ಚಿಲಿ: ಪೊಲೀಸ್ ಠಾಣೆಯಲ್ಲಿ ಸ್ಫೋಟ, ಐವರು ಅಧಿಕಾರಿಗಳಿಗೆ ಗಾಯ
ಪೊಲೀಸ್ ಠಾಣೆಗೆ ಪಾರ್ಸೆಲ್ ನಲ್ಲಿ ಬಂದ ಬಾಂಬ್ ಸ್ಪೋಟಗೊಂಡ ಪರಿಣಾಮ ಕಮೀಷನರ್ ಸೇರಿದಂತೆ ಐವರು ಪೋಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಚಿಲಿ: ಹುಯೆಚುರಾಬಾದ 54 ನೇ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಐವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ಪಾರ್ಸೆಲ್ ನಲ್ಲಿ ಬಂದ ಬಾಂಬ್ ಸ್ಪೋಟಗೊಂಡ ಪರಿಣಾಮ ಕಮೀಷನರ್ ಸೇರಿದಂತೆ ಐವರು ಪೋಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ ಎಂದು ಎಎನ್ಐ ತಿಳಿಸಿದೆ. ಸದ್ಯ ಪಾರ್ಸೆಲ್ ಕಳುಹಿಸಿದ ಮಹಿಳೆಯನ್ನು ಪತ್ತೆ ಹಚ್ಚಲು ವಿಶೇಷ ಕಾರಾಚರಣೆ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಾಂಬ್ ಸ್ಫೋಟದಿಂದಾಗಿ ಪೊಲೀಸ್ ಠಾಣೆಯ ಹತ್ತಿರದ 3 ಕಚೇರಿಗಳೂ ಹಾನಿಗೊಳಗಾಗಿವೆ ಎನ್ನಲಾಗಿದೆ.
ಬಾಂಬ್ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿರುವ ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ, ಇದು ಖಂಡಿತವಾಗಿಯೂ 'ಭಯೋತ್ಪಾದಕ ದಾಳಿ'ಯಾಗಿದೆ. ಪಾರ್ಸೆಲ್ ಮೂಲಕ ಪೊಲೀಸ್ ಠಾಣೆಗೆ ಬಾಂಬ್ ಕಳುಹಿಸಿರುವುದು ಭಯೋತ್ಪಾದಕ ಕೃತ್ಯ ಎಂದಿದ್ದಾರೆ.