ಭವಿಷ್ಯದ ತಂತ್ರಜ್ಞಾನ: ಪ್ರತಿದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಮುಂಬರುವ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ. ಭವಿಷ್ಯದಲ್ಲಿ ಸ್ವಯಂ ಚಾಲಿತ ಕಾರುಗಳು ಬರಲಿವೆ. ಮಾನವರ ಹೆಚ್ಚಿನ ಕೆಲಸವನ್ನು ರೋಬೋಟ್‌ಗಳು ಮಾಡುತ್ತವೆ ಮತ್ತು ಪ್ರತಿಯೊಬ್ಬರಿಗೂ ಬಾಹ್ಯಾಕಾಶಕ್ಕೆ ಹೋಗಲು ಸುಲಭವಾಗುತ್ತದೆ. ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಲು ಭಾರತ ಸೇರಿದಂತೆ ಹಲವು ದೇಶಗಳು ಈಗಾಗಲೇ ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂದು ನಾವು ನಿಮ್ಮನ್ನು ದಕ್ಷಿಣ ಕೊರಿಯಾಕ್ಕೆ ಕರೆದೊಯ್ಯುತ್ತಿದ್ದೇವೆ, ಅಲ್ಲಿ 2053ರಲ್ಲಿ ಜಗತ್ತು ಹೇಗಿರುತ್ತದೆ ಎಂಬುದಕ್ಕೆ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ.


COMMERCIAL BREAK
SCROLL TO CONTINUE READING

ಫ್ಯೂಚರ್ ಟೆಕ್ ಸೆಂಟರ್‌ನಲ್ಲಿ ಭವಿಷ್ಯದ ನೋಟ


2053ರಲ್ಲಿ ಜಗತ್ತು ಹೇಗಿರುತ್ತದೆ ಎಂಬುದನ್ನು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿರುವ ಫ್ಯೂಚರ್ ಟೆಕ್ ಸೆಂಟರ್‌ನಲ್ಲಿ ಅನುಭವಿಸಬಹುದು. ಇಂದಿಗೆ ಹೋಲಿಸಿದರೆ 30 ವರ್ಷಗಳ ನಂತರ ನೀವು ಕಡಿಮೆ ಸಮಯದಲ್ಲಿ ಸಾವಿರಾರು ಕಿಲೋಮೀಟರ್ ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ ಎಂದು ಇಲ್ಲಿ ತೋರಿಸಲಾಗಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ವಿಶೇಷ ಲೂಪ್‌ಗಳಿದ್ದು, ಇದು ಎಲ್ಲಾ ಸೌಕರ್ಯಗಳನ್ನು ಹೊಂದಿರುತ್ತದೆ.


ಇದನ್ನೂ ಓದಿ: 5.46 ಇಂಚಿನ ನಾಲಿಗೆಯೊಂದಿಗೆ  ಗಿನ್ನಿಸ್ ದಾಖಲೆ ನಿರ್ಮಿಸಿದ ನಾಯಿ..!


ಭೂಮಿಯಂತೆಯೇ ಬಾಹ್ಯಾಕಾಶದಲ್ಲಿ ಮನುಷ್ಯನ ಜಿಗಿತವೂ ವೇಗವಾಗುತ್ತದೆ ಎಂದು ಫ್ಯೂಚರ್ ಟೆಕ್ ಸೆಂಟರ್‌ನಲ್ಲಿ ಹೇಳಲಾಗಿದೆ. ಸ್ವಯಂಚಾಲಿತ ರೋಬೋಟಿಕ್ ಸಿಸ್ಟಮ್ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸುವುದು ತುಂಬಾ ಸುರಕ್ಷಿತ ಮತ್ತು ಸುಲಭವಾಗಲಿದೆ.  


ಸಕಾಲದಲ್ಲಿ ಪ್ರಕೃತಿ ವಿಕೋಪ ನಿಭಾಯಿಸಬಹುದು!


ಕೊರಿಯಾದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಎಸ್‍ಕೆ ಟೆಲಿಕಾಂ ನಿರ್ಮಿಸಿರುವ ಈ ಟೆಕ್ ಸೆಂಟರ್‍ನಲ್ಲಿ ಬಾಹ್ಯಾಕಾಶ ನಿಲ್ದಾಣದ ಮೂಲಕ ಭೂಮಿಯ ಮೇಲೆ ಬರುವ ಯಾವುದೇ ಪ್ರಕೃತಿ ವಿಕೋಪವನ್ನು ಸಕಾಲದಲ್ಲಿ ನಿಭಾಯಿಸಬಹುದು ಎಂಬುದನ್ನು ನಿರೂಪಿಸಲಾಗಿದೆ. ಇದಷ್ಟೇ ಅಲ್ಲ ಉಲ್ಕಾಶಿಲೆ ಭೂಮಿಯೆಡೆಗೆ ಬಂದರೆ ಅದನ್ನು ಹೇಗೆ ಎದುರಿಸಲಾಗುವುದು ಎಂಬ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಬರಲಿರುವ ಸಮಯ ಅತ್ಯಂತ ಕ್ರಾಂತಿಕಾರಿಯಾಗಲಿದ್ದು, ರೋಬೋಟ್‌ಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು.


ದಕ್ಷಿಣ ಕೊರಿಯಾ ನಂ.1 ಆಗಲಿದೆ!


ವಾಸ್ತವವಾಗಿ ಇದು ಭವಿಷ್ಯದ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ವಸ್ತುಸಂಗ್ರಹಾಲಯವಲ್ಲ. ದಕ್ಷಿಣ ಕೊರಿಯಾ ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ನಂಬರ್ 1 ದೇಶವಾಗಲು ತಯಾರಿ ಆರಂಭಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿಕಡಿಮೆ ಸಮಯದಲ್ಲಿ ತಮ್ಮ ಛಾಪು ಮೂಡಿಸಿದ ರೀತಿಯನ್ನು ಉಳಿಸಿಕೊಳ್ಳಲು ಈ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರಿಸುವುದು ಅಗತ್ಯ ಎಂಬುದು ಕೊರಿಯಾದ ನಂಬಿಕೆಯಾಗಿದೆ.


ಇದನ್ನೂ ಓದಿ: Lahore ನಲ್ಲಿ ಕುಳಿತು ಭಾರತದ ವಿರುದ್ಧ ಪಿತೂರಿ, ಪಾಕ್-ಐಎಸ್ಐ ಸಂಚು ಬಹಿರಂಗ


ಈ ಮೂಲಕ ಮಿಷನ್ ಪೂರ್ಣಗೊಳ್ಳಲಿದೆ


ಕೊರಿಯಾದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳು ಭವಿಷ್ಯಕ್ಕಾಗಿ ಹೇಗೆ ತಯಾರಿ ನಡೆಸಬೇಕು ಎಂಬುದನ್ನು ಈ ವಸ್ತುಸಂಗ್ರಹಾಲಯಗಳ ಮೂಲಕ ವಿವರಿಸಲಾಗಿದೆ. ಕೊರಿಯಾದಲ್ಲಿ ಸಂವಹನದಿಂದ ಹಿಡಿದು ಸ್ವಯಂ ಚಾಲಿತ ಕಾರುಗಳು ಮತ್ತು ತಂತ್ರಜ್ಞಾನದವರೆಗೆ ಬಹಳಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ಕೊರಿಯಾದಲ್ಲಿ ಯಾವುದೇ ರೀತಿಯ ಅಪಘಾತವನ್ನು ಸಂಪೂರ್ಣವಾಗಿ ನಿಲ್ಲಿಸುವ ಸೆನ್ಸಾರ್ ಹೊಂದಿರುವ ಕಾರಿನ ತಂತ್ರಜ್ಞಾನದ ಮೇಲೆ ಕೆಲಸ ಮಾಡಲಾಗುತ್ತಿದೆ. ಅದರಲ್ಲಿ ಕುಳಿತವರು ಸಂಪೂರ್ಣ ಸೇಫ್ ಆಗಿರಬೇಕು ಆ ರೀತಿಯ ತಂತ್ರಜ್ಞಾನ ರೂಪಿಸಲಾಗುತ್ತಿದೆ. ಕೊರಿಯಾದ ಬಹುತೇಕ ಕಾರು ಕಂಪನಿಗಳು ಕೇವಲ 24 ಗಂಟೆಯಲ್ಲಿ ಕಾರನ್ನು ತಯಾರಿಸಿ ಸಂಪೂರ್ಣ ರೋಬೋಟಿಕ್ ಮಾಡುತ್ತಿವೆ. ಆದರೆ ಈಗ ಕಡಿಮೆ ಸಮಯದಲ್ಲಿ ಈ ಕಾರುಗಳನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ.


ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗಿದೆ ತಯಾರಿ?


ಅಷ್ಟಕ್ಕೂ ಕೊರಿಯಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ತಯಾರಿ ನಡೆಸುತ್ತಿದೆ? Zee News ತಂಡವು ಅದರ ಕಾರ್ಯತಂತ್ರವನ್ನು ಅರ್ಥಮಾಡಿಕೊಳ್ಳಲು ಕೊರಿಯಾದ ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯಾವನ್ನು ತಲುಪಿದೆ. ಸಿಯೋಲ್ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಏರೋಸ್ಪೇಸ್ ಟೆಕ್ನಾಲಜಿ ವಿಭಾಗದಲ್ಲಿ, ಡ್ರೋನ್ ಮತ್ತು ರಾಕೆಟ್‌ಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಕಂಡು ಜೀ ನ್ಯೂಸ್ ಮಾತನಾಡಿಸಿದೆ. ಯುರೋಪಿಯನ್ನರು ಮತ್ತು ಅಮೆರಿಕಕ್ಕೆ ಹೋಲಿಸಿದರೆ ದಕ್ಷಿಣ ಕೊರಿಯಾದಲ್ಲಿ ಕಾಲೇಜು ಶುಲ್ಕಗಳು ಕಡಿಮೆ ಇದ್ದು, ಫೆಲೋಶಿಪ್‌ಗಳನ್ನು ಸಹ ನೀಡುತ್ತಿರುವುದರಿಂದ ನಾವು ಇಲ್ಲಿಗೆ ಬರಲು ಸುಲಭವಾಗುತ್ತದೆ ಎಂದು ಭಾರತೀಯ ವಿದ್ಯಾರ್ಥಿಯೊಬ್ಬರು ಜೀ ನ್ಯೂಸ್‍ಗೆ ತಿಳಿಸಿದ್ದಾರೆ.


ಭಾರತದಂತೆಯೇ ಕೊರಿಯಾ ಕೂಡ ಶೀಘ್ರದಲ್ಲೇ ಚಂದ್ರಯಾನ ಮತ್ತು ಮಂಗಳಯಾನ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಬಯಸಿದೆ. ಈ ವರ್ಷದ ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾ ಮೊದಲ ಬಾರಿಗೆ ಸ್ವದೇಶಿ ರಾಕೆಟ್ ‘ನೂರಿ’ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ದಕ್ಷಿಣ ಕೊರಿಯಾ 2032ರಲ್ಲಿ ತನ್ನ ರಾಕೆಟ್ ಅನ್ನು ಚಂದ್ರನ ಮೇಲೆ ಇಳಿಸಲು ಬಯಸಿದೆ ಮತ್ತು 2045ರ ವೇಳೆಗೆ ಮಂಗಳವನ್ನು ತಲುಪುವ ಮಹತ್ವಾಕಾಂಕ್ಷೆಯನ್ನೂ ಸಹ ಹೊಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.