ಬೀಜಿಂಗ್: ಚೀನಾದ ಮೃತ್ಯುಕಾರಕ ವೈರಸ್ ಕರೋನಾ ವೈರಸ್ ಹೆಚ್ಚಾಗಿ ಸಣ್ಣ ಕೈಗಾರಿಕೆಗಳ ಮೇಲೆ ತನ್ನ ಪ್ರಭಾವ ಬೀರಿದೆ. ಇದರ ಪ್ರಭಾವದಿಂದಾಗಿ ಸಣ್ಣ ಕೈಗಾರಿಕೆಗಳು ಇದುವರೆಗೂ ತಮ್ಮ ಕೆಲಸ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಪೂರೈಕೆ ಸರಪಳಿ ಅಡಚಣೆಯನ್ನು ನಿವಾರಿಸಲು ಕೈಗಾರಿಕೋದ್ಯಮಿಗಳು ಹೆಣಗಾಡುವಂತಾಗಿದೆ. ಈ ವೈರಸ್‌ನಿಂದಾಗಿ, ಚೀನಾದಲ್ಲಿ ಬಂದ್ ನಂತಹ ವಾತಾವರಣ ಮನೆಮಾಡಿದೆ.


COMMERCIAL BREAK
SCROLL TO CONTINUE READING

ಅಧಿಕಾರಿಗಳು ಜನವರಿಯಲ್ಲಿ ಹೊಸ ವರ್ಷದ ರಜೆಯನ್ನು ವಿಸ್ತರಿಸಿದರು. ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಶಾಲೆಗಳು, ಕಾರ್ಖಾನೆಗಳು ಮತ್ತು ರೈಲ್ವೆಗಳನ್ನು ಮುಚ್ಚುವಂತೆ ಆದೇಶಿಸಿದರು. ಈ ಅಪಾಯಕಾರಿ ವೈರಸ್‌ನಿಂದ ಚೀನಾದಲ್ಲಿ ಇದುವರೆಗೂ 2,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.


ಕೈಗಾರಿಕಾ ಸಚಿವಾಲಯದ ವಕ್ತಾರ ಟಿಯಾನ್ ಯುಲಾಂಗ್ ಸೋಮವಾರ ಕೆಲವು ಕೈಗಾರಿಕೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಆದರೆ 10 ರಲ್ಲಿ ಕೇವಲ ಮೂರು ಉದ್ಯಮಗಳು ಸಣ್ಣ ಉದ್ಯಮಗಳಿಗೆ ಮರಳಿದೆ ಎಂದು ಹೇಳಿದರು.


ಇದಲ್ಲದೆ, ಸಾರಿಗೆ ಅಡಚಣೆಯಿಂದಾಗಿ ನೌಕರರಿಗೆ ಪ್ರಯಾಣ ಕಷ್ಟಕರವಾಗಿದೆ. ಅಲ್ಲದೆ, ಅದರಿಂದ ಕಚ್ಚಾ ವಸ್ತುಗಳ ಸಾಗಾಣೆಯೂ ಸಮಸ್ಯೆ ಆಗಿದೆ.


ಅಧಿಕಾರಿಗಳು ಸೋಮವಾರ ಹಣಕಾಸು ಸೇರಿದಂತೆ ಸಣ್ಣ ಕೈಗಾರಿಕೆಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದಾಗಿ ವಾಗ್ದಾನ ಮಾಡಿದರು. ಸಾರಿಗೆ ಮತ್ತು ಪ್ರವಾಸೋದ್ಯಮ ವ್ಯವಹಾರಕ್ಕೆ ಆದ್ಯತೆಯ ತೆರಿಗೆ ನಿಯಮವನ್ನು ಇದು ಒಳಗೊಂಡಿದೆ.


ಏತನ್ಮಧ್ಯೆ, ಉಕ್ಕಿನ ಉದ್ಯಮವು ಶೇಕಡಾ 70 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ರೈಲು ಸರಕು ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಚೀನಾದ ಉನ್ನತ ಆರ್ಥಿಕ ಯೋಜನಾ ಸಂಸ್ಥೆ ಅಧಿಕಾರಿ ಕಾಂಗ್ ಲಿಯಾಂಗ್ ಹೇಳಿದ್ದಾರೆ.


ಚೀನಾದ ಆರ್ಥಿಕತೆಯ ಮೇಲೆ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಶೇಕಡಾ 60 ರಷ್ಟು ಪ್ರಭಾವ ಹೊಂದಿವೆ. ದೇಶದ ಆರೋಗ್ಯ ಬಿಕ್ಕಟ್ಟಿನಿಂದಾಗಿ ಪ್ರಮುಖ ಕ್ಷೇತ್ರಗಳು ಸಾಕಷ್ಟು ಒತ್ತಡದಲ್ಲಿವೆ. ಕರೋನಾ ವೈರಸ್ ಅಲ್ಪಾವಧಿಯ ಆರ್ಥಿಕ ಪರಿಣಾಮವನ್ನು ಬೀರುತ್ತದೆ ಮತ್ತು ಅದನ್ನು ಹಿಡಿದಿಡಲು ಯೋಗ್ಯವಾಗಿದೆ ಎಂದು ಅಧ್ಯಕ್ಷ ಕ್ಸಿ ಚಿನ್ಫಿಂಗ್ ಭಾನುವಾರ ಹೇಳಿದ್ದಾರೆ.


ಆದರೆ ಇದು ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೂಡಿಸ್ ಅನಾಲಿಟಿಕ್ಸ್ ಇಡೀ ವರ್ಷದ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ 6.1 ರಿಂದ 5.4 ಕ್ಕೆ ಇಳಿಸಿದೆ.