ಬಿಜಿಂಗ್: LI Keqiang Retires This Year - ಚೀನಾದಲ್ಲಿ ನಂ.2 ಸ್ಥಾನದಲ್ಲಿರುವ ನಾಯಕ ಮತ್ತು ಪ್ರಧಾನಿ ಲಿ ಕೆಕಿಯಾಂಗ್ ನಿವೃತ್ತಿ ಘೋಷಿಸಿದ್ದಾರೆ. ಐದು ವರ್ಷಗಳ ಅಧಿಕಾರಾವಧಿಯ ನಂತರ ಈ ವರ್ಷ ತಾವು ನಿವೃತ್ತಿ ಹೊಂದುತ್ತಿರುವುದಾಗಿ ಅವರು ಶುಕ್ರವಾರ ಹೇಳಿದ್ದಾರೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಂತರ ಆಡಳಿತಾರೂಢ ಚೀನಾದ ಕಮ್ಯುನಿಸ್ಟ್ ಪಕ್ಷದ (CPC) ಎರಡನೇ ನಾಯಕ ಲಿ ಕೆಕಿಯಾಂಗ್ (66) ಅವರು ಪ್ರಧಾನಿಯಾಗಿ (Chinese PM) ಇದು ನನ್ನ ಕೊನೆಯ ವರ್ಷ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

10 ವರ್ಷಗಳ ನಂತರ ಮುಖಂಡರು ನಿವೃತ್ತರಾಗುತ್ತಾರೆ
ಲಿ ಕೆಕಿಯಾಂಗ್ ಅವರು ಸರ್ಕಾರದ ಇತರ ಸದಸ್ಯರೊಂದಿಗೆ ಈ ವರ್ಷ ನಿವೃತ್ತರಾಗಲಿದ್ದಾರೆ. CPC ಕಾಂಗ್ರೆಸ್‌ನಲ್ಲಿ ಎಲ್ಲಾ ಹಂತಗಳಲ್ಲಿ ಹೊಸ ನಾಯಕತ್ವ ರಚನೆಯಾಗಲಿದೆ. CPC ನಿಯಮಗಳ ಪ್ರಕಾರ, ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸುವ ನಾಯಕರು ಐದು ವರ್ಷಗಳ ಎರಡು ಅವಧಿಯ ನಂತರ ನಿವೃತ್ತರಾಗುತ್ತಾರೆ.


ಇದನ್ನೂ ಓದಿ-Russia-Ukraine War: ಪಾಶ್ಚಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪುಟಿನ್


ಅಧ್ಯಕ್ಷ ಜಿನ್‌ಪಿಂಗ್ ಸ್ಥಿತಿ ಏನು?
ಸೈನ್ಯ ಮತ್ತು ಅಧ್ಯಕ್ಷೀಯ ಕಚೇರಿಯನ್ನು ಮುನ್ನಡೆಸುವುದರ ಜೊತೆಗೆ, CPCಯ ನೇತೃತ್ವ ವಹಿಸಿರುವ 68 ವರ್ಷದ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಹಿಂದಿನವರಿಗಿಂತ ಭಿನ್ನವಾಗಿ ಅಧಿಕಾರದಲ್ಲಿ ಮುಂದುವರೆಯುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ವರ್ಷ ತಮ್ಮ 10 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಅವರು ಜೀವಿತಾವಧಿಯವರೆಗೆ ಅಧಿಕಾರದಲ್ಲಿ ಮುಂದುವರೆಯುವ ಸಾಧ್ಯತೆಯಿದೆ.


ಇದನ್ನೂ ಓದಿ-Lost City: ಈಜಿಪ್ಟ್ ನಲ್ಲಿ 3000 ವರ್ಷಗಳಷ್ಟು ಹಳೆ ನಗರ ಪತ್ತೆ


2013ರಲ್ಲಿ ಮೊದಲ ಬಾರಿಗೆ ಲಿ ಕೆಕಿಯಾಂಗ್ ಪ್ರಧಾನಿಯಾಗಿದ್ದರು
ಲಿ ಕೆಕಿಯಾಂಗ್ ಅವರು 2013 ರಲ್ಲಿ ದೇಶದ ಪ್ರಧಾನಿಯಾಗಿದ್ದರು. ಅವರು ಚೀನಾ ಕ್ಯಾಬಿನೆಟ್ನ ರಾಜ್ಯ ಮಂಡಳಿಯ ಮುಖ್ಯಸ್ಥರಾಗಿದ್ದಾರೆ. ಅಧ್ಯಕ್ಷ ಶಿ ಜಿನ್‌ಪಿಂಗ್ (Xi Jinping) ನಂತರ ಲಿ ಕೆಕಿಯಾಂಗ್ ಚೀನಾದ ಎರಡನೇ ಸರ್ವೋಚ್ಚ ನಾಯಕರಾಗಿದ್ದಾರೆ.


ಇದನ್ನೂ ಓದಿ-ಪಾಕಿಸ್ತಾನದತ್ತ ಸಿಡಿಯಿತಾ ಭಾರತದ ಕ್ಷಿಪಣಿ..! ವಾಸ್ತವ ಏನು ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.