ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಬುರ್ಖಾ ಹಾಕಿಕೊಂಡು ಓಡಾಡುವಂತಿಲ್ಲ ಎಂದು ಹೊಸ ಕಾನೂನು ಜಾರಿ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಸ್ವಿಟ್ಜರ್ಲ್ಯಾಂಡ್‌ ದೇಶದಲ್ಲಿ ಬುರ್ಖಾ ಮೇಲೆ ನಿಷೇಧ ಹೇರಲಾಗಿದೆ. ಕಣ್ಣು, ಬಾಯಿ, ಮೂಗು ಮುಚ್ಚಿಕೊಳ್ಳಿವ ಉಡುಪನ್ನು ಧರಿಸುವುದಕ್ಕೆ ಹಾಗೂ ಮುಖ ಗವಸನ್ನು ಧರಿಸುವುದಕ್ಕೆ ನಿಷೇಧವನ್ನು ಹೇರಿದೆ. ಮುಂದಿನ ವರ್ಷವೇ ಈ ಕಠಿಣ ಕಾನೂನು ಕ್ರಮ ಜಾರಿಯಾಗಲಿದೆ.  ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಬುಧವಾರ ತಿಳಿಸಿದೆ. ಈ ನಿಮಯವನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುವುದು ಎಂದು ಸ್ವಿಸ್‌ ಸರ್ಕಾರ ತಿಳಿಸಿದೆ.  


ಇಸ್ಲಾಂ ಧರ್ಮದ ಸಂಪ್ರದಾಯದಂತೆ ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಬರುವಾಗ ಬುರ್ಖಾ ಧರಿಸುತ್ತಾರೆ. ಆದರೆ ಕೆಲವು ದೇಶಗಳಲ್ಲಿ ಬುರ್ಖಾ ನಿಷೇಧವಿದೆ. ಫ್ರಾನ್ಸ್‌, ಚೀನಾ, ಡೆನ್ಮಾರ್ಕ್‌, ಬಲ್ಗೇರಿಯಾ, ಆಸ್ಟ್ರೀಯಾ, ಬೆಲ್ಜಿಯಮ್‌ ಇತ್ಯಾದಿ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವಂತಿಲ್ಲ. ಇದೀಗ ಸ್ವಿಟ್ಜರ್ಲ್ಯಾಂಡ್‌ ಕೂಡ ಇಂಥ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಜಾರಿಗೊಳಿಸಿದೆ.


ಇದನ್ನೂ ಓದಿ: ಗೆಳೆಯ ಟ್ರಂಪ್‌ ಗೆಲುವಿಗೆ ಪ್ರಧಾನಿ ಮೋದಿ ಸಂತಸ..! ಯುಸ್‌-ಭಾರತದ ಸಂಬಂಧ.. ಚೀನಾಗೆ ಕಂಟಕವಾಗುತ್ತಾ..?


ಸ್ವಿಟ್ಜರ್ಲ್ಯಾಂಡ್‌ನ ಆಡಳಿತ ಸರ್ಕಾರ ಪೀಪಲ್ಸ್‌ ಪಾರ್ಟಿ ಬುರ್ಖಾ ಬ್ಯಾನ್‌ ಮಾಡಿದೆ. ಸ್ವಿಸ್‌ ಸಂಸತ್‌ ಮೇಲ್ಮನೆಯಲ್ಲಿ ಈ ಮಸೂದೆಗೆ ಅಂಗೀಕಾರ ಕೂಡ ಸಿಕ್ಕಾಗಿದೆ. ಅಲ್ಲದೆ 2021 ರ ಜನಾಭಿಪ್ರಾಯ ಸಂಗ್ರಹಣೆಯಲ್ಲಿಯೂ ಬುರ್ಖಾ ಬ್ಯಾನ್‌ ಮೇಲೆ ಅನೇಕರು ಒಮ್ಮತ ಸೂಚಿಸಿದ್ದರು. ಆದರೆ ಸ್ವಿಟ್ಜರ್ಲ್ಯಾಂಡ್‌ ಸರ್ಕಾರದ ಬುರ್ಖಾ ಬ್ಯಾನ್‌ ನಿರ್ಧಾರಕ್ಕೆ ಭಾರೀ ವಿರೋಧ ಕೇಳಿಬಂದಿದೆ. 2025 ರ ಜನವರಿ 1 ರಿಂದ ಈ ಕಠಿಣ ನಿಯಮ ಜಾರಿಗೆ ಬರಲಿದೆ. ಒಂದು ವೇಳೆ ಯಾರಾದರೂ ನಿಯಮವನ್ನು ಉಲ್ಲಂಘಿಸಿದರೇ 1,000 ಸ್ವಿಸ್‌ ಫ್ರಾಂಕ್‌ ಅಂದರೆ ಅಂದಾಜು 96,280 ರೂ. ದಂಡವನ್ನು ಹಾಕಲಾಗುವುದು ಎಂದು ಸರ್ಕೃ ತನ್ನ ಆದೇಶದಲ್ಲಿ ತಿಳಿಸಿದೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.


ವಿಮಾನ, ರಾಜತಾಂತ್ರಿಕ ಸ್ಥಳಗಳು, ಪವಿತ್ರ ಸ್ಥಳಗಳು, ಪೂಜಾ ಆವರಣಗಳಲ್ಲಿ ಬುರ್ಖಾಗಳನ್ನು ಧರಿಸಬಹುದು ಎಂದು ಸರ್ಕಾರ ತಿಳಿಸಿದೆ. ಆರೋಗ್ಯ ಮತ್ತು ಸುರಕ್ಷತೆ, ವಿಪರೀತ ಚಳಿಯ ಸಂದರ್ಭ, ಜಾಹೀರಾತು ಮನರಂಜನಾ ಉದ್ದೇಶಗಳಿಗಾಗಿ ಬುರ್ಖಾ ಮತ್ತು ಮುಖ ಗವಸು ಧರಿಸಬಹುದು. ಸಂಬಂಧಿಸಿದ ಪ್ರಾಧಿಕಾರ ಪೂರ್ವ ಅನುಮತಿ ನೀಡಿದರೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ವೈಯಕ್ತಿಕ ರಕ್ಷಣೆಗಾಗಿ ಬುರ್ಖಾ ಅಥವಾ ಮುಖ ಗವಸು ಧರಿಸಬಹುದು ಎಂದು ಸ್ವಿಸ್‌ ಸರಕಾರ ಹೇಳಿದೆ.


ಇದನ್ನೂ ಓದಿ: ತಿಮಿಂಗಿಲ ಸತ್ತು 26 ವರ್ಷಗಳು ಕಳೆದರೂ ಅದರ ಅಸ್ಥಿಪಂಜರದಿಂದ ಸೋರುತ್ತಿದೆ ಎಣ್ಣೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.