ನವದೆಹಲಿ: ಕೊರೊನಾ ಸುನಾಮಿಯಿಂದ ಚೀನಾ ಮತ್ತೆ ತತ್ತರಿಸಿಹೋಗಿದೆ.   ಶೂನ್ಯ-ಕೋವಿಡ್ ನೀತಿಯಡಿ ಲಾಕ್‌ಡೌನ್‌ನ ಸಡಿಲಿಕೆ ಮತ್ತು ದೊಡ್ಡ ಪ್ರಮಾಣದ ಪರೀಕ್ಷೆ ಕಡಿಮೆ ಮಾಡಿದ ನಂತರ ಚೀನಾದಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಚೀನಾದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು ಮತ್ತು ಇತರ ಐಸಿಯು ಉಪಕರಣಗಳ ಕೊರತೆಯಿದೆ ಎಂದು ಚೀನೀ ಮಾಧ್ಯಮಗಳು ವರದಿ ಮಾಡಿವೆ.  


COMMERCIAL BREAK
SCROLL TO CONTINUE READING

ಕಳೆದ 2 ವಾರಗಳಲ್ಲಿ ಚೀನಾದ ಇಂಟರ್ನೆಟ್‌ನಲ್ಲಿ ಸಾರ್ವಜನಿಕ ಟೆಂಡರ್ ಪಟ್ಟಿಗಳ ಸಮೀಕ್ಷೆಯು ಚೀನಾದ ಬಹುತೇಕ ಎಲ್ಲಾ ನಗರಗಳು ಮತ್ತು ಪ್ರಾಂತ್ಯಗಳಲ್ಲಿನ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಎದುರಾಗಿದೆ ಎಂದು ಹೇಳಲಾಗಿದೆ. COVID-19ನೊಂದಿಗೆ ತೀವ್ರವಾಗಿ ಅಸ್ವಸ್ಥರಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಗಿದೆ.


ಇದನ್ನೂ ಓದಿ: Funny Video : ಕೋತಿ ಜೊತೆಯೇ ಚೇಷ್ಟೆ ಮಾಡಲು ಹೋದ್ರೆ ಏನಾಗುತ್ತೆ ಗೊತ್ತಾ? ಬಿದ್ದು ಬಿದ್ದು ನಗ್ತೀರಾ!


ವೆಂಟಿಲೇಟರ್‌ ಖರೀದಿಗೆ ಆಸ್ಪತ್ರೆಗಳ ಪರದಾಟ


ಬೀಜಿಂಗ್ ಮತ್ತು ಉತ್ತರ ಚೀನಾದಲ್ಲಿ ವೆಂಟಿಲೇಟರ್‌ ಮತ್ತು ಇತರ ಉಪಕರಣಗಳಿಗೆ ಬೇಡಿಕೆಯಿರುವ ಆಸ್ಪತ್ರೆಗಳು ಹೆಚ್ಚಿವೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಸಹ ಸಮಸ್ಯೆ ಎದುರಾಗಿದೆಯಂತೆ. ಹೀಗಾಗಿ ಆಸ್ಪತ್ರೆಗಳು ಗಾಬರಿಯಲ್ಲಿ ವೆಂಟಿಲೇಟರ್‌ಗಳು ಮತ್ತು ಇತರ ಉಪಕರಣಗಳನ್ನು ಖರೀದಿಸುತ್ತಿವೆ ಎಂದು ಚೀನಾದ ಮಾಜಿ ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.


ಸರ್ಕಾರದ ಬಳಿ ಚಿಕಿತ್ಸೆ ನೀಡಲು ಹಣವಿಲ್ಲ!


