ಭಾರತದ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ
ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೇರಿಕನ್ ಅನುವಾದಕಿ ಡೈಸಿ ರಾಕ್‌ವೆಲ್ ಅವರ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಿಕ್ಕಿದೆ.
ನವದೆಹಲಿ: ಭಾರತೀಯ ಸಾಹಿತ್ಯ ಮತ್ತೊಮ್ಮೆ ದೊಡ್ಡ ಸಾಧನೆ ಮಾಡಿದೆ. ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೇರಿಕನ್ ಅನುವಾದಕಿ ಡೈಸಿ ರಾಕ್‌ವೆಲ್ ಅವರ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಿಕ್ಕಿದೆ. ಮೂಲತಃ ಹಿಂದಿಯಲ್ಲಿ ಬರೆದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದ ಮೊದಲ ಪುಸ್ತಕ ಇದಾಗಿದೆ. ಪ್ರಶಸ್ತಿ ಗೆದ್ದ ನಂತರ ಗೀತಾಂಜಲಿ ಶ್ರೀ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. ಈ ಪ್ರಶಸ್ತಿ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದನ್ನು ಗೆದ್ದ ಬಳಿಕ ನಾನು ತುಂಬಾ ಉತ್ಸುಕಳಾಗಿದ್ದಾನೆ ಎಂದು ಹೇಳಿದ್ದಾರೆ.
63 ಸಾವಿರ ಡಾಲರ್ ಬಹುಮಾನ
ಡೈಸಿ ರಾಕ್ವೆಲ್ ಅವರಿಂದ ಇಂಗ್ಲಿಷ್‍ಗೆ ಅನುವಾದಿಸಲಾಗಿರುವ ಈ ಕಾದಂಬರಿಯ ಮುಖ್ಯ ಪಾತ್ರವು 80 ವರ್ಷದ ಮಹಿಳೆ. ಪ್ರಶಸ್ತಿ ಗೆದ್ದ ಇಬ್ಬರಿಗೂ 50,000 ಪೌಂಡ್‌ಗಳ ($63,000) ಮೊತ್ತವನ್ನು ನೀಡಲಾಗಿದೆ. ಇದನ್ನು ಇಬ್ಬರಿಗೂ ಸಮಾನವಾಗಿ ಹಂಚಲಾಗುತ್ತದೆ. ಗೀತಾಂಜಲಿ ನವದೆಹಲಿಯಲ್ಲಿ ವಾಸಿಸುತ್ತಿದ್ದರೆ, ರಾಕ್‌ವೆಲ್ ವರ್ಮೊಂಟ್‌ನಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: Texas school shooting: ಸಾವಿನ ಸಂಖ್ಯೆ 21 ಕ್ಕೆ ಏರಿಕೆ, ಶೋಕಾಚರಣೆಗೆ ಬೈಡನ್ ಸೂಚನೆ
13 ಪುಸ್ತಕಗಳೊಂದಿಗೆ ಸ್ಪರ್ಧೆ
