾಗಿ ಬೃಹತ್ ಗಾತ್ರದ ಶಿಲೆಗಳಿವೆ. ಹಾಗಾಗಿ ಈ ಅರಣ್ಯ ಸಂಪೂರ್ಣವಾಗಿ ಕಲ್ಲಿನಿಂದಲೇ ಆವೃತವಾಗಿದೆ. ಅಚ್ಚರಿಯಾಗುತ್ತಿದೆಯೇ? ಆದರೂ ಇದು ಸತ್ಯ!


COMMERCIAL BREAK
SCROLL TO CONTINUE READING

ಒಂದರ ಪಕ್ಕ ಒಂದು ಸಾಲಾಗಿ ನಿಂತಿರುವ ಕಲ್ಲಿನ ಆಕೃತಿಗಳು ಅರಣ್ಯದಂತೆ0ಯೇ ಭಾಸವಾಗುತ್ತದೆ. ಹೀಗಾಗಿ ಇದು ಕಲ್ಲಿನ ಅರಣ್ಯ (ಸ್ಟೋನ್ ಫಾರೆಸ್ಟ್) ಎಂದೇ ಪ್ರಸಿದ್ಧಿ ಪಡೆದಿದೆ. ಈ ಅರಣ್ಯ ಇರುವುದು ಚೀನಾದ ನೈಋತ್ಯ ಭಾಗದಲ್ಲಿರುವ ಲುನಾನ್ ಯು ಸ್ವಾಯತ್ತ ಪ್ರಾಂತದ ಯುನಾನ್ ಪ್ರದೇಶದಲ್ಲಿ. ಈ ಅರಣ್ಯ 350 ಚದರ ಕಿ.ಮೀವರೆಗೆ ವಿಸ್ತರಿಸಿಕೊಂಡಿದೆ. ಅಂದರೆ 96 ಸಾವಿರ ಎಕರೆಯಷ್ಟು ಜಾಗದಲ್ಲಿ ಕೇವಲ ಬೃಹತ್ ಗಾತ್ರದ ಶಿಲೆಗಳೇ ತುಂಬಿಕೊಂಡಿದೆ! 


ಈ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 1600 ಅಡಿಯಿಂದ 1900 ಅಡಿಯ ಎತ್ತರದಲ್ಲಿದೆ. ಸುಮಾರು 270 ದಶ ಲಕ್ಷ ವರ್ಷಗಳ ಹಿಂದೆ ಸುಣ್ಣದ ಕಲ್ಲಿನಿಂದ ಈ ಅರಣ್ಯ ನಿರ್ಮಾಣಗೊಂಡಿದೆ ಎಂದು ಹೇಳಲಾಗಿದೆ.