Smartphone in Toilet: ಜನರು ಒಂದು ದಿನವೂ ಇಲ್ಲದೆ ಇರಲು ಸಾಧ್ಯವಾಗದ ಗ್ಯಾಜೆಟ್‌ ಅಂದರೆ ಅದು ಸ್ಮಾರ್ಟ್‌ಫೋನ್‌. ಇಂಟರ್ನೆಟ್ ಬ್ರೌಸ್ ಮಾಡುವುದರಿಂದ ಹಿಡಿದು ಕೆಲಸದ ಇಮೇಲ್‌ಗಳಿಗೆ ಪ್ರತಿಕ್ರಿಯಿಸುವುದು, ಸ್ನೇಹಿತರೊಂದಿಗೆ ಮಾತನಾಡುವುದು ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಸ್ಮಾರ್ಟ್‌ಫೋನ್ ಮೂಲಕವೇ ಮಾಡಬಹುದು. ಸ್ಮಾರ್ಟ್‌ಫೋನ್ ಚಟವು ಸಂಪೂರ್ಣವಾಗಿ ವಿಭಿನ್ನವಾದ ಚರ್ಚೆಯಾಗಿದ್ದರೂ, ಅನೇಕ ಜನರು ಟಾಯ್ಲೆಟ್‌ನಲ್ಲಿರುವಾಗ ತಮ್ಮ ಫೋನ್‌ಗಳನ್ನು ಬಳಸುವ ಅಭ್ಯಾಸವನ್ನು ಹೊಂದಿದ್ದಾರೆ. ಈ ಅಭ್ಯಾಸವು ತುಂಬಾ ಅಪಾಯಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ.  


COMMERCIAL BREAK
SCROLL TO CONTINUE READING

NordVPN ಅಧ್ಯಯನದ ಪ್ರಕಾರ, 10 ಜನರಲ್ಲಿ ಆರು ಜನರು ವಿಶೇಷವಾಗಿ ಯುವಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ವಾಶ್‌ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 61.6 ಪ್ರತಿಶತದಷ್ಟು ಜನರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಟಾಯ್ಲೆಟ್ ಸೀಟ್‌ನಲ್ಲಿ ಕುಳಿತು ಪರಿಶೀಲಿಸುವುದನ್ನು ಒಪ್ಪಿಕೊಂಡಿದ್ದಾರೆ. 33.9 ರಷ್ಟು ಜನ ವಾಶ್‌ರೂಮ್‌ನಲ್ಲಿ ಸ್ಮಾರ್ಟ್‌ಫೋನ್‌ ಮೂಲಕ ಪ್ರಸ್ತುತ ವಿದ್ಯಮಾನಗಳ ಬಗ್ಗೆನೋಡುತ್ತಾರೆ, 24.5 ರಷ್ಟು ಯುವಕರು ತಮ್ಮ ಪ್ರೀತಿಪಾತ್ರರಿಗೆ ಸಂದೇಶ ಕಳುಹಿಸಲು ಅಥವಾ ಕರೆ ಮಾಡಲು ವಾಶ್‌ರೂಮ್‌ಗೆ ಮೊಬೈಲ್‌ ಒಯ್ಯುತ್ತಾರೆ. 


ಇದನ್ನೂ ಓದಿ: Dal Benefits: ಹಲವು ರೋಗಳನ್ನು ತೊಲಗಿಸಲು ತೊಗರಿ ಬೇಳೆ ಸಹಕಾರಿ..!


ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು. ಯಾಹೂ ಲೈಫ್ ಯುಕೆ ಜೊತೆಗಿನ ಸಂವಾದದಲ್ಲಿ ಸೋಂಕು ನಿಯಂತ್ರಣ ತಜ್ಞರಾದ ಡಾ. ಹಗ್ ಹೇಡನ್, ಟಾಯ್ಲೆಟ್ ಸೀಟ್‌ಗಳಿಗಿಂತ ಹತ್ತು ಪಟ್ಟು ಹೆಚ್ಚು ಸೂಕ್ಷ್ಮಾಣುಗಳನ್ನು ಸ್ಮಾರ್ಟ್‌ಫೋನ್‌ಗಳು ಆಶ್ರಯಿಸುತ್ತವೆ ಎಂದು ಒತ್ತಿ ಹೇಳಿದರು. 


ವ್ಯಕ್ತಿಗಳು ಸರಿಯಾದ ನೈರ್ಮಲ್ಯವಿಲ್ಲದೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸಿದಾಗ ಅಡ್ಡ-ಮಾಲಿನ್ಯದ ಅಪಾಯವು ಹೆಚ್ಚು. ಟಾಯ್ಲೆಟ್ ಸೀಟ್‌ಗಳ ಮೇಲೆ ಇರುವ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳು ಸುಲಭವಾಗಿ ಫೋನ್‌ನ ಮೇಲ್ಮೈಗೆ ವರ್ಗಾವಣೆಯಾಗಬಹುದು. ಇದು ಸೋಂಕಿನ ಮೂಲವಾಗಿ ಪರಿಣಮಿಸುತ್ತದೆ. ಈ ಹಾನಿಕಾರಕ ಸೂಕ್ಷ್ಮಜೀವಿಗಳು ಬಾಯಿ, ಕಣ್ಣು ಅಥವಾ ಮೂಗಿನ ಸಂಪರ್ಕದ ಮೂಲಕ ದೇಹಕ್ಕೆ ತಮ್ಮ ದಾರಿಯನ್ನು ಕಂಡುಕೊಳ್ಳಬಹುದು.


ಇದನ್ನೂ ಓದಿ: Skin cancer: ದೇಹದ ಮೇಲಿನ ಮಚ್ಚೆ ನೀಡುತ್ತೆ ಚರ್ಮದ ಕ್ಯಾನ್ಸರ್‌ನ ಸೂಚನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.