ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ಗುರ್ತಿಸದಿರುವುದಕ್ಕೆ 30,000 ನಕ್ಷೆ ನಾಶ!
ಚೀನಾದ ಅಧಿಕಾರಿಗಳು ಅರುಣಾಚಲ ಪ್ರದೇಶ ಹಾಗೂ ತೈವಾನ್ ಪ್ರದೇಶವನ್ನು ಚೀನಾದ ಭಾಗವೆಂದು ಗುರುತಿಸದ 30 ಸಾವಿರ ವಿಶ್ವದ ನಕ್ಷೆಗಳನ್ನು ನಾಶಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೀಜಿಂಗ್: ಚೀನಾದ ಅಧಿಕಾರಿಗಳು ಅರುಣಾಚಲ ಪ್ರದೇಶ ಹಾಗೂ ತೈವಾನ್ ಪ್ರದೇಶವನ್ನು ಚೀನಾದ ಭಾಗವೆಂದು ಗುರುತಿಸದ 30 ಸಾವಿರ ವಿಶ್ವದ ನಕ್ಷೆಗಳನ್ನು ನಾಶಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚೀನಾ ದೇಶವು ಈಶ್ಯಾನ್ಯದ ರಾಜ್ಯ ಅರುಣಾಚಲ ಪ್ರದೇಶವನ್ನು ದಕ್ಷಿಣದ ಟಿಬೆಟ್ ನ ಭಾಗವೆಂದು ಆಗಾಗ ಭಾರತದ ಜೊತೆ ಸಂಘರ್ಷಕ್ಕೆ ಇಳಿಯುತ್ತಲೇ ಬಂದಿದೆ.ಅಲ್ಲದೆ ಈ ಪ್ರದೇಶಕ್ಕೆ ಭಾರತದ ನಾಯಕರು ಭೇಟಿ ನೀಡುವುದಕ್ಕೂ ಸಹ ಚೀನಾ ಆಗಾಗ ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಆದರೆ ಭಾರತ ಚೀನಾದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದು ತಿರುಗೇಟು ನೀಡಿತ್ತು. ಈ ಹಿಂದೆ ಎರಡು ದೇಶಗಳು 21 ಸುತ್ತು ಮಾತುಕತೆಯ ಮೂಲಕ ಗಡಿ ಪ್ರದೇಶದ ವಿವಾದವನ್ನು ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದವು.
ಈಗ ಅರುಣಾಚಲ ಪ್ರದೇಶದ ಜೊತೆಗೆ ತೈವಾನ್ ಭಾಗವನ್ನು ಪ್ರತ್ಯೇಕ ದೇಶವೆಂದು ಗುರುತಿಸಿದ 30 ಸಾವಿರ ನಕ್ಷೆಗಳನ್ನು ಚೀನಾ ದೇಶ ನಾಶಪಡಿಸಿದೆ.