Xi Jinping urges PLA Troops: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗಡಿ ರಕ್ಷಣೆ ಮತ್ತು ನಿಯಂತ್ರಣದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ತಮ್ಮ ಗಡಿ ಪಡೆಗಳಿಗೆ ಕರೆ ನೀಡಿದ್ದಾರೆ. ದೇಶದ ಗಡಿಗಳಲ್ಲಿ 'ಉಕ್ಕಿನ ಪಡೆ' ನಿರ್ಮಿಸಲು ಕರೆ ನೀಡಿದ್ದಾರೆ. ಸರ್ಕಾರಿ ಮಾಧ್ಯಮಗಳು, ಶುಕ್ರವಾರ ಈ ಮಾಹಿತಿ ನೀಡಿವೆ. ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಉನ್ನತ ಕಮಾಂಡ್, ಸೆಂಟ್ರಲ್ ಮಿಲಿಟರಿ ಕಮಿಷನ್ (ಸಿಎಂಸಿ) ಮುಖ್ಯಸ್ಥ ಕ್ಸಿ ಬುಧವಾರ ಒಳಗಿನ ಮಂಗೋಲಿಯಾ ಸ್ವಾಯತ್ತ ಪ್ರದೇಶಕ್ಕೆ ಭೇಟಿ ನೀಡಿದರು. ಗಡಿ ನಿರ್ವಹಣೆ ಮತ್ತು ನಿಯಂತ್ರಣ ರಕ್ಷಣೆಯಲ್ಲಿ ಹೊಸ ಮಾದರಿ ನಿರ್ಮಿಸುವಂತೆ ಚೀನಾ ಅಧ್ಯಕ್ಷರು ಸೈನಿಕರಿಗೆ ಕರೆ ನೀಡಿದ್ದಾರೆ. ಅಧಿಕೃತ ಸುದ್ದಿ ಸಂಸ್ಥೆ 'ಕ್ಸಿನ್ಹುವಾ' ಶುಕ್ರವಾರ ವರದಿ ಮಾಡಿದೆ. ಗಡಿ ರಕ್ಷಣೆ ಮತ್ತು ನಿಯಂತ್ರಣದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಸೂಚಿಸಿದ್ದಾರೆ. ಗಡಿಯುದ್ದಕ್ಕೂ ನಿಯೋಜಿಸಲಾದ ಚೀನಾದ ಪಡೆಗಳಿಗೆ 'ಉಕ್ಕಿನ ಪಡೆ' ನಿರ್ಮಿಸಲು ಕರೆ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಯುಎಸ್ ನಲ್ಲಿ ಭಾರಿ ಸಂಭ್ರಮ, 'ಐತಿಹಾಸಿಕ ಭೇಟಿ ಇದಾಗಿರಲಿದೆ' ಎಂದ ಪೆಂಟಗನ್


ಗಡಿ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸಂವಹನ : 


2012 ರಲ್ಲಿ ಅಧಿಕಾರಕ್ಕೆ ಬಂದ ಕ್ಸಿ, ಸೈನಿಕರೊಂದಿಗೆ ಸಂವಹನ ನಡೆಸಲು ಟಿಬೆಟ್ ಸೇರಿದಂತೆ ವಿವಿಧ ಗಡಿ ಪ್ರದೇಶಗಳಿಗೆ ಆಗಾಗ ಭೇಟಿ ನೀಡುತ್ತಾರೆ. 2021 ರಲ್ಲಿ ಟಿಬೆಟ್‌ಗೆ ಮೊದಲ ಭೇಟಿಯ ಸಮಯದಲ್ಲಿ ಅವರು ಅರುಣಾಚಲ ಪ್ರದೇಶದ ಸಮೀಪವಿರುವ ಆಯಕಟ್ಟಿನ ಸ್ಥಳವಾದ ಗಡಿ ಪಟ್ಟಣವಾದ ನ್ಯಿಂಗ್‌ಚಿಗೆ ಅಪರೂಪದ ಭೇಟಿ ನೀಡಿದರು. 


PLA ನ ಇನ್ನರ್ ಮಂಗೋಲಿಯಾ ಮಿಲಿಟರಿ ಕಮಾಂಡ್‌ಗೆ ಕ್ಸಿ ಭೇಟಿ ನೀಡಿದರು. ಗಡಿ ಪಡೆಗಳ ನಡುವೆ ಒಗ್ಗಟ್ಟನ್ನು ಸಾಧಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಿಪಿಸಿ ಮತ್ತು ಸರ್ಕಾರಿ ಇಲಾಖೆಗಳು, ಮಿಲಿಟರಿ, ಕಾನೂನು ಜಾರಿ ಸಂಸ್ಥೆಗಳು ಮತ್ತು ಗಡಿ ರಕ್ಷಣೆಯಲ್ಲಿ ಸಾರ್ವಜನಿಕರ ನಡುವಿನ ಸಹಕಾರದ ಬಗ್ಗೆ ಮತ್ತು ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಎಲ್ಲಾ ಪಕ್ಷಗಳ ಜಂಟಿ ಪ್ರಯತ್ನಗಳಿಗೆ ಕ್ಸಿ ಕರೆ ನೀಡಿದರು.


ಇದನ್ನೂ ಓದಿ: ಮತ್ತೊಮ್ಮೆ ಭೀಕರ ಬಾಂಬ್ ದಾಳಿಗೆ ನಡುಗಿದ ಅಫ್ಘಾನ್ ಭೂಮಿ, 11 ಜನರ ದುರ್ಮರಣ


ಚೀನಾದ ಪ್ರಗತಿಯನ್ನು ಶ್ಲಾಘಿಸಿದ ಕ್ಸಿ : 


ದೇಶದ ಉತ್ತರದ ಗಡಿಯಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಪ್ರದೇಶದ ಗಡಿ ಪಡೆಗಳ ಪಾತ್ರವನ್ನು ಕ್ಸಿ ಶ್ಲಾಘಿಸಿದರು. 2012 ರಲ್ಲಿ ಅಧಿಕಾರಕ್ಕೆ ಬಂದ ನಂತರ ಗಡಿ ರಕ್ಷಣಾ ಕಾರ್ಯದಲ್ಲಿ ಚೀನಾದ ಪ್ರಗತಿಯನ್ನು ಕ್ಸಿ ಶ್ಲಾಘಿಸಿದರು. ದೇಶದ ಗಡಿ ಪಡೆಗಳು ಮಿಲಿಟರಿ ತರಬೇತಿ ಮತ್ತು ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸಿವೆ. ಗಡಿ ಪ್ರದೇಶಗಳಲ್ಲಿ ಗಡಿ ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಿದೆ. ಪಡೆಗಳು ಚೀನಾದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ಕಾಪಾಡಿವೆ ಎಂದು ಹೇಳಿದರು.


ಇದನ್ನೂ ಓದಿ: ಇದು ಜಗತ್ತಿನ ಏಕೈಕ ಅಂಧ ಗ್ರಾಮ! ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲರೂ ಕುರುಡರೇ; ಏಕೆ ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.