Bomb Blast outside Russian Embassy : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೊರಗೆ ನಡೆದ ಬಾಂಬ್ ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ರಷ್ಯಾದ ಇಬ್ಬರು ರಾಜತಾಂತ್ರಿಕರೂ ಸೇರಿದ್ದಾರೆ. ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ದತ್ತ ಹೊಗೆ ಆವರಿಸಿದೆ. ಅಫ್ಘಾನಿಸ್ತಾನದಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಜನರು ವೀಸಾಕ್ಕಾಗಿ ಕಾಯುತ್ತಿದ್ದ ಕಾರಣ ಅಲ್ಲಿ ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದರು. 


COMMERCIAL BREAK
SCROLL TO CONTINUE READING

ಸದ್ಯ ಈ ಬಗ್ಗೆ ಭದ್ರತಾ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ. ಮಾಹಿತಿಯ ಪ್ರಕಾರ, ಸ್ಪೋಟ ಸಂಭವಿಸುವ ಮೊದಲೇ ರಷ್ಯಾದ ರಾಯಭಾರ ಕಚೇರಿ ಸಿಬ್ಬಂದಿ ದಾಳಿಕೋರನನ್ನು ಸುತ್ತುವರೆದಿದ್ದರು. ಆದರೆ ದಾಳಿಕೋರ ತನ್ನನ್ನು ತಾನು ಸ್ಪೋಟಿಸಿಕೊಂಡು 20 ಜನರ ಸಾವಿಗೆ ಕಾರಣವಾಗಿದ್ದಾನೆ. ಇವರಲ್ಲಿ ಇಬ್ಬರು ರಷ್ಯಾದ ರಾಜತಾಂತ್ರಿಕರು ಸೇರಿದ್ದಾರೆ. 


ಇದನ್ನೂ ಓದಿ : Baby Name: ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ: ಹೆಸರೇನು ಗೊತ್ತಾ?


ಶನಿವಾರ ಮುಂಜಾನೆ, ಅಫ್ಘಾನಿಸ್ತಾನದ ದಕ್ಷಿಣ ಹೆಲ್ಮಂಡ್ ಪ್ರಾಂತ್ಯದ ನಾದ್ ಅಲಿ ಜಿಲ್ಲೆಯಲ್ಲಿ ನಡೆದ ಸ್ಫೋಟದಲ್ಲಿ  ಮೂವರು ಮಕ್ಕಳು ಸಾವನ್ನಪ್ಪಿದ್ದರು. ಇಲ್ಲಿ ಮೃತಪಟ್ಟವರೆಲ್ಲರೂ  ಧಾರ್ಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. 


ಇದಕ್ಕೂ ಮುನ್ನ ಕಾಬೂಲ್‌ನ ಪೊಲೀಸ್ ಜಿಲ್ಲೆ 17ರಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದರು. ಇಲ್ಲಿ  ಟೊಯೊಟಾ ಕೊರೊಲಾ ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು. 


ತಾಲಿಬಾನ್-ಚಾಲಿತ ಆಡಳಿತವು US ಪಡೆಗಳ ಸೋಲಿನ ಮೊದಲ ವಾರ್ಷಿಕೋತ್ಸವವನ್ನು ಹಿಂದಿನ US ಮುಖ್ಯ ಸೇನಾ ನೆಲೆಯಾದ ಬಾಗ್ರಾಮ್‌ನಲ್ಲಿ ಆಚರಿಸಿತು. ಅಲ್ಲಿ ಮಿಲಿಟರಿ ಮೆರವಣಿಗೆಯನ್ನು ಏರ್ಪಡಿಸುವ ಮೂಲಕ ತನ್ನ ಮಿಲಿಟರಿ ಪರಾಕ್ರಮವನ್ನು ಪ್ರದರ್ಶಿಸಿತು.


ಇದನ್ನೂ ಓದಿ :Emmy Award : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಎಮಿ ಪ್ರಶಸ್ತಿ



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.