ಬೆಂಗಳೂರು : China Sky Colour Turns Red :  ಸಾಮಾನ್ಯವಾಗಿ  ಆಕಾಶ ನೀಲಿ ಬಣ್ಣದ್ದಾಗಿರುತ್ತದೆ. ಮೋಡಗಳಿಂದ ಮುಚ್ಚಿ ಹೋಗಿದ್ದಾಗ ಆಕಾಶವೆಲ್ಲಾ ಬಿಳಿಯಾಗಿ ಕಾಣುತ್ತದೆ. ಇನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ,  ಕಿತ್ತಳೆ ಅಥವಾ ತಿಳಿ ಕೆಂಪು ಬಣ್ಣದಲ್ಲಿ ಆಕಾಶ ಕಂಗೊಳಿಸುತ್ತದೆ. ಆದರೆ ಈಗ ವೈರಲ್ ಆಗುತ್ತಿರುವ ಚೀನಾದ ಆಕಾಶದ ಚಿತ್ರವನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. 


COMMERCIAL BREAK
SCROLL TO CONTINUE READING

ಚೀನಾದ ಈ ಫೋಟೋ ಮತ್ತು ವೀಡಿಯೊಗಳನ್ನು ಕೆಲವು ಸಮಯದಿಂದ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಆಕಾಶ ಪೂರ್ತಿ ಕಡು ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಕಾಣಬಹುದು. ಈ ಭಯಾನಕ ದೃಶ್ಯವು ಮೇ 7 ರಂದು ಚೀನಾದ ಝೋಶನ್ ನಗರದಲ್ಲಿ ಕಾಣಿಸಿಕೊಂಡಿದೆ. ಇದು ಯಾಕೆ ಹೀಗೆ ಎನ್ನುವುದು ಮೊದಲಿಗೆ ಯಾರಿಗೂ ಅರ್ಥವಾಗಿರಲಿಲ್ಲ. 


 


Viral Video: ಸ್ಕೂಟರ್ ಮೇಲೆ ಕುಳಿತ್ತಿದ್ದ ವ್ಯಕ್ತಿಗೆ ಏಕಾಏಕಿ ಅಟ್ಕಾಯಿಸಿಕೊಂಡ ಆತ್ಮ..!


'ಇದು ಪ್ರಪಂಚದ ಅಂತ್ಯ' ಎಂದು  ಮಾತನಾಡಿಕೊಂಡ ಜನ : 
ಈ ಫೋಟೋ ಮತ್ತು ವಿಡಿಯೋಗಳನ್ನು ನೋಡಿದ ಜನ, ಇದರ ಬಗ್ಗೆ ಭಿನ್ನ ಭಿನ್ನವಾಗಿ ಮಾತನಾಡಲು ಆರಂಭಿಸಿದ್ದಾರೆ. ಕೆಲವರು ಇದು ಚೀನಾದ ಪಾಪದ ಫಲ ಎಂದರೆ, ಇನ್ನು ಕೆಲವರು ಜಗತ್ತು ಅಂತ್ಯಗೊಳ್ಳುವ ಸೂಚನೆ ಎಂದು ಹೇಳಿದ್ದಾರೆ. ಮಾತ್ರವಲ್ಲ ವಿಜ್ಞಾನದ ದೃಷ್ಟಿಕೋನದಿಂದಳು ಇದನ್ನೂ ಕೆಲವರು ನೋಡಿದ್ದಾರೆ.  


ಕಾರಣ ತಿಳಿಸಿದ ಹವಾಮಾನ ಇಲಾಖೆ: 
ಚೀನಾದ ರಾಜ್ಯ ಮಾಧ್ಯಮ ಗ್ಲೋಬಲ್ ಟೈಮ್ಸ್ ಪ್ರಕಾರ, ಸ್ಥಳೀಯ ಹವಾಮಾನ ಇಲಾಖೆಯು ಬೆಳಕು ಮತ್ತು ಚದುರುವಿಕೆಯ ವಕ್ರೀಭವನದ ಕಾರಣದಿಂದಾಗಿ ಚೀನಾದ ಆಕಾಶವು ಕೆಂಪು ಬಣ್ಣದಲ್ಲಿ ಕಾಣುತ್ತಿದೆ ಎಂದು ಹೇಳಿದೆ. ಸಾಮಾನ್ಯವಾಗಿ ಬಂದರುಗಳಲ್ಲಿ ಉರಿಯುತ್ತಿರುವ ಕೆಂಪು ಮೀನುಗಾರಿಕೆ ದೀಪಗಳ ಕಾರಣದಿಂದ ಹೀಗಾಗುತ್ತದೆ ಎಂದು ಹೇಳಿದೆ. ಆಕಾಶವು ಶುಭ್ರವಾಗಿದ್ದಾಗ ಈ ಬೆಳಕು ಆಕಾಶದಲ್ಲಿ  ಹರಡುತ್ತವೆ. ಇದರಿಂದಾಗಿ ಆಕಾಶವು ಕೆಂಪು ಬಣ್ಣದಲ್ಲಿ ಕಾಣುತ್ತದೆ. ಈ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. 


ಇದನ್ನೂ ಓದಿ : Shocking Video: ಕಾರು ಚಲಾಯಿಸುತ್ತಿದ್ದಂತೆಯೇ ಪ್ರಜ್ಞೆ ಕಳೆದುಕೊಂಡ ಮಹಿಳೆ.! ಮುಂದೆ ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.