ಬೀಜಿಂಗ್: ಭದ್ರತಾ ಕಾರಣಗಳಿಗಾಗಿ ಚೀನಾದ (China) ಆ್ಯಪ್‌ಗಳ ಮೇಲೆ ಭಾರತದ ನಿಷೇಧದ ಬಗ್ಗೆ ಚೀನಾ ಗುರುವಾರ ಗಂಭೀರ ಕಳವಳ ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ಚೀನಾದ ಸಂಸ್ಥೆಗಳು ಸೇರಿದಂತೆ ಎಲ್ಲಾ ವಿದೇಶಿ ಹೂಡಿಕೆದಾರರನ್ನು ಭಾರತವು ಪಾರದರ್ಶಕ, ನ್ಯಾಯೋಚಿತ ಮತ್ತು ತಾರತಮ್ಯರಹಿತ ರೀತಿಯಲ್ಲಿ ಪರಿಗಣಿಸುತ್ತದೆ ಎಂದು ಆಶಿಸುತೀವೆ ಎಂದು ಹೇಳಿದೆ. 


ಇದನ್ನೂ ಓದಿ: LIC IPO: ವಿಮಾ ಪಾಲಿಸಿಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ? ನೇರ ಲಿಂಕ್ ಇಲ್ಲಿದೆ


"ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಸಹಕಾರದ ಉತ್ತಮ ಅಭಿವೃದ್ಧಿಯನ್ನು ಕಾಪಾಡಿಕೊಳ್ಳಲು ಭಾರತವು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ನಾವು ಭಾವಿಸುತ್ತೇವೆ" ಎಂದು ವಾಣಿಜ್ಯ ಸಚಿವಾಲಯದ ವಕ್ತಾರ ಗಾವೋ ಫೆಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಭಾರತವು 54 ಮೊಬೈಲ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು (China Apps Ban) ನಿರ್ಬಂಧಿಸಿದೆ. ಚೀನಾದ 54 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. 


ಗಡಿ ವಿವಾದ ಸೇರಿ ದೇಶದ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಹಿನ್ನೆಲೆ ಈ ರೀತಿಯ ಕ್ರಮವನ್ನು ಪ್ರಧಾನಿ ಮೋದಿ (PM Modi) ನೇತೃತ್ವದ ಸರ್ಕಾರ ಕೈಗೊಂಡಿದೆ. ಬ್ಯೂಟಿ ಕ್ಯಾಮರಾ; ಸ್ವೀಟ್‌ ಸೆಲ್ಫಿ ಎಚ್‌ಡಿ, ಈಕ್ವಲೈಜರ್ & ಬಾಸ್ ಬೂಸ್ಟರ್, ವಿವಾ ವಿಡಿಯೊ ಎಡಿಟರ್, ಆ್ಯಪ್‌ಲಾಕ್, ಡುವಲ್ ಸ್ಪೇಸ್ ಲೈಟ್ ಸೇರಿದಂತೆ 54 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.


ಇದನ್ನೂ ಓದಿ: 13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಗರ್ಭಿಣಿಯರಾಗಿದ್ದ 8 ಬಾಲಕಿಯರು.. ಶಿಕ್ಷಕನಿಗೆ ಜೀವಾವಧಿ ಶಿಕ್ಷೆ!


2020ರ ಜೂನ್ 15ರಂದು ಲಡಾಖ್‌ ಗಡಿಯ ಗಾಲ್ವನ್ ಕಣಿವೆಯಲ್ಲಿ ಭಾರತ-ಚೀನಾ (India-China) ಸೇನಾ ಪಡೆಗಳ ನಡುವೆ ನಡೆದಿದ್ದ ಸಂಘರ್ಷದ ಬಳಿಕ ಕೇಂದ್ರ ಸರ್ಕಾರವು ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿತ್ತು. 


2020ರ ಜುಲೈ ತಿಂಗಳಲ್ಲಿ ಟಿಕ್‌ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್‌ವೈ ಲೈಟ್ ಸೇರಿದಂತೆ 47 ಚೀನಾ ಆ್ಯಪ್‌ಗಳ ಮೇಲೆ ನಿಷೇಧ ಹೇರಿತ್ತು. ಇದೀಗ ಚೀನಾದ 54 ಆ್ಯಪ್‌ಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ನಿಷೇಧ ಹೇರಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.