ನವದೆಹಲಿ: ಹೆಚ್ಚುತ್ತಿರುವ ಅಮೆರಿಕಾದ ಪ್ರಭಾವದಿಂದಾಗಿ ಈಗ ಚೀನಾ ತನ್ನ ಅಣ್ವಸ್ತ್ರ ನೀತಿಗೆ ಸಂಬಂಧಿಸಿದ ಮೊದಲ ಬಳಕೆ ಇಲ್ಲ (no first use) ಎನ್ನುವ ನಿಯಮಕ್ಕೆ ತಿಲಾಂಜಲಿ ಇಡುವತ್ತ ಚಿಂತನೆ ನಡೆಸಿದ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈಗ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಈ ಕುರಿತಾಗಿ ವರದಿ ಮಾಡಿದೆ.1964 ರಲ್ಲಿ ಚೀನಾ ಮೊದಲ ಅಣ್ವಸ್ತ್ರ ಪರೀಕ್ಷೆ ಕೈಗೊಂಡಾಗಿನಿಂದ ಮೊದಲ ಬಳಕೆ ಇಲ್ಲ (no first use) ಎನ್ನುವ ನಿಯಮಕ್ಕೆ ಅಂಟಿಕೊಂಡಿತ್ತು. ಸದ್ಯ ಒಂದು ಕಡೆ ಸೌತ್ ಚೀನಾ ಸಮುದ್ರದಲ್ಲಿ ಅಮೇರಿಕಾ ತನ್ನ ಪ್ರಭಾವವನ್ನು ಮುಂದುವರೆಸಿದೆ.ಈ ಹಿನ್ನಲೆಯಲ್ಲಿ ಈಗ ಚೀನಾ ಕೂಡ ತನ್ನ ಭದ್ರತೆಗಾಗಿ ಹಲವು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವತ್ತ ಮುಂದಾಗಿದೆ.ಕಳೆದ ವರ್ಷ ಅಮೆರಿಕಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಚೀನಾ ದೇಶವು ಸಬ್ ಮರೀನ್ ಬ್ಯಾಲಿಸ್ಟಿಕ್ ಮಿಸ್ಸೈಲ್ ಜೆಎಲ್-3 ಪರೀಕ್ಷೆಯನ್ನು ಕೈಗೊಂಡಿತ್ತು. 


ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ರಾಷ್ಯದೊಂದಿಗಿನ ಅಣ್ವಸ್ತ್ರ ಸಂಬಂಧಿತ ಒಪ್ಪಂದವನ್ನು ಕೊನೆಗೊಳಿಸಿದ ನಂತರ ಈಗ ಚೀನಾ ಎಚ್ಚೆತ್ತುಕೊಂಡಿದೆ ಎನ್ನಲಾಗಿದೆ.ಆ ಹಿನ್ನಲೆಯಲ್ಲಿ ಈಗ ಮೊದಲ ಬಳಕೆ ಇಲ್ಲ (no first use) ಎನ್ನುವ ಅಣ್ವಸ್ತ್ರ ಸಂಬಂಧಿತ ನಿಯಮಕ್ಕೆ ತಿಲಾಂಜಲಿ ಇಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುವತ್ತ ಚಿಂತನೆ ನಡೆಸಿದೆ ಎನ್ನಲಾಗಿದೆ.