VIDEO: ಕುದಿಯುವ ನೀರು ಪಾತ್ರೆಯಿಂದ ರಸ್ತೆಗೆ ಬೀಳುವಷ್ಟರಲ್ಲಿ ಮಂಜುಗಡ್ಡೆ ಆಗೋದನ್ನ ನೋಡಿದ್ದೀರಾ!

ಸಾಮಾಜಿಕ ಮಾಧ್ಯಮದಲ್ಲಿ ಅಮೆರಿಕದ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ.
ವಾಷಿಂಗ್ಟನ್: ಚಳಿಗಾಲ ಬಂತೆಂದರೆ ಎಲ್ಲರೂ ಯೋಚಿಸುವುದೊಂದೇ ಈ ಸಮಯದಲ್ಲಿ ಯಾರಾದರೂ ಬಿಸಿ ಬಿಸಿಯಾಗಿ ಏನಾದ್ರೂ ಮಾಡಿಕೊಟ್ಟರೆ ಆಹಾ... ತಿನ್ನುತ್ತಾ, ಟಿವಿ ನೋಡುತ್ತಾ ಇರಬಹುದು ಎಂದು. ಕೆಲವರಿಗೆ ಹೊದಿಕೆಯಿಂದ ಹೊರಬರುವುದೇ ದೊಡ್ಡ ಕೆಲಸವಾದರೆ, ಇನ್ನೂ ಕೆಲವರಿಗೆ ಕೆಲಸ ಹೇಗ್ ಮಾಡೋದಪ್ಪ ಅನ್ನೋ ಚಿಂತೆ... ನಮಗೆ ಹಾಗೆ ಅನ್ನಿಸುವುದಾದರೆ ಇನ್ನು ದಟ್ಟ ಮಂಜು ಪ್ರದೇಶಗಳಲ್ಲಿ ವಾಸಿಸುವವರ ಸ್ಥಿತಿ ಹೇಗಿರುತ್ತೆ? ಅಬ್ಬಬ್ಬಾ ಊಹಿಸಿದರೇ ಚಳಿ ಜಾಸ್ತಿ ಆಗುತ್ತೆ ಅಲ್ವಾ...
ಈ ವಾತಾವರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಅಮೆರಿಕದ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ. ವಾಸ್ತವವಾಗಿ, ಈ ವೀಡಿಯೊದಲ್ಲಿ, ಒಬ್ಬ ಮನುಷ್ಯ ತನ್ನ ಮನೆಯಲ್ಲಿ ಪಾತ್ರೆಯಲ್ಲಿ ಚೆನ್ನಾಗಿ ನೀರು ಕುದಿಸಿ ಅದನ್ನು ರಸ್ತೆಗೆ ಎಸೆಯುತ್ತಿರುವ ದೃಶ್ಯ ಸೆರೆಹಿಡಿಯಲಾಗಿದೆ. ಆದರೆ ಕುದಿಯುತ್ತಿರುವ ನೀರು ಪಾತ್ರೆಯಿಂದ ನೆಲಕ್ಕೆ ಬೀಳುವಷ್ಟರಲ್ಲಿ ಮಂಜುಗಡ್ಡೆ ರೂಪ ಪಡೆದಿದೆ. ನಂಬಿಕೆ ಬರುತ್ತಿಲ್ಲವೇ ಹಾಗಿದ್ದರೆ ಆ ವಿಡಿಯೋವನ್ನು ಒಮ್ಮೆ ನೀವೇ ವೀಕ್ಷಿಸಿ...
ಅಮೆರಿಕದ ಮಧ್ಯಪಶ್ಚಿಮ ಭಾಗದ ಶೀತಮಯ ವಾತಾವರಣದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಅತಿಯಾದ ಶೀತದಿಂದಾಗಿ ಅಲ್ಲಿ ವಿಮಾನ ಹಾರಾಟ ಸೇವೆ ಕೂಡ ಅಡಚಣೆಯಾಗಿದೆ. ಕಾರಣದಿಂದಾಗಿ, ಯು.ಎಸ್ನಲ್ಲಿ ಚಿಕಾಗೊದ ತಾಪಮಾನವು ಬೆಳಿಗ್ಗೆ 30 ಡಿಗ್ರಿಗಳಷ್ಟು ಕಡಿಮೆಯಾಯಿತು.
ರೈಲ್ವೆ ಸೇವೆ ಕೂಡಾ ಅಡಚಣೆ:
ಅಲ್ಲಾಸ್ಕಾದ ರಾಜಧಾನಿ ಮತ್ತು ಅಂಟಾರ್ಟಿಕಾದ ಭಾಗಗಳನ್ನು ಇಲ್ಲಿ ಹೆಚ್ಚು ಶೀತ ವಾತಾವರಣವಿದೆ. ನಗರದ ಎರಡು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 1500 ಕ್ಕಿಂತಲೂ ಹೆಚ್ಚಿನ ವಿಮಾನಗಳು ರದ್ದುಗೊಳ್ಳಬೇಕಾಗಿತ್ತು. ಅದೇ ವೇಳೆ ರೈಲ್ವೆ ಸೇವೆಯಲ್ಲಿ ಕೂಡ ಅಡಚಣೆಯಾಗಿದೆ.