ಬೀಜಿಂಗ್: ರೈತ ಪ್ರತಿಭಟನೆಯ ವಿಚಾರವನ್ನು ಮುಂದಿಟ್ಟುಕೊಂಡು ಪಾಕಿಸ್ತಾನದ (Pakistan) ನಂತರ ಇದೀಗ ಚೀನಾ (China) ಭಾರತದ ವಿರುದ್ಧ ವಿಷ ಕಾರಲು ಆರಂಭಿಸಿದೆ. ಗ್ಲೋಬಲ್ ಟೈಮ್ಸ್ ನಲ್ಲಿ (Global Times) ಪ್ರಕಟವಾದ ಲೇಖನದಲ್ಲಿ, ಭಾರತ ಸರ್ಕಾರವು ಅಸ್ಥಿರಗೊಳ್ಳಬಹುದೆಂಬ ಭಯದಲ್ಲಿದೆ. ಈ ಕಾರಣದಿಂದಾಗಿ,  ಕೆಲ ಪ್ರದೇಶಗಳಲ್ಲಿ ಇಂಟರ್ನೆಟ್ (Internet) ಅನ್ನು ನಿಷೇಧಿಸಿದೆ ಎಂದು ಹೇಳಿದೆ. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ನಂತರ, ವದಂತಿಗಳನ್ನು ತಡೆಗಟ್ಟಲು ಸರ್ಕಾರವು ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಇಂಟರ್ ನೆಟ್ ಅನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿತ್ತು. ಇದನ್ನೇ ಮುಂದಿಟ್ಟುಕೊಂಡು ಚೀನಾ ಇದೀಗ ಭಾರತದ ವಿರುದ್ದ ಮಾತನಾಡಲು ಆರಂಭಿಸಿದೆ.


COMMERCIAL BREAK
SCROLL TO CONTINUE READING

ಕ್ಸಿನ್ಹುವಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾರ್ಯತಂತ್ರ ಸಂಸ್ಥೆಯ ಸಂಶೋಧನಾ ವಿಭಾಗದ ನಿರ್ದೇಶಕ ಕಿಯಾನ್ ಫೆಂಗ್ ಅವರ ಲೇಖನವನ್ನು ಚೀನಾದ ಕಮ್ಯುನಿಸ್ಟ್ ಸರ್ಕಾರದ ಮುಖವಾಣಿಯ ಗ್ಲೋಬಲ್ ಟೈಮ್ಸ್ ನಲ್ಲಿ (Global Times) ಪ್ರಕಟಿಸಲಾಗಿದೆ. ಈ ಲೇಖನದಲ್ಲಿ, ಭಾರತದಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ (Farmer protest) ನಡೆಸುತ್ತಿದ್ದಾರೆ, ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ ನವದೆಹಲಿಯ ಸುತ್ತಮುತ್ತಲಿನ ಅನೇಕ ಪ್ರದೇಶಗಳಲ್ಲಿ ಭಾರತ ಸರ್ಕಾರ ಇಂಟರ್ ನೆಟನ್ನು (Internet) ಸ್ಥಗಿತಗೊಳಿಸಿದೆ. ಸರ್ಕಾರ ಅಸ್ಥಿರವಾಗಬಹುದೆಂಬ  ಭಯ ಭಾರತಕ್ಕಿದೆ ಎಂದು  ಹೇಳಲಾಗಿದೆ.  


ಇದನ್ನೂ ಓದಿ : Bin Laden ನಿಂದ ಹಣ ಪಡೆಯುತ್ತಿದ್ದರಂತೆ ಪಾಕ್ ಮಾಜಿ ಪ್ರಧಾನಿ


ಅಲ್ಲದೆ, ರೈತರ ಪ್ರತಿಭಟನೆಯ ಕಾವು ಏರುತ್ತಿದ್ದಂತೆ, ಭಾರತ ಸರ್ಕಾರ ಇಂಟರ್ ನೆಟ್ ಸ್ಥಗಿತಗೊಳಿಸಿ, ಮಾಧ್ಯಮಗಳನ್ನು (medai) ನಿಯಂತ್ರಿಯಿಸುವ ಪ್ರಯತ್ನ ನಡೆಸಿದೆ ಎಂದು ಬರೆದಿದೆ. ಬಿಜೆಪಿ (BJP) ತನ್ನ ಸಂಖ್ಯಾ ಬಲದ ಕಾರಣದಿಂದ ತರಾತುರಿಯಲ್ಲಿ ಕೃಷಿ ಕಾಯಿದೆಯನ್ನು (Farm Law) ಜಾರಿಗೆ ತಂದಿದೆ. ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣ ಇಲ್ಲ ಎಂದು ಹೇಳಿದೆ. 


