Chinese Bride Invites Ex Lovers: ಕೇವಲ ಭಾರತದಲ್ಲಷ್ಟೇ ಅಲ್ಲ, ಚೀನಾದಲ್ಲಿಯೂ ಕೂಡ ಮದುವೆಯ ಸಂದರ್ಭದಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಇತ್ತೀಚೆಗಷ್ಟೇ ಚೀನಾದ ಯುವತಿಯೋರ್ವಳು ಯಾವ ರೀತಿ ತನಗೆ ಬಲವಂತವಾಗಿ ವಿವಾಹ ಮಾಡಿಸಲಾಗುತ್ತಿದೆ ಎಂಬುದನ್ನು ಕ್ಯಾಮರಾ ಮುಂದೆ ಅಳುತ್ತ ಹೇಳಿಕೊಂಡ ಘಟನೆ ಮುನ್ನೆಲೆಗೆ ಬಂದಿತ್ತು. ಇಂತಹುದೇ ಮತ್ತೊಂದು ಪ್ರಕರಣ ಚೀನಾದಿಂದ ಇದೀಗ ಹೊರಹೊಮ್ಮಿದ್ದು, ಈ ಪ್ರಕರಣದಲ್ಲಿ ವಧು ತನ್ನ ಮದುವೆಯ ಸಂದರ್ಭದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದ್ದಾಳೆ. ವಿವಾಹದಲ್ಲಿ ಆಕೆ ತನ್ನ ಐವರು ಹಳೆ ಪ್ರೇಮಿಗಳನ್ನು ಕರೆಯಿಸಿದ್ದೆ ಈ ರಾದ್ಧಾಂತಕ್ಕೆ ಕಾರಣ ಎನ್ನಲಾಗುತ್ತಿದೆ.

COMMERCIAL BREAK
SCROLL TO CONTINUE READING

ಭಾರಿ ಸಡಗರದಿಂದ ಸಿದ್ಧತೆ ನಡೆಸಿದ ಕುಟುಂಬಸ್ಥರು
ಈ ಘಟನೆಯು ಚೀನಾದ ಹುಬೈ ಪ್ರಾಂತ್ಯದ ನಗರವೊಂದರಲ್ಲಿ ನಡೆದಿದೆ ಎನ್ನಲಾಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಅಲ್ಲಿನ ಒಂದು ಯುವತಿಯ ವಿವಾಹಕ್ಕಾಗಿ ಭಾರಿ ಸಡಗರದಿಂದ ಸಿದ್ಧತೆ ನಡೆಸಲಾಗಿತ್ತು ಮತ್ತು ವರನು ತನ್ನ ಅತಿಥಿಗಳು ಮತ್ತು ಸಂಬಂಧಿಕರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದಾನೆ. ಯುವತಿಯ ಕುಟುಂಬಸ್ಥರು ಕೂಡ ಆತನಿಗೆ ತನ್ನ ಸಂಬಂಧಿಕರ ಜೊತೆಗೂಡಿ ಅಬ್ಬರದ ಸ್ವಾಗತ ಕೋರಲು ಭರದ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.


ಇದನ್ನೂ ಓದಿ-Watch Video: ನೇಪಾಳ ವಿಮಾನ ದುರಂತ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್


ಹಳೆ ಪ್ರೇಮಿಗಳನ್ನು ವರನ ಪಕ್ಕಕ್ಕೆ ಕೂರಿಸಿದ ವಧು
ಈ ಸಂದರ್ಭದಲ್ಲಿ ವಧು ತನ್ನ ಐವರು ಹಳೆಯ ಪ್ರೇಮಿಗಳನ್ನು ಕೂಡ ವಿವಾಹಕ್ಕೆ ಆಹ್ವಾನಿಸಿದ್ದು ಅತ್ಯಂತ ಆಘಾತಕಾರಿ ಸಂಗತಿಯಾಗಿತ್ತು. ಮೊದಮೊದಲು ಯಾರಿಗೂ ಇದರ ಅರಿವಿರಲಿಲ್ಲ, ಆದರೆ ಕ್ರಮೇಣ ರಹಸ್ಯಗಳು ಬಹಿರಂಗವಾಗುತ್ತಲೇ ಇದ್ದವು ಮತ್ತು ರಹಸ್ಯಗಳು ಒಂದೊಂದಾಗಿ ಬಹಿರಂಗವಾಗತೊಡಗಿದ್ದವು. ನಂತರ ಮದುವೆ ಸಮಾರಂಭದಲ್ಲಿ ವಧು ತನ್ನ ಎಲ್ಲಾ ಹಳೆಯ ಪ್ರೇಮಿಗಳನ್ನು ವರನ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಮಾಡಿ ತನ್ನ ಹದ್ದನ್ನೇ ಮೀರಿದ್ದಾಳೆ. 


ಇದನ್ನೂ ಓದಿ-90 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ


ಸಮಾರಂಭದಲ್ಲಿ ಐವರೂ ಶಾಮೀಲಾಗಿದ್ದರು
ಐವರಿಗೂ ವಿಶೇಷ ಟೇಬಲ್ ಗಳನ್ನು ಹಾಕಲಾಗಿದ್ದು ಹೆಚ್ಚಿನವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಮದುವೆಯ ಸಮಯದಲ್ಲಿ, ಈ ಐವರನ್ನು ಸಹ ವಿಧಿಗಳಲ್ಲಿ ಶಾಮೀಲುಗೊಳಿಸಲಾಗಿತ್ತು. ವರನ ಕಡೆಯ ಜನ ಇದನ್ನೆಲ್ಲ ನೋಡಿ ಆವಾಕ್ಕಾಗಿದ್ದಾರೆ. ಸದ್ಯ, ಇದು ಹೇಗೆ ಸಾಧ್ಯ ಎಂಬುದು ಜನರ ನಡುವೆ ಚರ್ಚೆಯ ವಿಷಯವಾಗಿ ಉಳಿದಿದೆ. ಕ್ಷಣಾರ್ಧದಲ್ಲಿ ವಿಷಯ ಗ್ರಹಿಸಿದ ವಧುವಿನ ಕಡೆಯಿಂದ ಬಂದವರು ವಿಷಯವನ್ನೆಲ್ಲ ಇತ್ಯರ್ಥಪಡಿಸಿ ನಂತರ ಮದುವೆಯನ್ನು ನೆರವೇರಿಸಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.