ಯಾವ ತಿಂಗಳಿನಲ್ಲಿ ಹುಟ್ಟಿದ ಮಗು ಹೆಚ್ಚು ಬುದ್ಧಿಶಾಲಿ? ಇಲ್ಲಿದೆ ವರದಿ
ಈ ತಿಂಗಳಿನಲ್ಲಿ ಹುಟ್ಟಿದ ಹೆಚ್ಚಿನ ಮಕ್ಕಳು ಕಲಾವಿದರಾಗುತ್ತಾರೆ ಅಥವಾ ಟ್ರಾಫಿಕ್ ನಿಯಂತ್ರಕರಾಗುತ್ತಾರೆ.
ನವದೆಹಲಿ: ಈ ಕುರಿತು ಅಧ್ಯಯನವೊಂದನ್ನು ನಡೆಸಲಾಗಿದ್ದು, ಫೆಬ್ರುವರಿಯಲ್ಲಿ ಹುಟ್ಟಿದ ಮಕ್ಕಳು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಹಾಗೂ ನೀಳಕಾಯ ಹೊಂದಿರುತ್ತಾರೆ ಎಂದು ಹೇಳಿದೆ. ಈ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ತಮ್ಮ ತಮ್ಮಲ್ಲಿರುವ ಕ್ರಿಯೇಟಿವಿಟಿ ಮೂಲಕ ಜನರ ಮಧ್ಯೆ ತನ್ನ ವಿಶಿಷ್ಟ ಛಾಪು ಮೂಡಿಸುತ್ತಾರೆ ಎಂದು ಅಧ್ಯಯನ ಹೇಳಿದೆ. ಈ ಮಕ್ಕಳು ಯಾವುದೇ ಒಂದು ಸಮಸ್ಯೆಗೆ ತತಕ್ಷಣ ಪರಿಹಾರ ಕಂಡುಕೊಳ್ಳುವಲ್ಲಿ ನಿಷ್ಣಾತರಾಗಿರುತ್ತಾರೆ. ಸುಮಾರು 21000 ಮಕ್ಕಳ ಮೇಲೆ ಸತತ ಏಳು ವರ್ಷ ಅಧ್ಯಯನ ನಡೆಸಿ ಇದನ್ನು ಕಂಡುಹಿಡಿಯಲಾಗಿದೆ. ಅಧ್ಯಯನದ ಪ್ರಕಾರ ಫೆಬ್ರುವರಿ ತಿಂಗಳಿನಲ್ಲಿ ಹುಟ್ಟಿದ ಮಕ್ಕಳಲ್ಲಿ ಒತ್ತಡ ತುಂಬಾ ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ. ಇವರಲ್ಲಿ ಕಿರಿಕಿರಿಯ ಭಾವನೆ ಕೂಡ ಕಮ್ಮಿಯಾಗಿರುತ್ತದೆ ಎನ್ನಲಾಗಿದೆ.
ಆದರೆ, ಇವರು ಬಹುಬೇಗನೆ ಯಾವುದೇ ಒಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. ಅವರ ಪ್ರಕಾರ, ಈ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ಎಲ್ಲರಿಗಿಂತ ಡಿಫರೆಂಟ್ ಆಗಿ ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಶ್ವಾಸ ಇಟ್ಟಿರುತ್ತಾರೆ. ಈ ತಿಂಗಳಿನಲ್ಲಿ ಹುಟ್ಟಿದ ಹೆಚ್ಚಿನ ಮಕ್ಕಳು ಕಲಾವಿದರಾಗುತ್ತಾರೆ. ಇಲ್ಲದೆ ಹೋದಲ್ಲಿ ಟ್ರಾಫಿಕ್ ಪೊಲೀಸ್ ಆಗಲು ಇಷ್ಟಪಡುತ್ತಾರೆ ಎಂದು ಅವರು ಹೇಳಿದ್ದಾರೆ.
