ಲಂಡನ್​: ಸೀಟ್​ ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣಿಸಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್‍ಗೆ ಪೊಲೀಸರು ದಂಡ ವಿಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಸೋಷಿಯಲ್ ಮೀಡಿಯಾದಲ್ಲಿ ಲೈವ್ ವಿಡಿಯೋ ಮಾಡುವ ವೇಳೆ ರಿಷಿ ಸುನಕ್ ಸೀಟ್‍ಬೆಲ್ಟ್ ಧರಿಸದೇ ಕಾರಿನ ಹಿಂಬದಿ ಸೀಟ್‍ನಲ್ಲಿ ಕುಳಿತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಗಮನಿಸಿದ ಬ್ರಿಟನ್ ಪೊಲೀಸರು ರಿಷಿಗೆ ದಂಡ ವಿಧಿಸಿದ್ದು, ಬ್ರಿಟನ್ ಪಿಎಂ ಮುಜುಗರ ಅನುಭವಿಸಿದ್ದಾರೆ.


ಇದನ್ನೂ ಓದಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ : ಏರ್ ಇಂಡಿಯಾಗೆ 30 ಲಕ್ಷ ದಂಡ!


ಈ ಬಗ್ಗೆ ​ಪ್ರತಿಕ್ರಿಯಿಸಿರುವ ರಿಷಿ ಸುನಕ್, ‘ಇದು ತಿಳುವಳಿಕೆಯ ಸಣ್ಣ ಪ್ರಮಾದ’ ಎಂದು ಹೇಳಿದ್ದಾರೆ. ಉತ್ತರ ಇಂಗ್ಲೆಂಡ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುವ ವೇಳೆ ಈ ಘಟನೆ ನಡೆದಿದೆ. ಇದು ರಿಷಿಯವರಿಗೆ ವಿಧಿಸಿದ 2ನೇ ದಂಡವಾಗಿದೆ. ಕಳೆದ ವರ್ಷ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಂದಿನ ಪ್ರಧಾನಿ ಬೋರಿಸ್​ ಜಾನ್ಸನ್​ ಸೇರಿ ರಿಷಿಗೆ ದಂಡ ವಿಧಿಸಲಾಗಿತ್ತು.


ಟ್ರಾಫಿಕ್ ನಿಯಮ ಉಲ್ಲಂಘಿಸಿರುವ ಬಗ್ಗೆ ತಪ್ಪಾಗಿದೆ ಎಂದು ಪ್ರಧಾನಿ ರಿಷಿ ಸುನಕ್ ತಪ್ಪು ಒಪ್ಪಿಕೊಂಡಿದ್ದು, ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ. ರಿಷಿಯವರು ಬ್ರಿಟನ್ ಪೊಲೀಸರು ವಿಧಿಸರುವ ದಂಡವನ್ನು ಖಂಡಿತ ಪಾವತಿಸಲಿದ್ದಾರೆ ಎಂದು ಅವರ ಡೌನಿಂಗ್ ಸ್ಟ್ರೀಟ್ ಕಚೇರಿ ವಕ್ತಾರರು ತಿಳಿಸಿದ್ದಾರೆ.


ಇದನ್ನೂ ಓದಿ: Periods Leave: ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಿ ಕೇರಳ ಸರ್ಕಾರದ ಆದೇಶ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.