ನವದೆಹಲಿ: ಇತ್ತೀಚಿಗೆ ನೂತನ ನಕ್ಷೆ ಸಂಸತ್ತಿನ ಮೂಲಕ ಅನುಮೋದನೆ ನೀಡಿರುವ ನೇಪಾಳದ ನಿರ್ಧಾರದ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡ ಇದೆ ಎಂದು ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

ಇಂಡೋ-ನೇಪಾಳ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಚೀನಾ ಮತ್ತು ಪಾಕಿಸ್ತಾನಗಳು ಭಾರತದ ವಿರುದ್ಧ ಕ್ರಮ ಕೈಗೊಳ್ಳಲು ನೇಪಾಳವನ್ನು ಪ್ರಚೋದಿಸುತ್ತಿವೆ ಎಂದು ವರದಿಗಳು ಸೂಚಿಸುತ್ತವೆ.


ನೇಪಾಳದ ಚೀನಾದ ರಾಯಭಾರಿ ಹೌ ಯಾಂಕಿ ಭಾರತದ ವಿರುದ್ಧ ನೇಪಾಳವನ್ನು ಪ್ರಚೋದಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಪ್ರಾಸಂಗಿಕವಾಗಿ, ಹೌ ಯಾಂಕಿ ಅವರನ್ನು ನೇಪಾಳದ ರಾಯಭಾರಿಯನ್ನಾಗಿ ಮಾಡುವ ಮೊದಲು ಪಾಕಿಸ್ತಾನದಲ್ಲಿ ಬೀಡುಬಿಟ್ಟಿದ್ದರು. ಇನ್ನೊಂದೆಡೆಗೆ ಸಂಯುಕ್ತ ನೇಪಾಳ ರಾಷ್ಟ್ರೀಯ ದಳದ ನಾಯಕನಾದ ಫನೀಂದ್ರ ನೇಪಾಳ ಕಳೆದ ಕೆಲವು ತಿಂಗಳುಗಳಿಂದ ಕಠ್ಮಂಡುವಿನ ಪಾಕಿಸ್ತಾನ ಮತ್ತು ಚೀನೀ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: ಭಾರತದ ತೀವ್ರ ವಿರೋಧದ ನಡುವೆಯೂ ನೂತನ ನಕ್ಷೆಗೆ ಅಸ್ತು ಎಂದ ನೇಪಾಳ ಸಂಸತ್ತು


ಚೀನಾ ತನ್ನ ನೆರೆಹೊರೆಯವರನ್ನು ಕೆರಳಿಸುವ ಮೂಲಕ ಭಾರತಕ್ಕೆ ತೊಂದರೆ ಉಂಟು ಮಾಡಲು ನೋಡುತ್ತಿದೆ. ಚೀನಾ ಮತ್ತು ಪಾಕಿಸ್ತಾನ ನೇಪಾಳವನ್ನು ಭಾರತದ ವಿರುದ್ಧ ಪ್ರಚೋದಿಸುವ ಮೂಲಕ ಮತ್ತೊಂದು ಫ್ರಂಟ್ ತೆರೆಯಲು ಯೋಜಿಸುತ್ತಿವೆ.ಇತ್ತೀಚೆಗೆ, ನೇಪಾಳವು ವಿವಾದಾತ್ಮಕ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿತು,ಇದರಲ್ಲಿ ಉತ್ತರಾಖಂಡದ ಕೆಲವು ಭಾಗಗಳಾದ ಲಿಪುಲೆಖ್, ಕಲಾಪಣಿ, ಲಿಂಪಿಯಾಧುರಾ -ತನ್ನ ಭೂಪ್ರದೇಶದ ಭಾಗವಾಗಿ ಬಿತ್ತರಿಸಿತ್ತು.ಚೀನಾದ ಆಜ್ಞೆಯ ಮೇರೆಗೆ ನೇಪಾಳ ಹಾಗೆ ಮಾಡಿದೆ ಎನ್ನಲಾಗಿದೆ.


ಏತನ್ಮಧ್ಯೆ, ನೇಪಾಳಿ ಸಂಸತ್ತಿನ ಕೆಳಮನೆ ಶನಿವಾರ (ಜೂನ್ 13) ನೇಪಾಳಿ ಸರ್ಕಾರ ಹೊರಡಿಸಿದ ಹೊಸ ನಕ್ಷೆಯನ್ನು ಅಂಗೀಕರಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದು. ಇದು ಈಗ ನೇಪಾಳಿ ಸಂಸತ್ತಿನ ಮೇಲ್ಮನೆ ಅಂಗೀಕಾರಕ್ಕಾಗಿ ಕಾಯುತ್ತಿದೆ.