Indonesiaದಲ್ಲಿ ರಸ್ತೆಗಳ ಮೇಲೆ ಹರಿದ ರಕ್ತ ? `ರಕ್ತದ ನೆರೆ` ಹಿಂದಿನ ಸತ್ಯಾಸತ್ಯತೆ ಏನು?
Bloody Flood - ಇಂಡೊನೆಷ್ಯಾದ ಗ್ರಾಮವೊಂದರಲ್ಲಿ ಇತ್ತೀಚಿಗೆ ವಿಚಿತ್ರ ದೃಶ್ಯವೊಂದು ಕಂಡುಬರುತ್ತಿದೆ.
ಜಕಾರ್ತಾ: Bloody Flood - ಇಂಡೊನೆಷ್ಯಾದ ಗ್ರಾಮವೊಂದರಲ್ಲಿ ಇತ್ತೀಚಿಗೆ ವಿಚಿತ್ರ ದೃಶ್ಯವೊಂದು ಕಂಡುಬರುತ್ತಿದೆ. ಇಲ್ಲಿನ ರಸ್ತೆಗಳ ಮೇಲೆ ರಕ್ತದ ಬಣ್ಣದ ನೀರಿನಂತಹ ಪದಾರ್ಥ ಹರಿಯುತ್ತಿದೆ. ಇದರ ಹಿಂದಿನ ಕಾರಣ ಅರಿಯದ ಜನರು ಅದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಆದರೆ, ಬಳಿಕ ಇಂಡೊನೆಷ್ಯಾದಲ್ಲಿ ಬಂದ ನೆರೆಯ ಕಾರಣ ಅಲ್ಲಿರುವ ಒಂದು ಬಣ್ಣ ತಯಾರಿಸುವ ಫ್ಯಾಕ್ಟರಿಯಲ್ಲಿನ ಬಣ್ಣ ನೀರಲ್ಲಿ ಬೆರೆತ ಕಾರಣ ಕೆಂಪು ಬಣ್ಣದ ನೀರು ಗ್ರಾಮಕ್ಕೆ ನುಗ್ಗಿದೆ ಎಂದು ತಿಳಿದುಬಂದಿದೆ. ಮಳೆಯ ಬಳಿಕ ಮಳೆ ನೀರಿನಲ್ಲಿ ಬೆರೆತು ಈ ಬಣ್ಣ ತಿಳಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಊರಿನಲ್ಲಿ ಕಂಡು ಬಂದ ವಿಚಿತ್ರ ನೆರೆಯ (Red Water Flood) ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral News In Kannada) ಆಗುತ್ತಿವೆ . ಎಲ್ಲಕ್ಕಿಂತ ಮೊದಲು ಸೆಂಟ್ರಲ್ ಜಾವಾ ಬಳಿ ಇರುವ ಪೆಕಲೊಂಗನ್ ಪಟ್ಟಣದ ಹತ್ತಿರವಿರುವ ಈ ಗ್ರಾಮದ ಜನರು ಈ ಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಈ ನೀರು ರಕ್ತದಂತೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ-Indonesia Earthquake 2021: ಇಂಡೊನೆಷ್ಯಾದಲ್ಲಿ ಪ್ರಬಲ ಭೂಕಂಪ, 7 ಸಾವು 100 ಕ್ಕೂ ಅಧಿಕ ಜನರಿಗೆ ಗಾಯ
ಇಂಡೋನೇಷ್ಯಾದ (Indonesia) ಪೆಕಲೊಂಗನ್ ನಗರ ಸಾಂಪ್ರದಾಯಿಕ ಇಂಡೋನೇಷ್ಯನ್ ಡೈಯಿಂಗ್ ತಂತ್ರಜ್ಞಾನದಲ್ಲಿ ಬಳಕೆಯಾಗುವ ಬಾಟಿಕ್ ಉತ್ಪಾದನೆಗಾಗಿ ಹೆಸರುವಾಸಿಯಾಗಿದೆ. ಇದರಿಂದ ಬಟ್ಟೆಗಳ ಮೇಲೆ ಪ್ಯಾಟರ್ನ್ ರಚಿಸಲಾಗುತ್ತದೆ. ಇತ್ತೀಚೆಗಷ್ಟೇ ಈ ಗ್ರಾಮದ ಹತ್ತಿರವಿರುವ ಮತ್ತೊಂದು ಗ್ರಾಮದಲ್ಲಿ ಹಸಿರು ಬಣ್ಣದ ನೆರೆ ಸೃಷ್ಟಿಯಾಗಿದ್ದು ಇಲ್ಲಿ ಗಮನಾರ್ಹ.
ಇದನ್ನು ಓದಿ- Uttarakhand Glacier Tragedy: ಚಮೋಲಿಯಲ್ಲಿ ಗ್ಲೇಶಿಯರ್ ಕುಸಿತ, ಭಾರಿ ಪ್ರಮಾಣದ ಹಾನಿಯ ಅಲರ್ಟ್
ಹಲವು ಬಾರಿ ಇಲ್ಲಿ ನೇರಳೆ ಬಣ್ಣದ ತೆಗ್ಗುಗಳು ಕೂಡ ಕಂಡುಬರುತ್ತವೆ ಎಂದು twitter ಬಳಕೆದಾರರೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಪೆಕಲಾಂಗ್ ಅಧಿಕಾರಿಗಳು ಈ ನೆರೆ ಚಿತ್ರಗಳು ಅಸಲಿಯಾಗಿವೆ ಎಂದು ಪುಷ್ಟೀಕರಿಸಿದ್ದು, ನೀರಿನಲ್ಲಿ ಕೆಂಪು ಡೈಯಿಂಗ್ ಬಣ್ಣ ಬೆರೆತಿದೆ ಎಂದು ಹೇಳಿದ್ದಾರೆ. ಆದರೆ, ಇದರಿಂದ ವದಂತಿಗಳು ಏಳುವ ಸಾಧ್ಯತೆ ಇದೆ ಎಂದು ಹಲವು ಟ್ವಿಟ್ಟರ್ ಬಳಕೆದಾರರು ಭೀತಿ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ- 'ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನಕ್ಕಾಗಿ ಬೇಡ ಒತ್ತಾಯ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.