ನವದೆಹಲಿ: ಯುರೋಪಿಯನ್ ಒಕ್ಕೂಟದೊಂದಿಗಿನ ಬ್ರಿಟನ್‌ನ ನಿರ್ಗಮನ ಒಪ್ಪಂದವು ಗುರುವಾರ ಅಧಿಕೃತವಾಗಿ ಕಾನೂನಾಗಿ ಮಾರ್ಪಟ್ಟಿದೆ. ಬ್ರೆಕ್ಸಿಟ್ ಹೇಗೆ, ಯಾವಾಗ ಮತ್ತು ಯಾವಾಗ ನಡೆಯಬೇಕು ಎಂಬುದರ ಕುರಿತು ಮೂರು ವರ್ಷಗಳ ಚರ್ಚೆ ನಂತರ ಬುಧವಾರ ತನ್ನ ಅಂತಿಮ ಸಂಸತ್ತಿನ ಹಂತದಲ್ಲಿ ಅಂಗೀಕಾರವಾಯಿತು.



COMMERCIAL BREAK
SCROLL TO CONTINUE READING

ಬ್ರಿಟನ್ ರಾಣಿ ಎಲಿಜಬೆತ್ II ಗುರುವಾರ ಈ ಕಾನೂನಿಗೆ ಔಪಚಾರಿಕ ಅನುಮೋದನೆ ನೀಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಬ್ರೆಕ್ಸಿಟ್ ಕಾರ್ಯದರ್ಶಿ ಸ್ಟೀವ್ ಬಾರ್ಕ್ಲೇ ರಾಣಿ ಎಲಿಜಬೆತ್ ಬ್ರೆಕ್ಸಿಟ್ ಗೆ ಅಂಕಿತ ಹಾಕಿರುವುದರಿಂದ ಇದು ಈಗ ಬ್ರೆಕ್ಸಿಟ್ ಕಾಯ್ದೆಯಾಗುತ್ತದೆ.ಜನವರಿ 31ಕ್ಕೆ ಯುರೋಪಿಯನ್ ಒಕ್ಕೂಟವನ್ನು ತೊರೆಯಲು ಅನುವುಮಾಡಿಕೊಡುತ್ತದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.


ಜನವರಿ 31 ರಂದು ಬ್ರಿಟನ್ ಬ್ರೆಕ್ಸಿಟ್ ಒಕ್ಕೂಟದಿಂದ ಹೊರಬರಲಿದೆ. ಇಯು ಸಂಸತ್ತಿನಲ್ಲಿ ಒಪ್ಪಿಗೆ ಮತದಾನ ಜನವರಿ 29 ರಂದು ನಡೆಯಲಿದೆ. ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಮುಂಬರುವ ದಿನಗಳಲ್ಲಿ ಹಿಂತೆಗೆದುಕೊಳ್ಳುವ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕುವ ಸಾಧ್ಯತೆಯಿದೆ.