ಪೆಂಟಾಗನ್ : ಕೊನೆಗೂ ಮಹಾವಿನಾಶವೊಂದು ಮರೆಯಾಗಿದೆ.  ಬಾಹ್ಯಕಾಶ ಕೇಂದ್ರದ ಲಗಾಮು ತಪ್ಪಿದ ಚೀನಾದ ರಾಕೆಟ್ ಲಾಂಗ್ ಮಾರ್ಚ್ 5ಬಿ (Chinese rocket Long March 5B) ಕೊನೆಗೂ ಭೂಮಿಗೆ ಅಪ್ಪಳಿಸಿದೆ. ಭಾರೀ ವಿನಾಶ ಸೃಷ್ಟಿಸಬಹುದಾಗಿದ್ದ  ನಿಯಂತ್ರಣ ಕಳೆದುಕೊಂಡಿದ್ದ ಈ ಚೀನಾ ರಾಕೇಟಿನ  ಅವಶೇಷ ಹಿಂದೂ ಮಹಾಸಾಗರದ ಗರ್ಭಕ್ಕೆ ಅಪ್ಪಳಿಸಿದೆ. 


COMMERCIAL BREAK
SCROLL TO CONTINUE READING

ಭಾರತ ಜಸ್ಟ್ ಮಿಸ್..!
ಅಮೇರಿಕಾ (America) ಬಾಹ್ಯಾಕಾಶ ತಜ್ಷರ ಅನುಮಾನದ ಪ್ರಕಾರ ಲಗಾಮು ಇಲ್ಲದ ಈ ಚೀನಾದ ರಾಕೇಟ್ (Chinese rocket ) ಗಂಟೆಗೆ 18000 ಮೈಲು ರಕ್ಕಸ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿತ್ತು. ಅದರ ರಕ್ಕಸ ವೇಗದ ಕಾರಣ ಈ ರಾಕೇಟು ಎಲ್ಲಿ ಅಪ್ಪಳಿಸಲಿದೆ ಎನ್ನುವುದು ಪತ್ತೆ ಹಚ್ಚುವುದು ಕೂಡಾ ಕಷ್ಟಕರವಾಗಿತ್ತು. ಭೂಮಿಯ ಜನಸಂದಣಿಯ ಸ್ಥಳದ ಮೇಲೆ ಏನಾದರೂ ಅಪ್ಪಳಿಸಿದರೆ ಮಹಾ ವಿನಾಶ ಉಂಟಾಗುವ ಸಾಧ್ಯತೆ ಇತ್ತು. ಚೀನಾ (China) ಬಾಹ್ಯಾಕಾಶ ತಜ್ಞರ ಪ್ರಕಾರ ರಕ್ಕಸ ವೇಗದ ಈ ರಾಕೇಟಿನ  ಅವಶೇಷ ಭಾರತ-ಶ್ರೀಲಂಕಾ-ಮಾಲ್ದಿವ್ಸ್ (Srilanka Maldives) ಮಧ್ಯದ ಒಂದು ಸ್ಥಳದಲ್ಲಿ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ. ಸಾಗರ ಗರ್ಭ ಸೇರಿದ ಕಾರಣ ಭಾರತ ಸಂಭಾವ್ಯ  ಒಂದು ದುರಂತದಿಂದ ಬಚಾವ್ ಆಗಿದೆ.  ಇದರಿಂದ ಯಾವುದೇ ಜೀವಹಾನಿಯಾದ ವರದಿ ಇಲ್ಲಿಯವರೆಗೆ ಬಂದಿಲ್ಲ.


ಇದನ್ನೂ ಓದಿ : America- ತನ್ನೆಲ್ಲಾ ನಾಗರೀಕರು ಭಾರತದಿಂದ ವಾಪಸ್ ಮರಳುವಂತೆ ಅಮೆರಿಕ ಮನವಿ


100 x 16 ಅಡಿ ಸುತ್ತಳತೆಯ ಮಹಾರಾಕೇಟ್ ಅದು :
ಈ ರಾಕೇಟ್ 100 ಅಡಿ ಉದ್ದ ಹಾಗೂ 16 ಅಡಿ ಅಗಲ ಹೊಂದಿದೆ. ವಾಯುಮಂಡಲ ಪ್ರವೇಶದ ಬಳಿಕ ಇದರ ಒಂದು ಭಾಗ ಸುಟ್ಟು ಭಸ್ಮವಾಗಿದೆ.  ಉಳಿದ ಭಾಗ ಇದೀಗ ಸಾಗರ ತಳ ಸೇರಿದೆ.  ನಿಯಂತ್ರಣ ಕಳೆದುಕೊಂಡ ಈ ರಾಕೇಟ್ (Rocket) ದಕ್ಷಿಣ ಭಾರತ, ಈಶಾನ್ಯ ಭಾರತ, ಆಸ್ಟ್ರೇಲಿಯಾ, ದಕ್ಷಿಣಪೂರ್ವ ಅಮೆರಿಕ, ಮೆಕ್ಸಿಕೋ, ಮಧ್ಯ ಅಮೆರಿಕ, ಕೆರಿಬಿಯನ್, ಪೆರು, ಇಕ್ವೆಡಾರ್ ಕೊಲಂಬಿಯಾ, ವೆನಿಜುವೆಲಾ, ದಕ್ಷಿಣ ಯುರೋಪ್, ಆಫ್ರೀಕಾ ದೇಶದ ಯಾವುದಾದರೂ ಭಾಗಕ್ಕೆ ಅಪ್ಪಳಿಸಬಹುದೆಂಬ  ಅನುಮಾನ ವ್ಯಕ್ತವಾಗಿತ್ತು. ಅದರ ಮಹಾವೇಗದ ಕಾರಣ ಲ್ಯಾಂಡಿಂಗ್ (Landing) ನಿಖರ ಜಾಗವನ್ನು ಪತ್ತೆ ಹಚ್ಚಲು ವಿಜ್ಞಾನಿಗಳಿಗೆ ಕಷ್ಟವಾಗಿತ್ತು. 
ನಿಮಗೆ ಗೊತ್ತಿರಲಿ.. ಅಂತರಿಕ್ಷದಲ್ಲಿ ನಿರ್ಮಿಸಲಾಗುತ್ತಿರುವ ತನ್ನ ಸ್ಪೇಸ್ ಸ್ಟೇಷನ್ ನ ಮೊದಲ ಭಾಗವನ್ನು ಚೀನಾ ಈ ರಾಕೆಟ್ ಮೂಲಕವೇ ರವಾನಿಸಿತ್ತು. 


ಇದನ್ನೂ ಓದಿ : ಭಾರತದಲ್ಲಿನ ಕೊರೊನಾ ಸಾವುಗಳು ಹೃದಯ ವಿದ್ರಾವಕಾರಿ -ಕಮಲಾ ಹ್ಯಾರಿಸ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.