Civil Aviation Authority Of New Zealand ​​ತನ್ನ ವಿಮಾನದಲ್ಲಿ ಪ್ರಯಾಣಿಸುವ ಯಾತ್ರಿಗಳ ತೂಕ ಪರಿಶೀಲನೆಗೆ ಮುಂದಾಗಿದೆ. ವಿಮಾನ ಟೇಕ್ ಆಫ್ ಆಗುವ ಮೊದಲು ಈ ತೂಕವನ್ನು ಮಾಡಲಾಗುತ್ತದೆ. ಹೆಚ್ಚಿನ ಜನರು ತಮ್ಮ ಗಮ್ಯಸ್ಥಾನವನ್ನು ತ್ವರಿತವಾಗಿ ತಲುಪಲು ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಈಗ ಹೇಳಿ ವಿಮಾನ ಹತ್ತುವ ಮೊದಲು ನಿಮ್ಮ ತೂಕ ಪರಿಶೀಲನೆ ನಡೆಸಿ ನಿಮ್ಮನ್ನು ವಿಮಾನದಲ್ಲಿ ಕೂರಿಸಿದರೆ ನಿಮಗೆ ಹೇಗೆ ಅನ್ನಿಸಲಿದೆ? ಅನೇಕ ಜನರಿಗೆ ಇದು ಕೇಳಲೂ ಕೂಡ ಅಹಿತಕರವಾಗಿರಬಹುದು, ಆದರೆ ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನವು ಈ ರೀತಿಯ ಕೆಲಸಕ್ಕೆ ಕೈಹಾಕಲಿದೆ. ಈ ಕುರಿತಾದ ಮಾಧ್ಯಮ ವರದಿಗಳನ್ನು ನಂಬುವುದಾದರೆ, ಆಕ್ಲೆಂಡ್ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಎಲ್ಲಾ ಪ್ರಯಾಣಿಕರ ತೂಕ ಪರಿಶೀಲನೆ ನಡೆಯಲಿದೆ. ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರವು ಜುಲೈ 2 ರಿಂದ ಈ ಸಮೀಕ್ಷೆ ಜಾರಿಗೊಳಿಸಬಹುದು ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Fuel Price Update: ಪೆಟ್ರೋಲ್ ಡೀಸೆಲ್ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ


ವಿಷಯ ಏನು?
ನ್ಯೂಜಿಲೆಂಡ್‌ನ ನಾಗರಿಕ ವಿಮಾನಯಾನ ಇಲಾಖೆಯು ಪ್ರಯಾಣಿಕರ ತೂಕದ ದತ್ತಾಂಶವನ್ನು ಸಿದ್ಧಪಡಿಸಲು ಸಮೀಕ್ಷೆಯನ್ನು ನಡೆಸುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ, ಇದರ  ಅಡಿಯಲ್ಲಿ ಕಂಪನಿಯು ತೂಕದ ಹೊರೆ ಮತ್ತು ವಿತರಣೆಯ ದತ್ತಾಂಶವನ್ನು ಸಂಗ್ರಹಿಸಲು ಬಯಸುತ್ತಿದೆ ಎಂದರ್ಥ. ಈ ಸಮೀಕ್ಷೆಗೆ ಪ್ಯಾಸೆಂಜರ್ ಲೋಡ್ ಸಮೀಕ್ಷೆ ಎಂದು ಹೆಸರಿಸಲಾಗಿದೆ. ಈ ದತ್ತಾಂಶದ ಸಹಾಯದಿಂದ ಪೈಲಟ್‌ಗೆ ವಿಮಾನವನ್ನು ಭೂಸ್ಪರ್ಶಿಸಲು ಸಹಾಯ ಮಾಡಲಿದೆ ಎಂದು ಇಲಾಖೆ ಹೇಳಿದೆ. ಡಿಜಿಟಲ್ ಸ್ಕೇಲ್ ಸಹಾಯದಿಂದ ವಿಮಾನ ಹತ್ತುವ ಮೊದಲು ಪ್ರಯಾಣಿಕರು ತಮ್ಮ ತೂಕವನ್ನು ತೂಗಬೇಕಾಗುತ್ತದೆ. ಈ ದತ್ತಾಂಶವನ್ನು ಅತ್ಯಂತ ಗೌಪ್ಯವಾಗಿರಿಸಲಾಗುವುದು ಎಂದು ಹೇಳಲಾಗಿದೆ, ಇದನ್ನು ವಿಮಾನ ನಿಲ್ದಾಣದಲ್ಲಿ ಎಲ್ಲಿಯೂ ಕೂಡ ಬಿತ್ತರಿಸಲಾಗುವುದಿಲ್ಲ ಎಂದೂ ಕೂಡ ಹೇಳಲಾಗಿದೆ. 


ಇದನ್ನೂ ಓದಿ-SEBI Auction: ಹೂಡಿಕೆದಾರರ ಹಿತರಕ್ಷಣೆಗೆ ಸೆಬಿಯಿಂದ ಮಹತ್ವದ ಹೆಜ್ಜೆ


ತೂಕವು ಸ್ವಯಂಪ್ರೇರಿತವಾಗಿರುತ್ತದೆ
ನ್ಯೂಜಿಲೆಂಡ್‌ನ ಆರೋಗ್ಯ ವರದಿಯು ಅಲ್ಲಿನ ಜನರು ಹೆಚ್ಚು ಬೊಜ್ಜು ಹೊಂದುತ್ತಿದ್ದಾರೆ ಎಂದು ಹೇಳಿದೆ. ದೇಶದಲ್ಲಿ ಸ್ಥೂಲಕಾಯದ ಪ್ರಮಾಣವು ಸುಮಾರು ಶೇ. 34 ಕ್ಕೆ ತಲುಪಿದೆ ಎನ್ನಲಾಗಿದೆ. ಆದಾಗ್ಯೂ, ವಿಮಾನ ನಿಲ್ದಾಣದಲ್ಲಿ ತೂಕವು ಸ್ವಯಂಪ್ರೇರಿತವಾಗಿರುತ್ತದೆ. ಇದು ಸಂಪೂರ್ಣ ಸುರಕ್ಷಿತವಾಗಿರಲಿದ್ದು, ತೂಕ ಮಾಡಿಸಿಕೊಳ್ಳಲು ಯಾರೂ ಭಯಪಡಬೇಕಾಗಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.