ಸಾಮಾನ್ಯವಾಗಿ ಮೊಸಳೆ ಮತ್ತು ಸಿಂಹದ ಬೇಟೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಸಿಂಹದಿಂದ ಜೀವ ಉಳಿಸಿಕೊಳ್ಳಲು ನದಿಗೆ ಧುಮುಕಿದ ಎಮ್ಮೆ ಮೊಸಳೆಗೆ ಸಿಕ್ಕಾಗ ಏನಾಗುತ್ತೆ? ಹೌದು, ಎಮ್ಮೆಯೊಂದು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಸಿಂಹದಿಂದ ಮೊಸಳೆ ಬಾಯಿಯತ್ತ, ಮೊಸಳೆಯಿಂದ ಮತ್ತೆ ಸಿಂಹದ ಕೈಗೆ ಸಿಗುವ ಎಮ್ಮೆ ಹೇಗೆ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ದಕ್ಷಿಣ ಆಫ್ರಿಕಾದಲ್ಲಿನ ಕ್ರೂಸರ್ ನ್ಯಾಶನಲ್ ಪಾರ್ಕ್ನಲ್ಲಿನ ವಿಶೇಷ ದೃಶ್ಯವೊಂದನ್ನು ಈ ವಿಡಿಯೋದಲ್ಲಿ ನೋಡಬಹುದು. ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದಿಂದ ಬಚಾವ್ ಆಗಲು ನೀರಿಗೆ ಜಿಗಿದ ಎಮ್ಮೆ ಅಲ್ಲಿ ಮೊಸಳೆ ಕೈಗೆ ಸಿಕ್ಕಿಕೊಳ್ಳುತ್ತದೆ. ಈ ವೇಳೆ ಮೊಸಳೆಯಿಂದ ಹೇಗೋ ಬಚಾವ್ ಆದ ಎಮ್ಮೆಯನ್ನು ಮತ್ತೆ ಸಿಂಹಗಳು ಸುತ್ತುವರಿಯುತ್ತವೆ. ಸಿಂಹದ ಬಾಯಿಗೆ ಇನ್ನೇನು ಬಿದ್ದೇ ಬಿಡುತ್ತೆ ಎನ್ನುವ ಪ್ರಸಂಗದಲ್ಲಿ, ತನ್ನ ಚಾಣಾಕ್ಷ ತನದಿಂದ ಎಮ್ಮೆ ಬಚಾವ್ ಆಗೋದನ್ನ ನೋಡಿದ್ದೀರಾ... ಇಲ್ಲಿದೆ ಈ ರೋಚಕ ವಿಡಿಯೋ ....


ಬೇಟೆಗಾಗಿ ಹೊಂಚುಹಾಕಿ ಕುಳಿತಿದ್ದ ಸಿಂಹ ಮತ್ತು ಮೊಸಳೆಗೆ ಚಳ್ಳೆ ಹಣ್ಣು ತಿನ್ನಿಸಿ ಜೀವ ರಕ್ಷಿಸಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಮ್ಮೆಯ ಶೌರ್ಯ ಎಂದು ಜನರು ಎಮ್ಮೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.