Heathrow Airportನಲ್ಲಿ ಇದ್ದಕ್ಕಿದಂತೆ ಮುರಿದೇ ಬಿತ್ತು ವಿಮಾನ, ಮುಂದೆ..?
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ವಿಮಾನದ ಬಳಿ ತುರ್ತು ಸೇವೆಗಾಗಿ ಹಲವು ವಾಹನಗಳಿವೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ಎಂಜಿನ್, ಆಂಬ್ಯುಲೆನ್ಸ್ ಮತ್ತು ಪೊಲೀಸ್ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿದೆ.
ಲಂಡನ್ : ಯುನೈಟೆಡ್ ಕಿಂಗ್‌ಡಂನ (United Kingdom) ಹೀಥ್ರೂ ವಿಮಾನ ನಿಲ್ದಾಣದಲ್ಲಿ (Heathrow Airport) ಬ್ರಿಟಿಷ್ ಏರ್ವೇಸ್ ವಿಮಾನ ಶುಕ್ರವಾರ ಅಪಘಾತಕ್ಕೀಡಾಗಿದೆ. ವಿಮಾನದ ಮುಂಭಾಗ ಇದ್ದಕ್ಕಿದಂತೆ ಮುರಿದು ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪರದಾಡುವಂತಾಯಿತು.
ಅಪಘಾತಕ್ಕೀಡಾದ ಬ್ರಿಟಿಷ್ ಏರ್ವೇಸ್ ವಿಮಾನ :
ದಿ ಸನ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರಸ್ತುತ ವಿಮಾನ ನಿಲ್ದಾಣದಲ್ಲಿ (Airport) ಅಪಘಾತಕ್ಕೀಡಾದ ವಿಮಾನದ ಬಳಿ ತುರ್ತು ಸೇವೆಗಾಗಿ ಹಲವು ವಾಹನಗಳಿವೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ಎಂಜಿನ್, ಆಂಬ್ಯುಲೆನ್ಸ್ (Ambulance) ಮತ್ತು ಪೊಲೀಸ್ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿದೆ. ಈ ಅಪಘಾತದಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಇನ್ನೂ ವರದಿಯಾಗಿಲ್ಲ.
ಇದನ್ನೂ ಓದಿ : Male Pregnancy: ಇನ್ಮುಂದೆ ಪುರುಷರೂ ಕೂಡ ಗರ್ಭಧರಿಸಬಹುದಂತೆ, ತಲೆಕೆಟ್ಟ ಚೀನಾ ವಿಜ್ಞಾನಿಗಳಿಂದ ವಿಲಕ್ಷಣ ಆವಿಷ್ಕಾರ
ನೆಲಕ್ಕುರುಳಿದ ವಿಮಾನದ ಭಾಗ :
ಅಪಘಾತಕ್ಕೀಡಾದ ವಿಮಾನವನ್ನು (flight) ಬೋಯಿಂಗ್ 787 ಎಂದು ಗುರುತಿಸಲಾಗಿದೆ. ವಿಮಾನದ ಮುಂಭಾಗ ನೆಲಕ್ಕೆ ಉರುಳಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ವಿಮಾನದ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದಿದೆ ಎಂದು ಬ್ರಿಟಿಷ್ ಏರ್ವೇಸ್ ( British Airways) ವಕ್ತಾರರು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ. ಹಾಗಾಗಿ ಪ್ರಯಾಣಿಕರಿಗೆ ಏನೂ ಆಗಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : Lambda COVID-19 New Variant: 29 ದೇಶಗಳಲ್ಲಿ ದೊರೆತ ಕೊವಿಡ್-19 ಲ್ಯಾಮ್ದಾ ರೂಪಾಂತರಿ, WHO ಹೇಳಿದ್ದೇನು?
ಅಪಘಾತಕ್ಕೀಡಾದ ವಿಮಾನವು ಜೂನ್ 16 ರಂದು ರಷ್ಯಾದ ಮಾಸ್ಕೋದಿಂದ (Masco) ಹೊರಟು ಲಂಡನ್‌ನ ಹೆಟ್ರೊ ವಿಮಾನ ನಿಲ್ದಾಣವನ್ನು ತಲುಪಿತ್ತು. ಇದೀಗ ಶುಕ್ರವಾರ ವಿಮಾನ ನಿಲ್ದಾಣದಲ್ಲೇ ಈ ಘಟನೆ ನಡೆದಿದ್ದು, ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.