ನವದೆಹಲಿ: ಚೀನಾದ ನಿಘೂಡ ಕೊರೊನಾ ವೈರಸ್ ನಿಂದ ಮರಣ ಹೊಂದುತ್ತಿರುವವರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಿಘೂಡ ವೈರಸ್ ನಿಂದಾಗುವ ಸೋಂಕು ತಗುಲಿ ಇದುವರೆಗೆ ಸುಮಾರು 25 ಜನರು ಪ್ರಾಣ ಕಳೆದುಕೊಂಡಿದ್ದು, 830 ಕ್ಕೂ ಅಧಿಕ ಜನರಿಗೆ ಈ ವೈರಸ್ ತಗುಲಿರುವುದು ಪುಷ್ಟಿಯಾಗಿದೆ. ಇತ್ತ ಮುಂಬೈನಲ್ಲಿಯೂ ಕೂಡ ಇಬ್ಬರಿಗೆ ಈ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಕಸ್ತೂರ್ಬಾ ಆಸ್ಪತ್ರೆಗೆ ಭರ್ತಿ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಸದ್ಯ ಸಾಮಾಜಿಕ ಮಾಧ್ಯಮಗಳ ಮೇಲೆ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಚೀನಾದ ಯುವತಿಯೋರ್ವಳು ಬಾವಲಿಗಳ ಸೂಪ್ ಸೇವಿಸುತ್ತಿರುವುದನ್ನು ತೋರಿಸಲಾಗಿದೆ. ಈ ಯುವತಿಯ ಕಾರಣವೇ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದೆ ಎಂದು ಹೇಳಲಾಗುತ್ತಿದೆ.


ವರದಿಯೊಂದರ ಪ್ರಕಾರ, ಸಸ್ತನಿಗಳ ವರ್ಗಕ್ಕೆ ಸೇರಿರುವ ಪ್ರಾಣಿಯಾದ ಬಾವಲಿ ಮತ್ತು ಅದರ ಸೂಪ್ ಸೇವನೆಯಿಂದ ಈ ಯುವತಿಯ ದೇಹದಲ್ಲಿ ಕೊರೊನಾ ವೈರಸ್ ಅಭಿವೃದ್ಧಿ ಹೊಂದಿದೆ ಹಾಗೂ ಅವಳಿಂದಲೇ ಈ ವೈರಸ್ ಇತರರಿಗೆ ಅಂಟಿಕೊಂಡಿದೆ ಎಂದು ಹೇಳಲಾಗುತ್ತಿದೆ.


ಈ ಕುರಿತು ನಡೆಸಲಾದ ಒಂದು ಸಂಶೋಧನೆಯ ಪ್ರಕಾರ ಕೊರೊನಾ ವೈರಸ್ (2019-NCOV)ನಿಂದ ಹರಡುವ ಮಾರಕ ಸಾಂಕ್ರಾಮಿಕ ರೋಗಕ್ಕೆ ಹಾವು ಮತ್ತು ಬಾವಲಿಗಳು ಮುಖ್ಯ ಕಾರಣ ಎನ್ನಲಾಗಿದೆ. ಈ ವೈರಸ್ ಸೋಂಕಿಗೆ ಒಳಗಾದ ರೋಗಿಗಳು ಸಗಟು ಮಾರುಕಟ್ಟೆಯಲ್ಲಿ ವನ್ಯಜೀವಿಗಳ ಸಂಪರ್ಕದಲ್ಲಿದ್ದರು ಎಂದು ಸಂಶೋಧನೆ ಹೇಳಿದೆ. ಈ ಸಗಟು ಮಾರುಕಟ್ಟೆಯಲ್ಲಿ ಸಮುದ್ರದ ಆಹಾರ, ಕೋಳಿ, ಹಾವು, ಬಾವಲಿ ಮತ್ತು ಕೃಷಿಗೆ ಬಳಸುವ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇಲ್ಲಿಯೇ ರೋಗಿಗಳು ಈ ವೈರಸ್ ಗೆ ತುತ್ತಾಗಿದ್ದಾರೆ ಎಂದು ಹೇಳಿದೆ. WHO ಈ ವೈರಸ್ ಗೆ 2019-NCOV ಎಂದು ನಾಮಕರಣ ಮಾಡಿದೆ.


2019-NCOV ಬಾವಲಿಗಳು ಮತ್ತು ಇತರೆ ಕೊರೋನರಿ ವೈರಸ್ ಗಳ ಸಂಯೋಜನೆಯಿಂದ ನಿರ್ಮಾಣವಾದ ನಿಘೂಢ ವೈರಸ್ ನಂತ ಕಾಣಿಸುತ್ತದೆ ಎಂದು ತನಿಕಾಧಿಕಾರಿಗಳು ತೀರ್ಮಾನಕ್ಕೆ ಬಂದಿದ್ದಾರೆ. ಅಂತಿಮವಾಗಿ ಸಂಶೋಧನಾ ತಂಡವು 2019-NCOV ಮಾನವರಲ್ಲಿ ಸೋಂಕಿಗೆ ಕಾರಣವಾಗುವ ಓದಲು ಹಾವುಗಳ ದೇಹದಲ್ಲಿ ವಾಸಿಸ್ತುತದೆ ಎಂಬುದಕ್ಕೆ ಸಾಕ್ಷಾಧಾರಗಳನ್ನು ಬಹಿರಂಗಪಡಿಸಿದೆ. ಬಳಿಕ ವೈರಲ್ ರಿಸೆಪ್ಟರ್, ಬೈಂಡಿಂಗ್ ಪ್ರೋಟೀನ್‌ನೊಳಗಿನ ಮರುಸಂಯೋಜನೆಯಿಂದ ಹಾವಿನಿಂದ ಮನುಷ್ಯನಿಗೆ ಪರಿವರ್ತನೆಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಜರ್ನಲ್ ಆಫ್  ಮೆಡಿಕಲ್ ವೈರಾಲಾಜಿಯಲ್ಲಿ ಪ್ರಕಟಿಸಲಾದ ಸಂಶೋಧನಾ ವರದಿ ಹೇಳಿದೆ.