OMG: 10 ಬಾಟಲ್ Beer ಕುಡಿದು ಮತ್ತಿನಲ್ಲಿ 18 ಗಂಟೆ ಮಲಗಿದವನ ಗತಿ ಏನಾಗಿದೆ ಗೊತ್ತಾ?
10 ಬಾಟಲಿ ಬಿಯರ್ ಕುಡಿದ ಈ ವ್ಯಕ್ತಿ ನಷೆಯಲ್ಲಿ 18 ಗಂಟೆಗಳ ಕಾಲ ಮಲಗಿದ್ದಾನಂತೆ..!
ನವದೆಹಲಿ: ಚೀನಾದ ವ್ಯಕ್ತಿಯೊಬ್ಬ 10 ಬಾಟಲಿ ಬಿಯರ್ ಕುಡಿದಿದ್ದಾನೆ. ಆದರೆ ನಂತರ ಏನಾಗಿದೆ ಎಂಬುದನ್ನು ನೀವೂ ಕೂಡ ಊಹಿಸಲು ಸಾಧ್ಯವಿಲ್ಲ.
ಈ ವ್ಯಕ್ತಿ 10 ಬಾಟಲ್ ಬಿಯರ್ ಕುಡಿದ ನಂತರ ನಿದ್ರೆಗೆ ಜಾರಿದ್ದಾನೆ. ತುಂಬಾ ಕುಡಿದಿದ್ದರಿಂದ ಆಟ 18 ಗಂಟೆಗಳ ಕಾಲ ಮಲಗಿದ್ದಾನೆ. ಇಷ್ಟು ಹೊತ್ತು ಮಲಗಿದ್ದರಿಂದ ಆತನ ಮೂತ್ರ ಮೂತ್ರಕೋಶದಲ್ಲಿಯೇ ಸಂಗ್ರಹವಾಗಿದೆ.
18 ಗಂಟೆಗಳ ಕಾಲ ಮಲಗಿ ನಂತರ ಎಚ್ಚೆತ್ತುಕೊಂಡ ಆ ವ್ಯಕ್ತಿಯ ಹೊಟ್ಟೆಯ ಅಕ್ಕಪಕ್ಕಕ್ಕೆ ವಿಪರೀತ ನೋವು ಕಾಣಿಸಿಕೊಂಡಿದೆ. ಅವಸರದಲ್ಲಿ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಲ್ಲಿ ಆತನ ಮೂತ್ರಾಶಯ ಹರಿದುಹೋಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ವರದಿಗಳ ಪ್ರಕಾರ ವ್ಯಕ್ತಿಯನ್ನು 40 ವರ್ಷ ವಯಸ್ಸಿನ ಹೂ ಎಂದು ಗುರುತಿಸಲಾಗಿದೆ. ಆತ ಬಿಯರ್ ಕುಡಿದು ಮತ್ತಿನಲ್ಲಿ 18 ಗಂಟೆಗಳ ಕಾಲ ಮಲಗಿ ಹೋಗಿದ್ದಾನೆ. ಎಚ್ಚೆತ್ತುಕೊಂಡ ಬಳಿಕ ಆತನ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಆತನ ಅಕ್ಕಪಕ್ಕದ ಜನರು ಭಯಭೀತರಾಗಿದ್ದಾರೆ. ಆತನ ನೋವು ಎಷ್ಟೊಂದು ವಿಪರೀತವಾಗಿತ್ತೆಂದರೆ, ಆತನಿಂದ ನೇರವಾಗಿ ಮಲಗಿಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ.
ತಕ್ಷಣವೇ ಆತನನ್ನು ಝೆಜಿಯಾಂಗ್ ಪ್ರಾಂತ್ಯದಲ್ಲಿರುವ ಒಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ. ಆತನ ಪರೀಕ್ಷೆ ನಡೆಸಿದ ವೈದ್ಯರು, ಆತನ ಮೂತ್ರಾಶಯ ಹರಿದುಹೋಗಿದೆ ಎಂದು ಹೇಳಿದ್ದಾರೆ. ಆತನ ಮೂತ್ರಾಶಯ ಒಟ್ಟು ಮೂರು ಭಾಗಗಳಲ್ಲಿ ಹರಿದುಹೋಗಿದೆ ಎಂದಿದ್ದಾರೆ. ಸದ್ಯ ಆತನ ಮೇಲೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.