ಮಕ್ಕಳ ಆಟಿಕೆಯಲ್ಲಿ ಈ ಬಣ್ಣ ಇದೆ ಎಂಬ ಕಾರಣಕ್ಕೆ ಬ್ಯಾನ್ ಹೇರಿದ ಮುಸ್ಲಿಂ ರಾಷ್ಟ್ರ
ಅಂಗಡಿಗಳ ಮೇಲೆ ದಾಳಿ ನಡೆಸಿ ಈ ಬಣ್ಣ ಬಣ್ಣದ ಆಟಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆಟಿಕೆಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿವೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ದೋಹಾ : ಕೆಲವು ಆಟಿಕೆಗಳು ಇಸ್ಲಾಮಿಕ್ ವಿರೋಧಿ ಎಂಬ ಕಾರಣಕ್ಕೆ ಕತಾರ್‌ನಲ್ಲಿ (Qatar) ಆಟಿಕೆಗಳ ಮೇಲೆ ನಿಷೇಧ ಹೇರಿರುವ ಘಟನೆ ನಡೆದಿದೆ. ಈ ಆಟಿಕೆಗಳಲ್ಲಿ (toys) ಬಳಸಲಾದ ಬಣ್ಣಗಳು LGBT ಧ್ವಜವನ್ನು ಹೋಲುತ್ತವೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಕತಾರ್‌ನಂತಹ ಮುಸ್ಲಿಂ ಸಂಪ್ರದಾಯವಾದಿ ದೇಶದಲ್ಲಿ (Muslim County) ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಸ್ಥಳೀಯ ಆಡಳಿತ ಮಕ್ಕಳ ಆಟಿಕೆಗಳ ವಿರುದ್ಧ ಅಭಿಯಾನ ಆರಂಭಿಸಿದೆ.
ಅಂಗಡಿಗಳ ಮೇಲೆ ದಾಳಿ :
ಅಂಗಡಿಗಳ ಮೇಲೆ ದಾಳಿ ನಡೆಸಿ ಈ ಬಣ್ಣ ಬಣ್ಣದ ಆಟಿಕೆಗಳನ್ನು (Toys) ವಶಪಡಿಸಿಕೊಳ್ಳಲಾಗಿದೆ. ಈ ಆಟಿಕೆಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿವೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ವರ್ಣರಂಜಿತ ಆಟಿಕೆಗಳಿಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳುತ್ತದೆ. ಆದರೆ ಕೆಲವು ಆಟಿಕೆಗಳ ಬಣ್ಣಗಳು LGBT ಧ್ವಜವನ್ನು ಹೋಲುತ್ತವೆ. ಈ ಹಿನ್ನೆಲೆಯಲ್ಲಿ ಕತಾರ್‌ನ ವಿವಿಧ ಪ್ರದೇಶಗಳಲ್ಲಿನ ಅಂಗಡಿಗಳ ಮೇಲೆ ದಾಳಿ (Raid) ನಡೆಸಿ, ತನಿಖಾ ಕಾರ್ಯಾಚರಣೆ ನಡೆಸಲು ಆದೇಶ ನೀಡಲಾಗಿದೆ ಎಂದು ಸಚಿವಾಲಯ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಡಲು ಅಮೆರಿಕವೇ ಕಾರಣ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಜನತೆಯಲ್ಲಿ ಮನವಿ ಮಾಡಿರುವ ಸರ್ಕಾರ :
