Pakistan Schoolgirls Fight: ಇತ್ತೀಚಿನ ದಿನಗಳ್ಲಿ ಶಾಲೆ-ಕಾಲೇಜುಗಳಲ್ಲಿ ನಡೆಯಬಾರದಂತಹ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಇದಕ್ಕೆ ಪುರಾವೆ ಎಂಬಂತೆ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ. ಇದೀಗ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಈ ಕೃತ್ಯಕ್ಕೆ ಕಾರಣ ಏನೆಂದು ತಿಳಿದರೆ ಶಾಕ್ ಆಗೋದ ಖಂಡಿತ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸೀಟ್​ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣ: ಬ್ರಿಟನ್​ ಪ್ರಧಾನಿ ರಿಷಿ ಸುನಕ್‍ಗೆ ದಂಡ..!


ಪಾಕಿಸ್ತಾನದ ಲಾಹೋರ್‌ನ ಉನ್ನತ ಶಾಲೆಯೊಂದರಲ್ಲಿ ನಾಲ್ವರು ಬಾಲಕಿಯರ ಗುಂಪು ತಮ್ಮ ಸಹಪಾಠಿಗೆ ಮಾದಕ ದ್ರವ್ಯ ಸೇವಿಸುವಂತೆ ಹೇಳಿದ್ದಾರೆ. ಆದರೆ ಆ ಬಾಲಕಿ ಅದನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಬಾಲಕಿಯರ ಗುಂಪು ಆಕೆಯನ್ನು ನಿಂದಿಸಿ ಚಿತ್ರಹಿಂಸೆ ನೀಡಿದ್ದಾರೆ. ಪಾಕಿಸ್ತಾನದ ಅಮೇರಿಕನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ದೇಶವನ್ನೇ ಬೆಚ್ಚಿಬೀಳಿಸಿದೆ.


ಈ ಗುಂಪು ಬಾಲಕಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ನಾಲ್ವರು ಹುಡುಗಿಯರ ಗುಂಪು, ಒಬ್ಬ ಹುಡುಗಿಯ ಜುಟ್ಟು ಹಿಡಿದು ಎಳೆದು ನೆಲಕ್ಕೆ ಬಡಿಯುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ಇಷ್ಟೊಂದು ಚಿತ್ರಹಿಂಸೆ ನೀಡಿದ ಬಳಿಕವೂ ಆ ಬಾಲಕಿಯ ಮುಖಕ್ಕೆ ಒದೆಯುತ್ತಾರೆ, ಕಪಾಳಮೋಕ್ಷ ಮಾಡುತ್ತಾರೆ ಬಳಿಕ ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಾರೆ.


ಸಂತ್ರಸ್ತ ಬಾಲಕಿಯ ತಂದೆ ಇಮ್ರಾನ್ ಯೂನಸ್ ಪೊಲೀಸ್ ದೂರು ದಾಖಲಿಸಿದ್ದಾರೆ. ಇವರು ದೂರು ನೀಡಿರುವ ಪ್ರಕಾರ, ಈ ಗುಂಪಿನಲ್ಲಿದ್ದ ಜನ್ನತ್ ಎಂಬ ಬಾಲಕಿ ಮಾದಕ ವ್ಯಸನಿಯಾಗಿದ್ದು, ಸಂತ್ರಸ್ತ ಬಾಲಕಿ ಅವರ ಜೊತೆ ಸೇರಬೇಕೆಂದು ಸೂಚಿಸಿದ್ದರು. ಆದರೆ ಈಕೆ ಅದನ್ನು ನಿರಾಕರಿಸಿದ್ದಾಳೆ. ಬಳಿಕ ಸಂತ್ರಸ್ತೆ ಘಟನೆಯ ಬಗ್ಗೆ ತನ್ನ ತಂದೆಗೆ ತಿಳಿಸಿದ್ದು, ಅವರು ಟಿ ಜನ್ನತ್ ಅವರ ಪೋಷಕರಿಗೆ ಮಾಹಿತಿ ನೀಡಿದ್ದು, ವೀಡಿಯೊಗಳನ್ನು ಸಹ ಕಳುಹಿಸಿದ್ದಾರೆ.


ಉಮೈಮಾ ಮಲಿಕ್ ಮತ್ತು ಇತರ ಇಬ್ಬರು ಬಾಲಕಿಯರೊಂದಿಗೆ ಸೇರಿ ಶಾಲೆಯ ಕ್ಯಾಂಟೀನ್‌ನಲ್ಲಿ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿ ಅವಮಾನಿಸಿದ್ದಾರೆ. ಶಂಕಿತರಲ್ಲಿ ಒಬ್ಬರು ಬಾಕ್ಸರ್ ಎಂದು ಹೇಳಲಾಗಿದೆ. ವೀಡಿಯೊದಲ್ಲಿ, ಅವಳು ಸಂತ್ರಸ್ತೆ ಮುಖಕ್ಕೆ ಹೊಡೆಯುವುದನ್ನು ನೋಡಬಹುದು. ಅದೇ ಸಂದರ್ಭದಲ್ಲಿ ಇನ್ನೊಬ್ಬ ಹುಡುಗಿ ಅವಳಿಗೆ ಒದೆಯುತ್ತಾಳೆ. "ಕ್ಷಮೆ ಹೇಳು. ಯಾರೂ ನಿನ್ನ ಹಿಂದೆ ಬರುವುದಿಲ್ಲ" ಎಂದು ಸಂತ್ರಸ್ತೆಯನ್ನು ಅವಮಾನಿಸುವಾಗ ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು.


ಇದನ್ನೂ ಓದಿ: 12,000 ನೌಕರರನ್ನು ಕೆಲಸದಿಂದ ವಜಾಗೊಳಿಸಿದ ಗೂಗಲ್


ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಈ ವಿದ್ಯಾರ್ಥಿಗಳ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.