ಭಾರತದಲ್ಲಿ ಯಾವಾಗ ಪ್ರತಿಭಟನೆಗಳು (Protest) ನಡೆದರೂ ಇಂಟರ್ ನೆಟ್ ಸ್ಥಗಿತಗೊಳಿಸಲಾಗುತ್ತದೆ. ಇತರ ದೇಶಗಳಂತೆ ಭಾರತದಲ್ಲೂ ಇಂಥಹ ಪರಿಸ್ಥಿತಿಯನ್ನು ಸಾಮಾಜಿಕ ಮಾಧ್ಯಮಗಳ (Social media)ಮೂಲಕವೇ ನಿಯಂತ್ರಿಸಲಾಗುತ್ತದೆ. ಆದರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಇಂಟರ್ ನೆಟ್ ಸ್ಥಗಿತಗೊಳಿಸುವ ಹೊರತು ಬೇರೆ ಯಾವ ಮಾರ್ಗವೂ ಇಲ್ಲ ಎಂದು ಹೇಳಿದೆ.


ಇದನ್ನೂ ಓದಿ : Delhi Violence : ಭಾರತದ ವಿರುದ್ಧ ವಿಷಕಕ್ಕಿದ ಪಾಕಿಸ್ತಾನ, ವಿಷಯ ಏನು ಗೊತ್ತಾ..?


 ಭಾರತದ ಬಗ್ಗೆ ಇಷ್ಟೊಂದು ಮಾತನಾಡುತ್ತಿರುವ ಚೀನಾ (China) ತನ್ನ ದೇಶದಲ್ಲಿ ಏನು ಮಾಡುತ್ತಿದೆ ಎನ್ನುವುದು ಇಡೀ ಜಗತ್ತಿಗೇ ಗೊತ್ತಿದೆ. ಚೀನಾದಲ್ಲಿ ಸರ್ಕಾರದ ವಿರುದ್ಧ ಧ್ವನಿಯೆತ್ತಿದವರ ಧ್ವನಿಯನ್ನು ಶಾಶ್ವತವಾಗಿ ಅಡಗಿಸಲಾಗುತ್ತದೆ. ಹಾಂಗ್‌ ಕಾಂಗ ನಲ್ಲಿ (Hong Kong) ನಡೆಯುತ್ತಿರುವ ಪ್ರತಿಭಟನಾಕಾರರ ವಿರುದ್ಧ ಯಾವ ರೀತಿ ಬಲ ಪ್ರಯೋಗಗಳು ನಡೆಯುತ್ತಿವೆ ಎನ್ನುವುದು ಜಗಜ್ಜಾಹಿರ. ಇನ್ನು ಟಿಬೆಟ್‌ (Tibet) ಮೇಲೆ ಚೀನಾ ನಡೆಸುತ್ತಿರುವ ದೌರ್ಜನ್ಯದ ಬಗ್ಗೆಯೂ ಎಲ್ಲರಿಗೂ ಗೊತ್ತು. ಇಷ್ಟೆಲ್ಲಾ ಇದ್ದುಕೊಂಡು ಭಾರತದಲ್ಲಿ ಇಂಟರ್‌ ನೆಟ್‌ ಸ್ಥಗಿತಗೊಳಿಸಲಾಗಿದೆ ಎನ್ನುವ ವಿಚಾರವನ್ನೇ ದೊಡ್ಡ ಅಸ್ತ್ರ ಮಾಡಿಕೊಳ್ಳಲು ಚೀನಾ ಹೊರಟಿರುವುದು ನಿಜವಾಗಿಯೂ ನಾಚಿಕೆಗೇಡು..


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.