Viral Video: ಚೀನಾದಲ್ಲಿ ಶಂಕಿತ ಕೊರೊನಾ (Covid) ರೋಗಿಗಳನ್ನು ಇರಿಸಲು ಲೋಹದ ಪೆಟ್ಟಿಗೆಗಳ ಸಾಲುಗಳು, ಜನರನ್ನು ಕ್ವಾರಂಟೈನ್ ಶಿಬಿರಗಳಿಗೆ ಕರೆದೊಯ್ಯುವ ಬಸ್‌ಗಳ ಸಾಲುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಕಂಡುಬರುತ್ತಿವೆ.


COMMERCIAL BREAK
SCROLL TO CONTINUE READING

COVID-19 ಹರಡುವಿಕೆಯನ್ನು ತಡೆಗಟ್ಟಲು ಚೀನಾ ಹಲವಾರು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅವುಗಳಲ್ಲಿ ಒಂದು, ಈ ಶೂನ್ಯ ಕೋವಿಡ್ ನೀತಿ (China Zero Covid Rules).


ಇದನ್ನೂ ಓದಿ: ವೈಕುಂಠ ಏಕಾದಶಿ: ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ, ಇಸ್ಕಾನ್ ನೇರಪ್ರಸಾರ ವೀಕ್ಷಿಸಲು ಹೀಗೆ ಮಾಡಿ


ಚೀನಾ ತನ್ನ "ಶೂನ್ಯ ಕೋವಿಡ್" ನೀತಿಯ ಅಡಿಯಲ್ಲಿ ತನ್ನ ನಾಗರಿಕರ ಮೇಲೆ ಹಲವಾರು ಕಠಿಣ ನಿಯಮಗಳನ್ನು (Corona Rules) ವಿಧಿಸಿದೆ. ಬೀಜಿಂಗ್ ಮುಂದಿನ ತಿಂಗಳ ಚಳಿಗಾಲದ ಒಲಿಂಪಿಕ್ಸ್‌ಗೆ (Olympics) ಆತಿಥ್ಯ ವಹಿಸಲು ತಯಾರಿ ನಡೆಸುತ್ತಿರುವಾಗಲೂ ಲಕ್ಷಾಂತರ ಜನರನ್ನು ಸಂಪರ್ಕತಡೆಯಲ್ಲಿ ಇರಿಸಿದೆ.


ವರದಿಗಳ ಪ್ರಕಾರ, ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಜನರು ಹಾಸಿಗೆ ಮತ್ತು ಶೌಚಾಲಯದಿಂದ ಸುಸಜ್ಜಿತವಾದ ಈ ಪೆಟ್ಟಿಗೆಗಳಲ್ಲಿ (People Live In Metal Box) ಉಳಿಯಲು ಒತ್ತಾಯಿಸಲಾಗುತ್ತಿದೆ. ಓರ್ವ ವ್ಯಕ್ತಿ ಕೊರೊನಾ ಸೋಂಕಿಗೆ ಪಾಸಿಟಿವ್ ಎಂದು ಗೊತ್ತಾದ ಕ್ಷಣದಿಂದ ಎರಡು ವಾರಗಳವರೆಗೆ ಈ ಪೆಟ್ಟಿಗೆಯಲ್ಲಿ ಇರಿಸಲಾಗುತ್ತದಂತೆ. ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.  


 


Corona Virus) ಅನ್ನು ಮೊದಲು ಪತ್ತೆ ಮಾಡಿದ ಚೀನಾ, ಹರಡುವಿಕೆ ತಡೆಯಲು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತಂದಿದೆ. 


ಇದನ್ನೂ ಓದಿ: LPG ಸಿಲಿಂಡರ್‌ಗಿಂತ ತುಂಬಾ ಅಗ್ಗದ ಬೆಲೆಗೆ ಸಿಗುತ್ತೆ PNG ಗ್ಯಾಸ್! ಇದು ಬಳಕೆಗೆ ತುಂಬಾ ಉತ್ತಮ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.