ಸುಮಾರು 4ರಿಂದ 5 ವರ್ಷ ವಯಸ್ಸಿನ ಮಕ್ಕಳ ಮೇಲೆ ನ್ಯೂಜಿಲ್ಯಾಂಡ್ ನಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಮಕ್ಕಳ ವಿಚಾರ, ಸ್ವಭಾವ, ವ್ಯರ್ಥ ಖರ್ಚು, ಗಮನ ಹಾಗೂ ಸ್ನೇಹಿತರನ್ನು ಗಳಿಸುವ ಕಲೆಯ ಕುರಿತು ವಿಶ್ಲೇಷಿಸಲಾಗಿದೆ. ಇದರಲ್ಲಿ ಚಳಿಗಾಲದಲ್ಲಿ ಹುಟ್ಟಿದ ಮಕ್ಕಳು ವ್ಯವಹಾರದ ದೃಷ್ಟಿಯಿಂದ ಚುರುಕಾಗಿರುತ್ತಾರೆ ಎಂದು ಹೇಳಲಾಗಿದೆ.
ನೈಸರ್ಗಿಕವಾಗಿ ಹುಟ್ಟಿದ ಮಕ್ಕಳು ಹೆಚ್ಚು ಬುದ್ಧಿವಂತರಾಗಿರುತ್ತಾರೆ
ಇದಕ್ಕೂ ಮೊದಲು ಎಲೆ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಒಂದು ಸಂಶೋಧನೆಯಲ್ಲಿ ಅಧ್ಯಯನಕಾರರು ನೈಸರ್ಗಿಕವಾಗಿ ಹುಟ್ಟಿದ ಸಿಸರಿನ್ ಮೂಲಕ ಹುಟ್ಟಿದ ಮಕ್ಕಳಿಗಿಂತ ಹೆಚ್ಚು ಬುದ್ಧಿಶಾಲಿಗಳಾಗಿರುತ್ತಾರೆ ಎಂದು ಹೇಳಿದ್ದರು. ಈ ಅಧ್ಯಯನದ ಪ್ರಕಾರ ಮಹಿಳೆಯರು ನೈಸರ್ಗಿಕವಾಗಿ ಮಕ್ಕಳಿಗೆ ಜನ್ಮ ನೀಡಿದಾಗ ಮಕ್ಕಳಲ್ಲಿ ಒಂದು ವಿಶೇಷ ಪ್ರೋಟೀನ್ ಮಟ್ಟ ಉಚ್ಛಮಟ್ಟದಲ್ಲಿರುತ್ತದೆ ಹಾಗೂ ಇದು ಮಕ್ಕಳ ವಿಕಾಸದ ವೇಳೆ ಅವರನ್ನು ಬುದ್ಧಿಶಾಲಿಯಾಗಿ ಮಾಡುತ್ತದೆ ಎಂದಿದ್ದರು.
ಪ್ರಾಕೃತಿಕವಾಗಿ ಹುಟ್ಟಿದ ಮಕ್ಕಳಲ್ಲಿ 'UCP2' ಪ್ರೋಟೀನ್ ಪ್ರಮಾಣ ಉಚ್ಛಮಟ್ಟದಲ್ಲಿ ಸೃವಿಕೆಯಾಗಿ ಮಕ್ಕಳನ್ನು ಬುದ್ಧಿಶಾಲಿಯಾಗಿಸಲು ಇದು ಸಹಕರಿಸುತ್ತದೆ. ಅಷ್ಟೇ ಅಲ್ಲ ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಗೂ ಕಾರಣವಾಗುತ್ತದೆ. ಈ ಪ್ರೋಟೀನ್ ಮನುಷ್ಯರಲ್ಲಿ IQ ಮಟ್ಟ ಹೆಚ್ಚಿಸಲು ತುಂಬಾ ಸಹಾಯಕಾರಿ ತತ್ವವಾಗಿದೆ. ಈ ಅಧ್ಯಯನದ ಅಂಶಗಳನ್ನು 'PLOS ಒನ್' ಜರ್ನಲ್ ನಲ್ಲಿ ಪ್ರಕಾಶಿತಗೊಂಡಿವೆ.