ಆಡಳಿತದ ಪ್ರಕಾರ, ತನಿಖೆಯ ಸಮಯದಲ್ಲಿ ಕೆಲವು ಆಟಿಕೆಗಳು ಇಸ್ಲಾಮಿಕ್ ಮೌಲ್ಯಗಳಿಗೆ (Islamic values) ವಿರುದ್ಧವಾಗಿವೆ ಎಂದು ಕಂಡುಬಂದಿದೆ. ಆದ್ದರಿಂದ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತಮ್ಮ 'ಸಂಪ್ರದಾಯ'ಕ್ಕೆ ವಿರುದ್ಧವಾಗಿ ಯಾವುದೇ ಲೋಗೋ ಅಥವಾ ವಿನ್ಯಾಸದ ಬಗ್ಗೆ ಗಮನಕ್ಕೆ ಬಂದರೆ ಕೂಡಲೇ ಸರ್ಕಾರದ ಗಮನಕ್ಕೆ ತರುವಂತೆ ಸಚಿವಾಲಯ ಜನತೆಯಲ್ಲಿ ಮನವಿ ಮಾಡಿದೆ. ಮುಂದಿನ ವರ್ಷ ನಡೆಯಲಿರುವ ಫುಟ್‌ಬಾಲ್ ವಿಶ್ವಕಪ್‌ನ (Football worldcup) ಸಂಘಟಕರಾಗಿ ಕತಾರ್ ಅನ್ನು ಆಯ್ಕೆ ಮಾಡಲಾಗಿದೆ. ಪಂದ್ಯಾವಳಿಯನ್ನು ವೀಕ್ಷಿಸಲು ಅವರು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ನಿರಂತರವಾಗಿ ಆಹ್ವಾನಿಸಲಾಗುತ್ತಿದೆ. ಹೀಗಿರುವಾಗ ಈ ಸಂಪ್ರದಾಯವಾದಿ ಚಿಂತನೆಯು ಖಂಡಿತವಾಗಿಯೂ ಇದರ ಮೇಲೆ ಪರಿಣಾಮ ಬೀರುವುದಂತೂ ಸುಳ್ಳಲ್ಲ.
LGBT ಅಭಿಮಾನಿಗಳಿಗೆ ಇರಲಿದೆಯೇ ಸ್ವಾಗತ :
ನವೆಂಬರ್‌ನಲ್ಲಿ, ಇಂಗ್ಲಿಷ್ ಫುಟ್‌ಬಾಲ್ ಅಸೋಸಿಯೇಷನ್ LGBTQ+ ಅಭಿಮಾನಿಗಳಿಗೆ ವಿಶ್ವಕಪ್‌ಗಾಗಿ ಕತಾರ್‌ಗೆ ಸ್ವಾಗತಿಸಲಾಗುವುದು ಎಂಬ ಭರವಸೆ ನೀಡಿತ್ತು. ಪಂದ್ಯಾವಳಿಗಾಗಿ ತನ್ನ LGBTQ+ ವಿರೋಧಿ ನಿಲುವನ್ನು ಮೃದುಗೊಳಿಸುವಂತೆ ಕತಾರ್ ಅನ್ನು ಸಂಘವು ವಿನಂತಿಸಿಕೊಂಡಿತ್ತು. ಅಲ್ಲದೆ, ಪಂದ್ಯಾವಳಿಯ ಸಮಯದಲ್ಲಿ ಎಲ್ಜಿಬಿಟಿ ಧ್ವಜವನ್ನು ನೀಡಬೇಕು ಎಂದು ಕೂಡಾ ಕೋರಲಾಗಿತ್ತು. ಆದರೆ ಆಟಿಕೆಗಳ ಬಣ್ಣ LGBT ಗೆ ಹೋಲುತ್ತದೆ ಎಂಬ ಕಾರಣಕ್ಕೆ ಅವುಗಳಿಗೆ ನಿಷೇಧ ಹೇರಿರುವ ಸರ್ಕಾರ, LGBTQ + ಅಭಿಮಾನಿಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಲಿದೆಯೇ ಎನ್ನುವುದು ಬಹು ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ : Omicron: ಯುರೋಪ್ ನಲ್ಲಿ ಕರೋನಾ 'ಚಂಡಮಾರುತ', ಕುಸಿಯಲಿದೆ ಆರೋಗ್ಯ ಕ್ಷೇತ್ರ; WHO ಎಚ್ಚರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.