ಕ್ವಾರಂಟೈನ್ ಸೌಲಭ್ಯ ಮತ್ತು ದೊಡ್ಡ ಪ್ರಮಾಣದ ಪರೀಕ್ಷೆಯಿಂದಾಗಿ ಸ್ಥಳೀಯ ಸರ್ಕಾರಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಹಣದ ಕೊರತೆ ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಶೂನ್ಯ-ಕೋವಿಡ್ ನೀತಿಯ ಕಟ್ಟುನಿಟ್ಟಿನ ನಿರ್ಬಂಧ ಕೈಬಿಡುವುದರ ಹಿಂದಿನ ಕಾರಣವೆಂದರೆ ಸ್ಥಳೀಯ ಸರ್ಕಾರಗಳು ಹಣದ ಕೊರತೆ ಎದುರಿಸುತ್ತಿವೆ ಎಂದು ಅವರು ಮಾಹಿತಿ ಬಹಿರಂಗಪಡಿಸಿದ್ದಾರೆ. ಇದೀಗ ಆಸ್ಪತ್ರೆಗಳು ಹೆಚ್ಚು ಹೆಚ್ಚು ಸರಕುಗಳನ್ನು ಖರೀದಿಸಬೇಕಾಗಿದೆ, ಆದರೆ ಸರ್ಕಾರದ ಬಳಿ ಹಣವಿಲ್ಲದ ಕಾರಣ ನೀಡುತ್ತಿಲ್ಲ. ಸ್ಥಳೀಯ ಸರ್ಕಾರಗಳ ಬಳಿಯೂ ಹಣವಿಲ್ಲದ ಕಾರಣ ರೋಗಿಗಳ ಚಿಕಿತ್ಸೆಗೆ ಪರದಾಡಬೇಕಾದ ಪರಿಸ್ಥಿತಿಯುಂಟಾಗಿದೆ. ಹೀಗಾಗಿ ಅವರೆಲ್ಲರೂ ಇದೀಗ ಅಪಾಯದಲ್ಲಿದ್ದಾರೆಂದು ತಿಳಿಸಿದ್ದಾರೆ.


ಇದನ್ನೂ ಓದಿ: WATCH : ಓಹ್..! ಎಂದಾದರೂ ಹೀಗೆ ಅಪಘಾತ ಆಗುವುದನ್ನು ನೀವು ನೋಡಿದ್ದಿರಾ?


ಚೀನಾದಲ್ಲಿ ಹದಗೆಟ್ಟ ವೈದ್ಯಕೀಯ ವ್ಯವಸ್ಥೆ 


ಈ ತಿಂಗಳ ಆರಂಭದಲ್ಲಿ ಲಾಕ್‌ಡೌನ್ ತೆಗೆದುಹಾಕಿದಾಗಿನಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲು ಹೆಣಗಾಡಬೇಕಾಗಿದೆ ಎಂದು ನೈಋತ್ಯ ನಗರದ ಚಾಂಗ್‌ಕಿಂಗ್‌ನ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ವೈದ್ಯಕೀಯ ಸಾಮಗ್ರಿಗಳ ಕೊರತೆಯಿಂದ ನಾವು ಸಂಕಷ್ಟ ಎದುರಿಸುತ್ತಿದ್ದೇವೆಂದು ಅವರು ಹೇಳಿದ್ದಾರೆ.


ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 17 ಜನರ ಪೈಕಿ 15 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ. ಬೃಹತ್ ಲಾಕ್‌ಡೌನ್ ವಿರೋಧಿ ಪ್ರತಿಭಟನೆಗಳ ನಂತರ ಡಿಸೆಂಬರ್ 7ರಂದು ಚೀನಾ ಔಪಚಾರಿಕವಾಗಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲು ಆದೇಶಿಸಿತು. ತೀವ್ರ ಅಸ್ವಸ್ಥರಿಗೆ ವೆಂಟಿಲೇಟರ್‌ಗಳನ್ನು ಹೊರತುಪಡಿಸಿ, ಜ್ವರಕ್ಕೆ ಬೇಕಾದ ಔಷಧಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲವೆಂದು ಅವರು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.