ಭಾರತದ ‘ಟಾಂಬ್ ಆಫ್ ಸ್ಯಾಂಡ್’ ಪುಸ್ತಕದ ಜೊತೆಗೆ ಪ್ರಪಂಚದಾದ್ಯಂತದ 13 ಪುಸ್ತಕಗಳು ಈ ಪ್ರಶಸ್ತಿಯ ರೇಸ್‌ನಲ್ಲಿದ್ದವು. ತೀರ್ಪುಗಾರರ ಸಮಿತಿಯ ಅಧ್ಯಕ್ಷರಾದ ಭಾಷಾಂತರಕಾರ ಫ್ರಾಂಕ್ ವೈನ್ ಮಾತನಾಡಿ, ‘ಈ ಕೃತಿಯ ಬಗ್ಗೆ ಬಹಳಷ್ಟು ಚರ್ಚಿಸಿದ ಬಳಿಕವೇ ನಾವು ಅಂತಿಮ ಮತ ಹಾಕಿದೇವು’ ಎಂದು ಹೇಳಿದ್ದಾರೆ. ‘ಇದು ಭಾರತ ಮತ್ತು ವಿಭಜನೆಯ ಕುರಿತ ಬೆರಗುಗೊಳಿಸುವ ಕಾದಂಬರಿಯಾಗಿದೆ. ಈ ಕೃತಿ ಯುವ ಮನಸ್ಸು, ಪುರುಷ ಮತ್ತು ಮಹಿಳೆ, ಕುಟುಂಬ ಮತ್ತು ರಾಷ್ಟ್ರವನ್ನು ಹಲವು ಆಯಾಮಗಳಲ್ಲಿ ಚಿತ್ರಿಸಿದೆ. ಅವರು ಎದುರಿಸಿದ ಆಘಾತಕಾರಿ ಘಟನೆಗಳ ಹೊರತಾಗಿಯೂ, ಇದು ಅಸಾಧಾರಣ ಅಂಶಗಳನ್ನು ಹೊಂದಿರುವ ಪುಸ್ತಕವಾಗಿದೆ’ ಎಂದು ಅವರು ಹೇಳಿದ್ದಾರೆ.
80 ವರ್ಷದ ವಿಧವೆಯ ಹೋರಾಟದ ಕಥೆ
ಈ ಕಾದಂಬರಿಯು 1947ರಲ್ಲಿ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ನಂತರ ತನ್ನ ಪತಿಯನ್ನು ಕಳೆದುಕೊಂಡ 80 ವರ್ಷದ ವೃದ್ಧ ವಿಧವೆಯ ಕಥೆಯನ್ನು ಹೇಳುತ್ತದೆ. ಪತಿ ಕಳೆದುಕೊಂಡ ಬಳಿಕ ವಿಧವೆ ಮಹಿಳೆ ಖಿನ್ನತೆಗೆ ಜಾರುತ್ತಾಳೆ. ಸಾಕಷ್ಟು ಹೋರಾಟದ ನಂತರ ಅವಳು ತನ್ನ ಖಿನ್ನತೆಯಿಂದ ಹೊರಬರುತ್ತಾಳೆ. ವಿಭಜನೆಯ ಸಮಯದಲ್ಲಿ ಆದ ನೋವುಗಳನ್ನು ಎದುರಿಸಲು ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸುತ್ತಾಳೆ. ಹೀಗೆ ಪಾಕಿಸ್ತಾನದ ಗಡಿಯನ್ನು ದಾಟುವ ರೋಮಾಂಚಕ ಕಥಾಹಂದರವನ್ನು ಹೊಂದಿರುವ ಕಾದಂಬರಿ ಇದಾಗಿದೆ.
ಇದನ್ನೂ ಓದಿ: Terror Funding Case: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ
ಏನಿದು ಬೂಕರ್ ಪ್ರಶಸ್ತಿ?
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿತರಣಾ ಸಮಾರಂಭವನ್ನು ಪ್ರತಿ ವರ್ಷ ಇಂಗ್ಲೆಂಡ್‍ನಲ್ಲಿ ಆಯೋಜಿಸಲಾಗುತ್ತದೆ. ಐರ್ಲೆಂಡ್‌ನಲ್ಲಿ ಪ್ರಕಟವಾದ ಕಾದಂಬರಿಯ ಅನುವಾದಿತ ಕೃತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದನ್ನು ಇಂಗ್ಲಿಷ್ ಭಾಷೆಯ ಫಿಕ್ಷನ್ ಕಥೆಗಾಗಿ ಬೂಕರ್ ಪ್ರಶಸ್ತಿಯೊಂದಿಗೆ ನಡೆಸಲಾಗುತ್ತಿದೆ. ಇತರ ಭಾಷೆಗಳಲ್ಲಿ ಕಾದಂಬರಿಗಳನ್ನು ಉತ್ತೇಜಿಸಲು ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.