ಈ ಕಾರಣಕ್ಕಾಗಿ ಕೆನಡಾದ ರಸ್ತೆಗಳಲ್ಲೂ ರಾರಾಜಿಸುತ್ತಿದೆ ನರೇಂದ್ರ ಮೋದಿ ಫ್ಲೆಕ್ಸ್ ಗಳು
ಭಾರತದಲ್ಲಿ ಈಗಾಗಲೇ ಕರೋನಾ ಲಸಿಕಾ ಅಭಿಯಾನ ನಡೆಯುತ್ತಿದೆ. ಈ ಮಧ್ಯೆ, ಭಾರತದ ವಿದೇಶಗಳಿಗೂ ಕರೋನಾ ಲಸಿಕೆ ಪೂರೈಸುವ ಕಾರ್ಯ ಮಾಡುತ್ತಿದೆ. ಭಾರತದ ಕಾರ್ಯಕ್ಕೆ ಎಲ್ಲೆಡೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಟೊರೊಂಟೊ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಬಗ್ಗೆ ಕೆನಡಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಗ್ರೇಟರ್ ಟೊರೊಂಟೊದ ರಸ್ತೆಗಳ ಬದಿಯಲ್ಲಿ ನರೇಂದ್ರ ಮೋದಿ ಅವರ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿದೆ. ಈ ಪೋಸ್ಟರ್ ಗಳ ಮೂಲಕ ಅಲ್ಲಿನ ಜನ ಭಾರತದ ಪ್ರಧಾನಿಗೆ ಧನ್ಯವಾದ ಸಮರ್ಪಿಸುತ್ತಿದ್ದಾರೆ. ಭಾರತ ಕೆನಡಾಗೆ ಕರೋನಾ ಲಸಿಕೆ (Corona vaccine) ಪೂರೈಸಿರುವ ಕಾರಣಕ್ಕೆ ಅಲ್ಲಿನ ಜನ ಮೋದಿ ಅವರಿಗೆ ಧನ್ಯವಾದ ಹೇಳುತ್ತಿದ್ದಾರೆ.
ವಿಶ್ವದಾದ್ಯಂತ ಭಾರತಕ್ಕೆ ಪ್ರಶಂಸೆ :
ಭಾರತದಲ್ಲಿ ಈಗಾಗಲೇ ಕರೋನಾ ಲಸಿಕಾ (Corona vaccine) ಅಭಿಯಾನ ನಡೆಯುತ್ತಿದೆ. ಈ ಮಧ್ಯೆ, ಭಾರತ ವಿದೇಶಗಳಿಗೂ ಕರೋನಾ ಲಸಿಕೆ ಪೂರೈಸುವ ಕಾರ್ಯ ಮಾಡುತ್ತಿದೆ. ಭಾರತದ ಕಾರ್ಯಕ್ಕೆ ಎಲ್ಲೆಡೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಭಾರತ ಇತ್ತೀಚೆಗೆ ಕರೋನಾ ಲಸಿಕೆಯನ್ನು ಕೆನಡಾ (Canada), ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಿಗೆ ಒದಗಿಸಿತ್ತು.
ಇದನ್ನೂ ಓದಿ : West Bengal: ಪಿಎಂ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
ಕೆನಡಾಗೆ 5 ಲಕ್ಷ ಲಸಿಕೆಗಳನ್ನು ಕಳುಹಿಸಿದ ಭಾರತ :
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಐದು ಲಕ್ಷ ಡೋಸ್ ಕೋವಿಶೀಲ್ಡ್ (Covishield)ಲಸಿಕೆ ಕೆನಡಾಕ್ಕೆ ತಲುಪಿದೆ ಎಂದು ಇತ್ತೀಚೆಗೆ ಕೆನಡಾದ ಸಚಿವ ಅನಿತಾ ಆನಂದ್ ಹೇಳಿದ್ದಾರೆ. ಕರೋನಾ ಲಸಿಕೆ ನೀಡುವಂತೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಮನವಿ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಭಾರತ, ಕೆನಡಾ ಕೇಳಿದ ಕೋವಿಡ್ ಲಸಿಕೆಯ ಪ್ರಮಾಣವನ್ನು ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಭರವಸೆ ನೀಡಿತ್ತು.
ಹನುಮಾನ್ ಫೋಟೋ ಹಂಚಿಕೊಂಡಿದ್ದ ಬ್ರೆಜಿಲ್ ಅಧ್ಯಕ್ಷ :
ಭಾರತದಿಂದ 20 ಲಕ್ಷ ಡೋಸ್ ಕರೋನಾ ವೈರಸ್ (Corona Virus) ಲಸಿಕೆ ಪಡೆದ ನಂತರ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಕೂಡಾ ಧನ್ಯವಾದ ಅರ್ಪಿಸಿದ್ದರು. ಭಗವಾನ್ ಹನುಮಾನ್ (Hanuman) ಸಂಜೀವನಿ ಬೂಟಿಯನ್ನು ತೆಗೆದುಕೊಂಡು ಹೋಗುವ ಪೋಟೋವನ್ನು ಟ್ವೀಟರ್ ನಲ್ಲಿ (twitter) ಶೇರ್ ಮಾಡಿ, ಭಾರತ ಮತ್ತು ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದರು. ಅಲ್ಲದೆ ಹಿಂದಿಯಲ್ಲಿಯೇ ಧನ್ಯವಾದ ಎಂದು ಬರೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದರು.
ಇದನ್ನೂ ಓದಿ : PM Modi: 15 ತಿಂಗಳ ಬಳಿಕ ವಿದೇಶಕ್ಕೆ ಹಾರಲು ಸಜ್ಜಾದ ಪ್ರಧಾನಿ ಮೋದಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.